ಬೆಂಗಳೂರಿನಲ್ಲಿ ಪ್ರಮುಖ ಸಂಚಾರ ಮಾರ್ಗ ಬದಲಾವಣೆ, ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ ಆರಂಭ

Published : Sep 13, 2026, 03:02 PM IST
bengaluru traffic

ಸಾರಾಂಶ

ಬೆಂಗಳೂರಿನ ಪ್ರಮುಖ ರಸ್ತೆಯಲ್ಲೇ ಅಂಡರ್ ಪಾಸ್ ಕಾಮಗಾರಿ ಆರಂಭಗೊಂಡಿದೆ. ಪರಿಣಾಮ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸದ್ಯ 2 ದಿನ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲ. ಆದರೆ ಮಂಗಳವಾರದಿಂದ ಬೆಂಗಳೂರು ಜನರು ಹೈರಾಣಾಗಲಿದ್ದಾರೆ.

ಬೆಂಗಳೂರು (ಸೆ.13) ಗಣೇಶ ಹಬ್ಬ ಹಿನ್ನೆಲೆಯಲ್ಲಿ ಸದ್ಯ ಬೆಂಗಳೂರಿನಲ್ಲಿರುವ ಬಹುತೇಕರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರು ಖಾಲಿ ಖಾಲಿ ಕಾಣಿಸುತ್ತಿದೆ. ಸದ್ಯ ಟ್ರಾಫಿಕ್ ಸಮಸ್ಯೆ ಇಲ್ಲದೆ ಪ್ರಯಾಣ ಮಾಡಬಹುದು. ಆದರೆ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಅಂಡರ್ ಪಾಸ್ ಕಾಮಾಗಾರಿ ಆರಂಭಿಸಲಾಗಿದೆ. ಹೀಗಾಗಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಸದ್ಯ ರಜಾ ದಿನ ಕಾರಣ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮಂಗಳವಾರದಿಂದ ಈ ಅಂಡರ್ ಪಾಸ್ ಕಾಮಗಾರಿ ಜನರನ್ನು ಹೈರಾಣು ಮಾಡಲಿದೆ. ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿನ ಸಂಚಾರದ ದಿಕ್ಕಿನ ಕೆಲ ಬದಲಾವಣೆ ಮಾಡಲಾಗಿದೆ.

ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬರವು ಟೋಲ್ ಸಮೀಪದಲ್ಲಿ ಸಾದಹಳ್ಳಿ ಅಂಡರ್ ಪಾಸ್ ಕಾಮಗಾರಿ ಆರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ಅಂಡರ್ ಪಾಸ್ ಕಾಮಗಾರಿಗಾಗಿ ದೊಡ್ಡ ಯಂತ್ರೋಪಕರಣಗಳ ಮೂಲಕ ಕಾಮಗಾರಿ ಆರಂಭಿಸಿದೆ. ಹೀಗಾಗಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ಸಾದಹಳ್ಳಿ ಅಂಡರ್ ಪಾಸ್ ಕಾಮಾಗಾರಿ ಕುರಿತು ಕೆಲಸ ಆರಂಭಗೊಂಡಿತ್ತು. ಆದರೆ ಹಲವು ಕಾರಣಗಳಿಂದ ಕಾಮಾಗಾರಿ ವಿಳಂಬವಾಗಿ ಸಾಗಿತ್ತು. ಹೀಗಾಗಿ ಈ ಭಾಗದಲ್ಲಿ ಸಂಚರಿಸುವ ಸ್ಛಳೀಯರು ಸೇರಿದಂತೆ ಇತರರಿಗೆ ತೀವ್ರ ಸಮಸ್ಯೆಯಾಗಿ ಪರಿಣಿಮಿಸಿತ್ತು. ಇದೀಗ ಕಾಮಾಗಾರಿ ಮತ್ತೆ ಆರಂಭಗೊಂಡಿದ್ದು, ವೇಗ ಪಡೆದುಕೊಂಡಿದೆ. ಹೀಗಾಗಿ ಸ್ಛಳೀಯರ ಕೆಲ ದಿನಗಳಲ್ಲೇ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ ಅನ್ನೋ ವಿಶ್ವಾಸದಲ್ಲಿದ್ದಾರೆ.

ಸಂಚಾರ ದಿಕ್ಕು ಬದಲಾವಣೆ, ಟ್ರಾಫಿಕ್ ಸಮಸ್ಯೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದೇವನಹಳ್ಳಿ ಕಡೆ ಪ್ರಯಾಣಿಸುವ ಜನರು ಈ ಅಂಡರ್ ಪಾಸ್ ಕಾಮಾಗಾರಿಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಅಂಡರ್ ಪಾಸ್ ಕಾಮಾಗಾರಿಗಿಂತ ಕೆಲ ಮೀಟರ್ ಮೊದಲು ತಡೆ ಗೋಡೆಗಳನ್ನು ಹಾಕಲಾಗಿದೆ. ಸೂಚನಾ ಫಲಕಗಳನ್ನು ಹಾಕಲಾಗಿದೆ. ಹೀಗಾಗಿ ಚಾಲಕರು ಈ ಸೂಚನೆ ಪಾಲಿಸಿ ಸಾಗಬೇಕಿದೆ. ಸಂಚಾರ ದಿಕ್ಕು ಬದಲಿಸಿದ ಕಾರಣ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚಿದೆ. ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆ ತಗ್ಗಿಸಲು NHAI ಹಲವು ಕಡೆಗಳಲ್ಲಿ ಮಾರ್ಗ ಬದಲಾವಣೆ ಸೂಚನಾ ಫಲಕ ಅಳವಡಿಸಿದ್ದಾರೆ.

ಸಾದಹಳ್ಳಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಕೂಗಳತೆ ದೂರದಲ್ಲಿ ಹೊಸ ಮಾಲ್ ಆರಂಭಗೊಳ್ಳುತ್ತಿದೆ. ಈಗಾಗಲೇ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಮಾಲ್ ಆರಂಭಗೊಳ್ಳಲಿದೆ. ಇದರಿಂದ ಈ ಭಾಗದಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಹೆಚ್ಚಾಗಲಿದೆ. ಇದೀಗ NHAI ಅಧಿಕಾರಿಗಳು ಕಾಮಗಾರಿ ಕುರಿತು ಸೂಚನೆ ನೀಡಿದ್ದಾರೆ. ಇದೇ ವೇಳೆ ಈ ಭಾಗದಲ್ಲಿ ಸಂಚರಿಸುವ ಮಂದಿ ಹೆಚ್ಚುವರಿ ಸಮಯ ಮೀಸಲಿಡಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

PREV
Read more Articles on
click me!

Recommended Stories

Bengaluru first train: ಬೆಂಗಳೂರು ಮೊದಲ ರೈಲು ಕಂಡಿದ್ದು ಯಾವಾಗ ಗೊತ್ತಾ? ಈ ರೈಲು ಎಲ್ಲಿಂದ ಎಲ್ಲಿಗೆ ಓಡಿತ್ತು?
ಬೆಂಗಳೂರಿನ ಸರ್ಕಾರಿ ಶಾಲೆ ಸಮಯ ಬದಲಾವಣೆ ಸಾಧ್ಯತೆ: ಸಚಿವರಿಗೆ ಶಿಕ್ಷಕರ ಮನವಿ ಸಲ್ಲಿಕೆ