Tumakur : ಜೆಡಿಎಸ್‌ಗೆ ಸೇರಿದ ಚಾಲಕರು, ಮಾಲೀಕರು

By Kannadaprabha News  |  First Published Apr 19, 2023, 6:52 AM IST

ತುರುವೇಕೆರೆ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರನ್ನು ಗೆಲ್ಲಿಸುವ ದೃಷ್ಟಿಯಿಂದ ಹಲವಾರು ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ರಾಜ್ಯ ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟಚಂದ್ರೇಶ್‌ ಸಮ್ಮುಖ ಜೆಡಿಎಸ್‌ಗೆ ಸೇರ್ಪಡೆಯಾದರು.


ತುರುವೇಕೆರೆ: ತುರುವೇಕೆರೆ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರನ್ನು ಗೆಲ್ಲಿಸುವ ದೃಷ್ಟಿಯಿಂದ ಹಲವಾರು ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ರಾಜ್ಯ ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟಚಂದ್ರೇಶ್‌ ಸಮ್ಮುಖ ಜೆಡಿಎಸ್‌ಗೆ ಸೇರ್ಪಡೆಯಾದರು.

ದೊಡ್ಡಾಘಟ್ಟಚಂದ್ರೇಶ್‌ ಮಾತನಾಡಿ, ಜೆಡಿಎಸ್‌ ಆಡಳಿತಕ್ಕೆ ಬರಬೇಕೆಂಬುದು ಸಾಮಾನ್ಯ ಜನರ ಕನಸಾಗಿದೆ. ಬಡವರ ಪರ ದನಿ ಎತ್ತುವ ಪಕ್ಷವೆಂದರೆ ಅದು ಜೆಡಿಎಸ್‌ ಮಾತ್ರ. ಈ ಬಾರಿ ರಾಜ್ಯಾದ್ಯಂತ ಜೆಡಿಎಸ್‌ ಪರವಾದ ಅಲೆ ಇದೆ. ಕುಮಾರಸ್ವಾಮಿಯವರ ಕನಸಿನ ಕೂಸಾಗಿರುವ ಪಂಚರತ್ನ ಯೋಜನೆ ಜಾರಿ ಮಾಡುವುದು ಮುಖ್ಯ ಕರ್ತವ್ಯವಾಗಿದೆ. ಜನ ಸಾಮಾನ್ಯರ ಬಾಳನ್ನು ಹಸನು ಮಾಡುವ ಈ ಪಂಚರತ್ನ ಯೋಜನೆ ಜಾರಿಗೊಳಿಸಲು ರಾಜ್ಯದ ಮತದಾರರ ತೀರ್ಪು ಅತ್ಯಂತ ಮಹತ್ವವನ್ನು ಪಡೆದಿದೆ. ಕುಮಾರಸ್ವಾಮಿಯವರು ಕಳೆದ ಬಾರಿ ನೀಡಿದ್ದ ವಾಗ್ದಾನದಂತೆ ರೈತರ ಸಾಲ ಮನ್ನಾ ಮಾಡಿದರು. ಅದೇ ರೀತಿ ಈ ಬಾರಿ ಅವರು ನೀಡಿರುವ ಪಂಚರತ್ನ ಯೋಜನೆಯ ಕಲ್ಪನೆಯನ್ನು ಜಾರಿ ಮಾಡುವುದು ನೂರಕ್ಕೆ ನೂರು ಖಚಿತ ಎಂದು ದೊಡ್ಡಾಘಟ್ಟಚಂದ್ರೇಶ್‌ ಹೇಳಿದರು.

Latest Videos

undefined

ಡಬಲ್‌ ಎಂಜಿನ್‌ ಸರ್ಕಾರ ಮಧ್ಯಮವರ್ಗದವರ ಹಿತವನ್ನು ಕಣೆಗಣಿಸಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಶಿಕ್ಷಣ, ಆರೋಗ್ಯ ಸೇವೆ ಎಂಬುದು ಮರೀಚಿಕೆಯಾಗಿದೆ. ಸಮಾಜದ ಕಟ್ಟಕಡೆಯವರಿಗೂ ಸಮಾನತೆಯ ಬದುಕು, ಶಿಕ್ಷಣ, ಆರೋಗ್ಯ, ಸಕಲವೂ ತಲುಪಿಸುವ ನಿಟ್ಟಿನಲ್ಲಿ ಜೆ.ಡಿ.ಎಸ್‌. ಪಕ್ಷ ಪಂಚರತ್ನ ಯೋಜನೆ ಜಾರಿಗೆ ತರುವ ಸಂಕಲ್ಪ ಮಾಡಿದೆ ಎಂದರು. ತಾಲೂಕಿನ ಆಟೋ ಚಾಲಕರು ನಮ್ಮ ಜೆ.ಡಿ.ಎಸ್‌. ಪಕ್ಷದ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪವನರನ್ನು ಶಾಸಕರನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ ಎಂದರು.

ಬೆಳಗಾವಿಯಲ್ಲ 8 ಸ್ಥಾನ ಜೆಡಿಎಸ್‌ಗೆ

 

ಸವದತ್ತಿ(ಏ.18):  ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿ ಬೆಳಗಾವಿ ಜಿಲ್ಲೆಯಿಂದ ಸಾಕಷ್ಟುಪ್ರಮುಖ ಮುಖಂಡರು ಸೇರ್ಪಡೆಗೊಳ್ಳುತ್ತಿದ್ದು, ಬೆಳಗಾವಿ ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ 6 ರಿಂದ 8 ಸ್ಥಾನಗಳನ್ನು ಜೆಡಿಎಸ್‌ ಪಕ್ಷ ಪಡೆದುಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೌರವ ಚೋಪ್ರಾರವರ ನೇತೃತ್ವದಲ್ಲಿ ಹಮ್ಮಿಕೊಂಡ ಜೆಡಿಎಸ್‌ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನವಲಗುಂದದ ಮಾಜಿ ಶಾಸಕ ಕೆ.ಎನ್‌.ಗಡ್ಡಿ ಕಾಂಗ್ರೆಸ್‌ ಪಕ್ಷದಿಂದ, ಯಮಕನಮರಡಿಯ ಮಾರುತಿ ಅಷ್ಟಗಿ ಬಿಜೆಪಿಯಿಂದ, ಪಂಚನಗೌಡ ದ್ಯಾಮನಗೌಡರ ಕಾಂಗ್ರೆಸ್‌ನಿಂದ ಹಾಗೂ ಅಥಣಿಯ ಶಶಿಕಾಂತ ಪಡಸಲಗಿಯವರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗುತ್ತಿದೆ. ಬರುವಂತ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅ​ಧಿಕಾರಕ್ಕೆ ಬರುವುದು ಶತ ಸಿದ್ಧ ಎಂದರು.

ನನ್ನ, ಶೆಟ್ಟರ್‌ ಬಗ್ಗೆ ಮಾತಾಡುವ ನೈತಿಕತೆ ಬಿಎಸ್‌ವೈಗಿಲ್ಲ: ಲಕ್ಷ್ಮಣ ಸವದಿ

ಈ ಹಿಂದೆ ಆನಂದ ಚೋಪ್ರಾರವನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಾಕಷ್ಟುಸಲ ಪ್ರಮುಖರಿಗೆ ತಿಳಿಸಲಾಗಿತ್ತು. ಆದರೆ, ಇಂದು ಆ ಕಾಲ ಕೂಡಿ ಬಂದಿದ್ದು, ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸೌರವ ಚೋಪ್ರಾರನ್ನು ಆಯ್ಕೆ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ. ಈ ಕ್ಷೇತ್ರದಿಂದ ಜೆಡಿಎಸ್‌ ಶಾಸಕನನ್ನು ಆಯ್ಕೆ ಮಾಡಿದ್ದಲ್ಲಿ ಈ ಬಾರಿ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುವುದು ನಿಶ್ಚಿತ. ಸವದತ್ತಿಯನ್ನು ದತ್ತು ತೆಗೆದುಕೊಳ್ಳುವುದರ ಜೊತೆಗೆ ಈ ಭಾಗದಲ್ಲಿ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದರು.

ರೈತರಿಗೆ ಶಾಸ್ವತ ಪರಿಹಾರವನ್ನು ನೀಡುವ ಯೋಜನೆಗಳನ್ನು ಜೆಡಿಎಸ್‌ ಪಕ್ಷದಿಂದ ಜಾರಿಗೆ ತರಲಾಗುತ್ತಿದ್ದು, ಪಂಚರತ್ನ ಯೋಜನೆಯಲ್ಲಿ ಹಲವಾರು ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಭಾಗದಲ್ಲಿ ಅವಶ್ಯಕವಾಗಿರುವ ಶಿಕ್ಷಣ, ನೀರಾವರಿ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡು ನಿರ್ಧಾರದಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಸುವರ್ಣ ಸೌಧ ತಲೆ ಎತ್ತಿ ನಿಂತಿದ್ದು, ಅದನ್ನು ನಿಷ್ಕಿೃೕಯಗೊಳಿಸುವ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ. ರಾಜ್ಯದಲ್ಲಿನ 53 ಉಪನದಿಗಳ ನೀರನ್ನು ನಾಡಿನ ರೈತರಿಗೆ ಒದಗಿಸುವ ಕಾರ್ಯವನ್ನು ಮಾಡುವುದರ ಜೊತೆಗೆ ಜಲಧಾರೆ ಯೋಜನೆಯಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಸೌರವ ಚೋಪ್ರಾ ಮಾತನಾಡಿ, ನಮ್ಮ ತಂದೆ ಆನಂದ ಚೋಪ್ರಾರವರ ಕಾಲದಿಂದಲೂ ಜನರ ಸೇವೆಯನ್ನು ನಿರಂತರವಾಗಿ ನಾವು ಮಾಡಿಕೊಂಡು ಬರಲಾಗುತ್ತಿದ್ದು, ಜನರ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ ಪಕ್ಷದಿಂದ ನಮಗೆ ಬಹಳ ಅನ್ಯಾಯವಾಗಿದ್ದು, ನಮ್ಮ ಎಲ್ಲ ಬೆಂಬಲಿಗರ ಅಭಿಪ್ರಾಯದಂತೆ ಜೆಡಿಎಸ್‌ ಪಕ್ಷಕ್ಕೆ ಸೇರಿ ಜನಸೇವೆಗೆ ಸಿದ್ದನಾಗಿದ್ದೇನೆ ಎಂದರು. ಬಡವರು ದೀನ ದಲಿತರ ಅಭಿವೃದ್ದಿಗೆ ಕಂಕಣಬದ್ದನಾಗಿ ನಿಂತಿದ್ದು, ನಮ್ಮ ತಂದೆಯ ಮೇಲಿರುವ ಪ್ರೀತಿ ಮತ್ತು ಅಭಿಮಾನವನ್ನು ನನಗೂ ನೀಡಿ ಈ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

click me!