Tumakuru: ಪಾವಗಡ, ಶಂಕಿತ ನಕ್ಸಲ್ ಗಾಗಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ; ಡ್ರೋಣ್ ಮೂಲಕ ಶೋಧ

Published : Sep 13, 2026, 03:52 PM IST
Tumakuru Police

ಸಾರಾಂಶ

ಪಾವಗಡ ತಾಲ್ಲೂಕಿನ ಕನಿಕಲಬಂಡೆ ಬೆಟ್ಟಗಳಲ್ಲಿ ನಕ್ಸಲ್ ಶಂಕಿತ ಉಪ್ಪಾರ ವೆಂಕಟೇಶ್ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. 120ಕ್ಕೂ ಹೆಚ್ಚು ಸಿಬ್ಬಂದಿಯ ವಿಶೇಷ ತಂಡಗಳು ಡ್ರೋಣ್ ಕ್ಯಾಮೆರಾ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶೋಧ ನಡೆಸುತ್ತಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ತುಮಕೂರು: ಪಾವಗಡ, ತಾಲ್ಲೂಕಿನ ಕನಿಕಲಬಂಡೆ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ನಕ್ಸಲ್ ಶಂಕಿತ ಉಪ್ಪಾರ ವೆಂಕಟೇಶ್ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಪಾವಗಡದಲ್ಲಿ ನಕ್ಸಲ್ ಶಂಕೆ: ಬೆಟ್ಟಗಳಲ್ಲಿ ಪೊಲೀಸರ ಮಹಾ ಶೋಧ

ತುಮಕೂರು ಹೆಚ್ಚುವರಿ ಎಸ್‌ಪಿ ಗೋಪಾಲ್ ಮತ್ತು ಮಧುಗಿರಿ ಡಿವೈಎಸ್‌ಪಿ ಮಂಜುನಾಥ್ ನೇತೃತ್ವದಲ್ಲಿ 120ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ 5 ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. 10 ಪೊಲೀಸ್ ಜೀಪ್, ವ್ಯಾನ್ ಹಾಗೂ ಒಂದು ಖಾಸಗಿ ಬಸ್‌ನಲ್ಲಿ ತೆರಳಿದ ಪೊಲೀಸರು, ಎಕೆ-47 ಸೇರಿದಂತೆ ಇತರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ಕಾರ್ಯಾಚರಣೆ ನಡೆಸಿದ್ದಾರೆ.

ತಾಲೂಕಿನ ಪಳವಳ್ಳಿ ಕಡಪಲಕೆರೆ, ವೀರಮ್ಮನಹಳ್ಳಿ, ಗಂಗಾಸಾಗರ, ಅಚ್ಚಮ್ಮನಹಳ್ಳಿ, ಈರಮ್ಮನಹಳ್ಳಿ ಹಾಗೂ ಕನಿಕಲಬಂಡೆ ಸುತ್ತಮುತ್ತಲಿನ ಸುಮಾರು 12 ಕಿ.ಮೀ ವ್ಯಾಪ್ತಿಯ ಬೆಟ್ಟಗುಡ್ಡಗಳಲ್ಲಿ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಸತತ 5 ಗಂಟೆಗಳ ಕಾಲ ಕೂಂಬಿಂಗ್ ನಡೆಸಿ ಶೋಧ ನಡೆಸಲಾಯಿತು.

ಬಳಿಕ ವಿಶೇಷ ಪಡೆಯ 120 ಮಂದಿ ತಂಡದೊಂದಿಗೆ ಡ್ರೋಣ್ ಕ್ಯಾಮೆರಾ ಮೂಲಕವೂ ಸರ್ಚ್ ಕಾರ್ಯಾಚರಣೆ ಮುಂದುವರಿಸಲಾಗಿದೆ. 5-6 ಭಾರಿ ವಾಹನಗಳಲ್ಲಿ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೂ ಶಂಕಿತ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ನಿರಂತರ ಕಾರ್ಯಾಚರಣೆಗಾಗಿ ವಿಶೇಷ ತಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ಪ್ರಮುಖ ಸಂಚಾರ ಮಾರ್ಗ ಬದಲಾವಣೆ, ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ ಆರಂಭ
Bengaluru first train: ಬೆಂಗಳೂರು ಮೊದಲ ರೈಲು ಕಂಡಿದ್ದು ಯಾವಾಗ ಗೊತ್ತಾ? ಈ ರೈಲು ಎಲ್ಲಿಂದ ಎಲ್ಲಿಗೆ ಓಡಿತ್ತು?