ರಾಯಚೂರು ತಾ. ತುರುಕನಡೋಣಿ ಗ್ರಾಮದ 9 ವರ್ಷದ ಬಾಲಕಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಜಯಶೀಶಾ ಜೀವ ಉಳಿಸಲು ತಂದೆ-ತಾಯಿ ಪರದಾಡುತ್ತಿದ್ದಾರೆ. ಬ್ಯಾಂಕ್ ಖಾತೆಗೆ ಹಣ ಹಾಕಿ ಜೀವ ಉಳಿಸುವಂತೆ ಮನವಿ ಮಾಡಲಾಗಿದೆ.
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್,
ರಾಯಚೂರು (ಆ.8): ಆ ಬಾಲಕಿ ಹತ್ತಾರು ಕನಸು ಕಂಡು ಶಾಲೆಗೆ ಸೇರಿದಳು. ಎರಡು ವರ್ಷ ನಲಿಯುತ್ತಾ ಸ್ನೇಹಿತರ ಜೊತೆಗೆ ಶಾಲೆಗೆ ಹೋಗಿದಳು. ಕೊರೊನಾ ಬಂತು ಅಂತ ಮನೆಯಲ್ಲಿ ಕುಳಿತ ಬಾಲಕಿಗೆ ಈಗ ಶಾಲೆಗೆ ಹೋಗುವ ಆಸೆಯಿದೆ. ಆದ್ರೆ ಮಗುವಿಗೆ ಮಾತ್ರ ಶಾಲೆಗೆ ಹೋಗಲು ಆಗುತ್ತಿಲ್ಲ. ಆದ್ರೂ ಸಹ ಹೆಣ್ಣು ಮಗು ನಿತ್ಯ ಮೂತ್ರ ಚೀಲ ಹಿಡಿದು ಶಾಲೆಗೆ ಹೋಗುತ್ತಿದ್ದಾಳೆ. ಬಾಲಕಿ ಶಿಕ್ಷಣದ ಆಸಕ್ತಿ ಕಂಡು ಎಲ್ಲರೂ ಬೆರಗಾಗಿ ನೋಡುತ್ತಿದ್ದಾರೆ. ಜೊತೆಗೆ ಬಾಲಕಿಗೆ ಇಂತಹ ಪರಿಸ್ಥಿತಿ ಬರಬಾರದು ಅಂತ ಬಾಲಕಿ ಇಡೀ ಗ್ರಾಮಸ್ಥರು ಮಾತನಾಡುತ್ತಿದ್ದಾರೆ. ರಾಯಚೂರು ತಾಲೂಕಿನ ತುರುಕನಡೋಣಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಬಾಲಕಿ ಜಯಶೀಶಾಗೆ ಕಿಡ್ನಿ ಸಮಸ್ಯೆ ಉಂಟಾಗಿದೆ. ಈ ಬಾಲಕಿಗೆ ಕಳೆದ 2 ವರ್ಷಗಳಿಂದ ಕಿಡ್ನಿ ಸಮಸ್ಯೆಯಾಗಿ ವಿದ್ಯಾರ್ಥಿನಿ ಜಯಶೀಶಾ ನಿತ್ಯ ನರಳಾಟ ನಡೆಸಿದ್ದಾಳೆ. ಮನೆಯಲ್ಲಿ ಬಡತನ ಇದ್ರೂ ತಂದೆ-ತಾಯಿ ಕೂಲಿ ಕೆಲಸ ಮಾಡಿ ಮಗಳ ಜೀವ ಉಳಿಸಲು ರಾಯಚೂರು, ಬಳ್ಳಾರಿ ಹಾಗೂ ಬೆಂಗಳೂರಿನ ಹತ್ತಾರು ಆಸ್ಪತ್ರೆಗಳಿಗೆ ಅಲೆದಾಟ ಮಾಡಿ ಸುಸ್ತಾಗಿ ಹೋಗಿದ್ದಾರೆ. ಮಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸಬೇಕೆಂದು 4-5 ಲಕ್ಷ ರೂಪಾಯಿ ಸುರಿದರೂ ಬಾಲಕಿಗೆ ಕಿಡ್ನಿ ಸಮಸ್ಯೆ ಮಾತ್ರ ಕಡಿಮೆ ಆಗಿಲ್ಲ.
undefined
ಹೀಗಾಗಿ 9 ವರ್ಷದ ಬಾಲಕಿ ಜಯಶೀಶಾಳ ಒಂದು ಕಿಡ್ನಿ ಸಂಪೂರ್ಣವಾಗಿ ಹಾಳಾಗಿದ್ದು, ಬಾಲಕಿಯ ಜೀವ ಉಳಿಸಲು ವೈದ್ಯರು 22 ಶಸ್ತ್ರಚಿಕಿತ್ಸೆ ಮಾಡಿ 2-3 ಬಾರಿ ಡೈಯಾಲಿಸಿಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಾಲಕಿಗೆ ಕಿಡ್ನಿ ಅಳವಡಿಕೆ ಮಾಡಲು 15-16 ಲಕ್ಷ ರೂಪಾಯಿ ಬೇಕಾಗಬಹುದು ಅಂತ ಬೆಂಗಳೂರಿನ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಮೊದಲ್ಲೇ ಬಡತನದಲ್ಲಿ ಇರುವ ಬಾಲಕಿಯ ಪೋಷಕರು ದಿಕ್ಕೂ ಕಾಣದಂತೆ ಕಂಗಾಲಾಗಿ ಇಡೀ ದೇಶದ ಜನರಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಧನ ಸಹಾಯ ಮಾಡಿ ಮಗಳ ಜೀವ ಉಳಿಸಿ
ರಾಯಚೂರು ತಾಲೂಕಿನ ತುರುಕನಡೋಣಿ ಗ್ರಾಮದ ಮೇಶಕ ಮತ್ತು ಮರಿಯಮ್ಮ ದಂಪತಿಯ ಪುತ್ರಿ ಜಯಶೀಶಾ ಎಂಬ ಬಾಲಕಿ ಎರಡು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ನರಳಾಟ ನಡೆಸಿದ್ದಾಳೆ. ಬಾಲಕಿಗೆ ಓದಬೇಕು ಎಂಬ ಆಸೆಯಿದೆ. ಆದ್ರೆ ಬಾಲಕಿ ಮಾತ್ರ ಶಾಲೆಗೆ ಹೋಗಲು ಆಗುತ್ತಿಲ್ಲ. ಆದ್ರೂ ಬಾಲಕಿ ನಿತ್ಯ ಪಠ್ಯಪುಸ್ತಕದ ಬ್ಯಾಗ್ ಜೊತೆಗೆ ಮೂತ್ರದ ಚೀಲವನ್ನು ಹಿಡಿದುಕೊಂಡು ಶಾಲೆಗೆ ಹೋಗುತ್ತಿದ್ದಾಳೆ. ಅಷ್ಟೇ ಅಲ್ಲದೆ ಬಾಲಕಿ ತನ್ನ ಲಂಗದಲ್ಲಿ ಮೂತ್ರದ ಚೀಲ ಇಟ್ಟುಕೊಂಡು ಎಲ್ಲರಂತೆ ತರಗತಿಯಲ್ಲಿ ಪಾಠ ಕೇಳುತ್ತಾಳೆ. ಬಾಲಕಿಯ ಆರೋಗ್ಯದ ಸ್ಥಿತಿ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದೆ. ಹೀಗಾಗಿ ಇಡೀ ದೇಶದ ಜನರು ತಮಗೆ ಕೈಲಾದ ಸಹಾಯ ಮಾಡಿ ನನ್ನ ಮಗಳ ಜೀವ ಉಳಿಸಿ ಅಂತ ಬಡ ಪೋಷಕರು ಮನವಿ ಮಾಡಿದ್ದಾರೆ.
ಬಾಲಕಿ ಸಹಾಯಕ್ಕೆ ಬಂದ ರಾಯಚೂರು ಬಿಇಒ ಮತ್ತು ಶಿಕ್ಷಕರ ಸಂಘಗಳು:
ಬಾಲಕಿ ಜಯಶೀಶಾ ಕಿಡ್ನಿ ಸಮಸ್ಯೆ ಇದ್ರೂ ಮೂತ್ರ ಚೀಲ ಹಿಡಿದು ನಿತ್ಯ ಶಾಲೆಗೆ ಬರುತ್ತಿದ್ದಾಳೆ. ಅಷ್ಟೇ ಅಲ್ಲದೆ ತರಗತಿಯಲ್ಲಿ ಎಲ್ಲಾ ಮಕ್ಕಳಂತೆ ಪಾಠ ಕೇಳುತ್ತಾಳೆ.ಆದ್ರೆ ಪಾಠ ಕೇಳುವಾಗ ನೋವು ತಡೆಯಲು ಆಗದೇ ತರಗತಿಯಲ್ಲಿ ಕೆಲ ಸಲ ನಿದ್ರೆಗೂ ಜಾರುತ್ತಾಳೆ. ಅಷ್ಟೇ ಅಲ್ಲದೇ ಶಾಲೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿದ್ದಾಗ ಬಾಲಕಿ ಕುಳಿತುಕೊಂಡು ಆಟ ನೋಡುತ್ತಾ ಕುಳಿತಲ್ಲೇ ನರಳಾಟ ನಡೆಸುತ್ತಿರುತ್ತಾಳೆ. ಈ ವಿಚಾರ ತಿಳಿದ ರಾಯಚೂರು ಬಿಇಒ ಕನ್ನಪ್ರಭು ಖುದ್ದು ಶಾಲೆಗೆ ಭೇಟಿ ನೀಡಿ ಬಾಲಕಿಗೆ ವೈಯಕ್ತಿಕವಾಗಿ 50 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ರು. ಬಿಇಒ ಜೊತೆಗೆ ವಿವಿಧ ಶಿಕ್ಷಕರ ಸಂಘಗಳು ಸೇರಿ 2 ಲಕ್ಷ ರೂಪಾಯಿ ಸಹಾಯ ಮಾಡಿ ಬಾಲಕಿ ಜೀವ ಉಳಿಸಲು ಎಲ್ಲರೂ ಕೈಜೋಡಿಸಿ ಅಂತ ಮನವಿ ಮಾಡಿದರು.
ಹೆಲ್ಪ್ ಮಾಡಿ ಬಾಲಕಿಯ ಜೀವ ಉಳಿಸಿ
ಬಾಲಕಿ ಜಯಶೀಶಾ ಪೋಷಕರು ವಾಸ ಮಾಡುವ ಮನೆ ಬಿದ್ದು ಹೋಗಿದೆ. ನಿತ್ಯವೂ ಕೂಲಿ ಕೆಲಸ ಮಾಡಿದ್ರೆ ಮಾತ್ರ ಮನೆಯ ಸಂಸಾರ ನಡೆಯುತ್ತೆ. ಇಂತಹ ಬಡತನದಲ್ಲಿ ಬಾಲಕಿಗೆ ಕಿಡ್ನಿ ಸಮಸ್ಯೆ ಆಗಿದ್ದು, ಬಾಲಕಿ ಜೀವ ಉಳಿಸಿಕೊಳ್ಳಲು ಪೋಷಕರು ಹರಸಾಹಸ ನಡೆಸಿದ್ದಾರೆ. ಪೋಷಕರ ಸಂಕಷ್ಟ ನೋಡಲು ಆಗದೇ ಕೆಲ ಸಂಘ- ಸಂಸ್ಥೆಗಳು 10-20 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ. ಆದ್ರೆ ಬಾಲಕಿ ಚಿಕಿತ್ಸೆಗೆ 10-15 ಲಕ್ಷ ರೂಪಾಯಿ ಬೇಕಾಗಿದೆ. ದಾನಿಗಳು ಮುಂದೆ ಬಂದು ಬಾಲಕಿಗೆ ಧನಸಹಾಯ ಮಾಡಿದ್ರೆ ಬಾಲಕಿ ಜೀವ ಉಳಿಸಬಹುದಾಗಿದೆ.
ಒಟ್ಟಿನಲ್ಲಿ ಶಾಲೆಗೆ ನಿತ್ಯ ನಲಿದಾಡಿಕೊಂಡು ಬರುವ ವಯಸ್ಸಿನಲ್ಲಿ ಬಾಲಕಿ ಕಿಡ್ನಿ ಕಳೆದುಕೊಂಡು ಮೂತ್ರ ಚೀಲ ಹಿಡಿದುಕೊಂಡು ನರಳಾಟ ನಡೆಸುತ್ತಾ ಶಾಲೆಗೆ ಬರುತ್ತಿದ್ದಾಳೆ. ಹೀಗಾಗಿ ಈ ಬಾಲಕಿ ಜೀವ ಉಳಿಸಲು ತಾವೂ ಕೂಡ ತಮಗೆ ತಿಳಿದಷ್ಟು ಹಣವನ್ನು ಬಾಲಕಿಯ ಬ್ಯಾಂಕ್ ಖಾತೆಯ ನಂಬರ್ ಗಳಾದ 10744101105922ಗೆ ಜಮಾ ಮಾಡಿ ಬಾಲಕಿ ಜೀವ ಉಳಿಸಿ.
ಬ್ಯಾಂಕ್ ಖಾತೆ ವಿವರ:
ಖಾತೆ ಹೆಸರು: ಮೇಸಕ್
ಖಾತೆ ನಂ: 10744101105922
ಬ್ಯಾಂಕ್ IFSC CODE: PKGB0010744