ಬೋರ್‌ವೆಲ್‌ ದುರಸ್ತಿಗೆ 1.45 ಕೋಟಿ ವೆಚ್ಚ ಇಟ್ಟ ತುಮಕೂರು ಪಾಲಿಕೆ!

By Gowthami K  |  First Published Aug 8, 2022, 10:13 PM IST

ತುಮಕೂರು ಮಹಾನಗರ ಪಾಲಿಕೆ ಬೋರ್‌ವೆಲ್‌ ದುರಸ್ತಿಗೆ ಇಟ್ಟಿದ್ದು 1.45 ಕೋಟಿ. ಬುಗುಡನಹಳ್ಳಿಯಿಂದ ಹೇಮಾವತಿ ನೀರು ಸರಬರಾಜಾಗುತ್ತಿದ್ದರೂ ಇಷ್ಟು ಹಣ ವ್ಯಯಿಸಿರುವುದು ಚರ್ಚೆಗೆ ಗ್ರಾಸ. ಪಾಲಿಕೆ ವ್ಯಾಪ್ತಿಯಲ್ಲಿ 803 ಬೋರ್‌ವೆಲ್‌.


ತುಮಕೂರು (ಆ.8): ತುಮಕೂರು ನಗರಕ್ಕೆ ಬುಗುಡನಹಳ್ಳಿಯಿಂದ ನಿರಂತರವಾಗಿ ಹೇಮಾವತಿ ನೀರು ಸರಬರಾಜಾಗುತ್ತಿರುವ ಹೊತ್ತಿನಲ್ಲೂ, ತುಮಕೂರು ಮಹಾನಗರ ಪಾಲಿಕೆಯು ತನ್ನ ಸುಪರ್ದಿನಲ್ಲಿರುವ ಬೋರ್‌ವೆಲ್‌ಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 1 ಕೋಟಿ 44 ಲಕ್ಷದ 54,900 ರು.ಗಳನ್ನು ವೆಚ್ಚ ಮಾಡಿರುವ ಸಂಗತಿ ಆರ್‌ಟಿಐ ಅರ್ಜಿಯಿಂದ ಬಹಿರಂಗವಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.  2020-21ನೇ ಸಾಲಿನಲ್ಲಿ ಬೋರ್‌ವೆಲ್‌Ü, ಪಂಪ್‌ ಮೋಟಾರ್‌ಗಳ ದುರಸ್ತಿ ಮತ್ತು ನಿರ್ವಹಣೆಗಾಗಿ 75,02,495 ರು. ಹಾಗೂ 2021-22ನೇ ಸಾಲಿನಲ್ಲಿ 69,52,405 ರು. ಸೇರಿ ಒಟ್ಟು 1,44,54,900 ರು.ಗಳನ್ನು ವೆಚ್ಚ ಮಾಡಿರುವುದಾಗಿ ತುಮಕೂರು ಮಹಾನಗರ ಪಾಲಿಕೆಯು ನಗರದ ಸಾಮಾಜಿಕ ಕಾರ್ಯಕರ್ತ ಆರ್‌.ವಿಶ್ವನಾಥನ್‌ ಅವರು ಸಲ್ಲಿಸಿದ್ದ ಆರ್‌ಟಿಐಗೆ ನೀಡಿರುವ ಉತ್ತರದಲ್ಲಿ ತಿಳಿಸಿದೆ. ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಪಾಲಿಕೆಗೆ ಸೇರಿದ ಒಟ್ಟು 803 ಬೋರ್‌ವೆಲ್‌ಗಳಿವೆ. ಇವುಗಳಲ್ಲಿ 104 ಬೋರ್‌ವೆಲ್‌ಗಳು ಬಳಕೆಯಲ್ಲಿಲ್ಲದೆ ನಿರುಪಯುಕ್ತವಾಗಿವೆ. ಮಿಕ್ಕ 699 ಬೋರ್‌ವೆಲ್‌ಗಳು ಚಾಲ್ತಿಯಲ್ಲಿರುವುದಾಗಿ ಪಾಲಿಕೆಯು ವಿಶ್ವನಾಥನ್‌ಗೆ ಉತ್ತರಿಸಿದೆ. ಒಟ್ಟು 803 ಬೋರ್‌ಗಳ ಪೈಕಿ ನಗರದ 23 ನೇ ವಾರ್ಡ್‌ನಲ್ಲಿ ಅತಿಹೆಚ್ಚು ಅಂದರೆ ಒಟ್ಟು 35 ಬೋರ್‌ಗಳಿವೆ.

5 ನೇ ವಾರ್ಡ್‌ನಲ್ಲಿ ಅತಿ ಕಡಿಮೆ ಅಂದರೆ ಕೇವಲ 8 ಬೋರ್‌ಗಳಿವೆ. ಮಿಕ್ಕಂತೆ 1 ನೇ ವಾರ್ಡ್‌ನಲ್ಲಿ 33 , 2 ನೇ ವಾರ್ಡ್‌ನಲ್ಲಿ 32, 3 ನೇ ವಾರ್ಡ್‌ನಲ್ಲಿ 34, 12 ನೇ ವಾರ್ಡ್‌ನಲ್ಲಿ 32, 18 ನೇ ವಾರ್ಡ್‌ನಲ್ಲಿ 34, 20 ನೇ ವಾರ್ಡ್‌ನಲ್ಲಿ 30, 32 ನೇ ವಾರ್ಡ್‌ನಲ್ಲಿ 30 ಬೋರ್‌ವೆಲ್‌ಗಳಿವೆ. ಉಳಿದ ವಾರ್ಡ್‌ಗಳಲ್ಲಿ ಇದಕ್ಕಿಂತ ಕಡಿಮೆ ಇದೆ.ಬಳಕೆಯಲ್ಲಿಲ್ಲದ 104 ಬೋರ್‌ವೆಲ್‌ಗಳ ಪೈಕಿ ಅತಿಹೆಚ್ಚು ಅಂದರೆ 11 ಬೋರ್‌ಗಳು 27 ನೇ ವಾರ್ಡ್‌ನಲ್ಲಿವೆ.

Tap to resize

Latest Videos

21 ಮತ್ತು 23 ನೇ ವಾರ್ಡ್‌ನಲ್ಲಿ ತಲಾ 9 ಬೋರ್‌ ಗಳು ನಿರುಪಯುಕ್ತವಾಗಿವೆ. 29 ನೇ ವಾರ್ಡ್‌ನಲ್ಲಿ 7 ಬೋರ್‌ಗಳು, 12, 16, ಮತ್ತು 22 ನೇ ವಾರ್ಡ್‌ಗಳಲ್ಲಿ ತಲಾ 6 ಬೋರ್‌ಗಳು ಬಳಕೆಯಲ್ಲಿಲ್ಲ. ಉಳಿದ ವಾರ್ಡ್‌ಗಳಲ್ಲಿ ಇದಕ್ಕಿಂತ ಕಡಿಮೆ ಸಂಖ್ಯೆಯ ಬೋರ್‌ಗಳು ನಿರುಪಯುಕ್ತವಾಗಿವೆ. ಚಾಲ್ತಿಯಲ್ಲಿರುವ 699 ಬೋರ್‌ಗಳ ಪೈಕಿ 1 ನೇ ವಾರ್ಡ್‌ನಲ್ಲಿ ಎಲ್ಲ 33 ಬೋರ್‌ಗಳು, 13 ನೇ ವಾರ್ಡ್‌ನಲ್ಲಿ ಎಲ್ಲ 15 ಬೋರ್‌ಗಳು, 26 ನೇ ವಾರ್ಡ್‌ನಲ್ಲಿ ಎಲ್ಲ 14 ಬೋರ್‌ಗಳು, 32 ನೇ ವಾರ್ಡ್‌ನಲ್ಲಿ ಎಲ್ಲ 30 ಬೋರ್‌ಗಳು ಚಾಲ್ತಿಯಲ್ಲಿವೆ ಎಂಬ ಅಂಕಿ-ಅಂಶಗಳನ್ನು ಮಹಾನಗರ ಪಾಲಿಕೆಯು ಆರ್‌.ವಿಶ್ವನಾಥನ್‌ ಅವರಿಗೆ ನೀಡಿರುವ ಮಾಹಿತಿಯಲ್ಲಿ ಒದಗಿಸಿದೆ.

ಹಾವಿನ ಜೊತೆ 4 ದಿನ ಕಳೆದ ಬೋರ್‌ವೆಲ್‌ಗೆ ಬಿದ್ದ ಬಾಲಕ

ಪ್ರಸ್ತುತ ತುಮಕೂರು ನಗರದ ಎಲ್ಲ 35 ವಾರ್ಡ್‌ಗಳಿಗೂ ಬಹುತೇಕ ಕುಡಿಯುವ ನೀರಿಗಾಗಿ ಹೇಮಾವತಿ ನೀರು ಸರಬರಾಜಾಗುತ್ತಿದೆ. ಅದೂ ಅಲ್ಲದೆ, ನಗರದ ಕೆಲವೆಡೆ 24/7 ವ್ಯವಸ್ಥೆಯ ನೀರು ಪೂರೈಕೆಗೆ ಚಾಲನೆ ನೀಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಪಾಲಿಕೆ ಸುಪರ್ದಿನ ಬೋರ್‌ವೆಲ್‌ಗಳ ದುರಸ್ತಿ-ನಿರ್ವಹಣೆ- ಇದಕ್ಕಾಗಿ ಲಕ್ಷಾಂತರ ರು. ವೆಚ್ಚ ಎಷ್ಟುಪಾರದರ್ಶಕವಾಗಿದೆ? ಎಂಬುದೀಗ ಸಾರ್ವಜನಿಕ ಚರ್ಚೆಗೆ ಎಡೆಮಾಡಿದೆ.

ಬೋರ್‌ವೆಲ್‌ಗೆ ಬಿದ್ದು 104 ಗಂಟೆ ಬಳಿಕವೂ ಸಾವು ಗೆದ್ದ ಬಾಲಕ!

ಬೋರ್‌ವೆಲ್‌ ನಿರ್ವಹಣೆ, ದುರಸ್ತಿಗೆ ಇಬ್ಬರಿಗೆ ಗುತ್ತಿಗೆ: ಪಾಲಿಕೆ ಸುಪರ್ದಿನ ಬೋರ್‌ವೆಲ್‌ಗಳ ದುರಸ್ತಿ ಹಾಗೂ ನಿರ್ವಹಣೆಯ ಗುತ್ತಿಗೆಯನ್ನು ಪಾಲಿಕೆಯು ಇಬ್ಬರಿಗೆ ನೀಡಿದೆ. ಅವರೆಂದರೆ ಟಿ.ಆರ್‌.ಮುನೇಶ್‌, ಬಿ.ಎ.ಗುಡಿಪಾಳ್ಯ, ಹನುಮಂತಪುರ, ತುಮಕೂರು ಮತ್ತು ನಾಗರಾಜು, ವಿನಾಯಕ ಎಲೆಕ್ಟ್ರಿಕಲ್ಸ್‌, ಕುಣಿಗಲ್‌ ರಸ್ತೆ, ತುಮಕೂರು ಎಂದು ಪಾಲಿಕೆ ಮಾಹಿತಿ ನೀಡಿದೆ. ಮಹಾನಗರ ಪಾಲಿಕೆಯ ಸಹಾಯಕ ಅಭಿಯಂತರರಾದ ಸುಧೀಂದ್ರ ನಾಯ್‌್ಕ, ವಿನಾಯಕ ಭರಣಿ ಹಾಗೂ ಕಿರಿಯ ಅಭಿಯಂತರ ರಾಠೋಡ್‌ ನಾಯ್‌್ಕ ಅವರು ಪಾಲಿಕೆಯ ಸುಪರ್ದಿನ ಬೋರ್‌ಗಳ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದಾರೆಂದೂ ಸದರಿ ಉತ್ತರದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಎಇಇ ತಿಳಿಸಿದ್ದಾರೆ.

click me!