ಕಾಡಸಿದ್ದೇಶ್ವರ ಮಠದಲ್ಲಿ ಡಿಕೆಶಿ ರಹಸ್ಯ ಪೂಜೆ

By Kannadaprabha News  |  First Published Apr 19, 2023, 6:48 AM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದಂಪತಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಮಂಗಳವಾರ ರಹಸ್ಯ ಪೂಜೆ ನೆರವೇರಿಸಿದರು.


ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದಂಪತಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಮಂಗಳವಾರ ರಹಸ್ಯ ಪೂಜೆ ನೆರವೇರಿಸಿದರು.

ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಷಡಕ್ಷರಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅಲ್ಲಿಂದ ನೇರವಾಗಿ ಕಾಡಸಿದ್ದೇಶ್ವರ ಮಠಕ್ಕೆ ಹೋಗಿ ಪೂಜೆಯಲ್ಲಿ ದಂಪತಿ ಭಾಗಿಯಾದರು.

Tap to resize

Latest Videos

ಈ ವೇಳೆ ಡಿಕೆ ಶಿವಕುಮಾರ್‌ ಹಾಗೂ ಪತ್ನಿ ಉಷಾ ಇಬ್ಬರನ್ನು ಹೊರೆತುಪಡಿಸಿ ಎಲ್ಲರನ್ನೂ ಹೊರಕ್ಕೆ ಕಳುಹಿಸಲಾಯಿತು. ಪಾವಗಡದ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟೇಶ್‌ ನಾಮಪತ್ರ ವೇಳೆ ಭಾಗಿಯಾಗಿ ಅಲ್ಲಿಂದ ತಿಪಟೂರಿಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಪತ್ನಿಯನ್ನು ಬೆಂಗಳೂರಿನಿಂದ ಕಾರಿನಲ್ಲಿ ತಿಪಟೂರಿಗೆ ಕರೆಸಿಕೊಂಡರು. ಬಳಿಕ ತಿಪಟೂರಿನಿಂದ ಪತ್ನಿ ಜೊತೆ ಕಾಡಸಿದ್ದೇಶ್ವರ ಮಠಕ್ಕೆ ತೆರಳಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಕರಿವೃಷಭ ದೇಶಿಕೇಂದ್ರ ಶ್ರೀಗಳ ಸಮ್ಮುಖದಲ್ಲಿ ಗವಿಗುಡಿಯಲ್ಲಿ ಪೂಜೆ ಸಲ್ಲಿಸಲಾಯಿತು.

ಡಿ.ಕೆ.ಶಿವಕುಮಾರ್‌ ಅವರ ಆರಾಧ್ಯದೈವವಾಗಿರುವ ಅಜ್ಜಯ್ಯ ಪೀಠದಲ್ಲಿ ಪೂಜೆ ನೆರವೇರಿಸಲಾಯಿತು.

ಇದಕ್ಕೂ ಮುನ್ನ ತಿಪಟೂರಿನಲ್ಲಿ ಮಾತನಾಡಿದ ಅವರು ತುಮಕೂರು ಜಿಲ್ಲೆಯಲ್ಲಿ 11 ಕ್ಷೇತ್ರದ ಪೈಕಿ 10 ಕ್ಷೇತ್ರ ಕಾಂಗ್ರೆಸ್‌ ಪಾಲಾಗಲಿದೆ ಎಂದರು. ಮಾಜಿ ಸಚಿವ ರಾಮದಾಸ್‌ ಕಾಂಗ್ರೆಸ್‌ಗೆ ಸೇರುತ್ತಾರಾ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಹಳ ಜನ ಬಿಜೆಪಿ ನಾಯಕರು ಕಾಂಗ್ರೆಸ್‌ ಗೆ ಸೇರುವವರಿದ್ದು ಅವರ ಪಟ್ಟಿನಾನು ಈಗ ಹೇಳುವುದಿಲ್ಲ ಎಂದರು.

ನಾನು ಶಿವನ ಕುಮಾರ

ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು 20 ವರ್ಷಗಳಿಂದ ಸತತವಾಗಿ ಮಠಕ್ಕೆ ಬರುತ್ತಿದ್ದೇನೆ. ಕಾಡಸಿದ್ದೇಶ್ವರ ಮಠಕ್ಕೆ ಪ್ರತಿಯೊಂದು ವಿಚಾರದಲ್ಲೂ ನಾನು ಭಾಗಿಯಾಗಿದ್ದೇನೆ. ಇವತ್ತು ನಾನು ನನ್ನ ಪತ್ನಿ ಮಠಕ್ಕೆ ಭೇಟಿ ಕೊಟ್ಟಿದ್ದೇವೆ. ನಮ್ಮದೊಂದು ಸಂಕಲ್ಪ, ಪ್ರಾರ್ಥನೆ ಇದ್ದು ನಮಗೆ, ರಾಜ್ಯದ ಜನಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಾಗಬೇಕು ಎಂದು ದೇವರಲ್ಲಿ ಕೇಳಿಕೊಂಡಿರುವುದಾಗಿ ತಿಳಿಸಿದರು.ಇದು ಎಲ್ಲರೂ ಮಾಡುವ ಕರ್ತವ್ಯ ಅದೇ ರೀತಿ ನಾನು ಮಾಡಿದ್ದೇನೆ ಎಂದ ಅವರು ನಾನು ಶಿವನ ಕುಮಾರ, ಇದು ಶಿವ. ನಾವು ಏನು ಕೇಳಬೇಕೋ ಅದನ್ನು ಕೇಳಿಕೊಂಡಿದ್ದೇನೆ. ಅದನ್ನು ನಿಮಗೆ ಹೇಳೋದಕ್ಕೆ ಆಗುತ್ತಾ ಎಂದರು. ಅದು ನನಗೂ ಭಗವಂತನಿಗೂ ಬಿಟ್ಟವಿಚಾರ. ಶಿವನಿಗೂ ಶಿವನ ಮಗನಿಗೂ ಬಿಟ್ಟಂತಹ ವಿಚಾರ ಎಂದರು.

ಹೆಲಿಕಾಪ್ಟರ್‌ ತಪಾಸಣೆ

ಪಾವಗಡದಿಂದ ತಿಪಟೂರಿಗೆ ಡಿ.ಕೆ.ಶಿವಕುಮಾರ್‌ ಆಗಮಿಸಿದಾಗ ಹೆಲಿಕಾಪ್ಟರ್‌ ಅನ್ನು ಪರಿಶೀಲನೆ ಮಾಡಲಾಯಿತು. ತಿಪಟೂರಿನ ಕಲ್ಪತರು ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ ಇಳಿಯುತ್ತಿದ್ದಂತೆ ಚುನಾವಣಾ ಅಧಿಕಾರಿಗಳಿಂದ ತಪಾಸಣೆ ಮಾಡಿದರು. ಕಾಪ್ಟರ್‌ನಲ್ಲಿದ್ದ ಲಗೆಜ… ಕಿಚ್‌, ಡೈರಿಯನ್ನು ತಪಾಸಣೆ ಮಾಡಿದರು.

ಇನ್ನೂ ಅನೇಕರು ಕೈ ಸೇರಲಿದ್ದಾರೆ

ಬೆಂಗಳೂರು (ಏ.14) : ಮಾಜಿ ಉಪಮುಖ್ಯಮಂತ್ರಿ, ಬೆಳಗಾವಿಯ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಅವರ ನಂತರ ಇನ್ನು ಅನೇಕ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸಿದ್ದರಾಮಯ್ಯ(Siddaramaiah) ಅವರ ನಿವಾಸದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ(Randeep singh surjewala), ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಲಕ್ಷ್ಮಣ ಸವದಿ(Laxman savadid) ಅವರ ಜತೆ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಶಿವಕುಮಾರ್(DK Shivakumar) ಅವರು ಮಾತನಾಡಿದರು.

ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

 ‘ಲಕ್ಷ್ಮಣ್ ಸವದಿ ಹಿರಿಯ ನಾಯಕರು. ಅವರು ಯಾವುದೇ ಷರತ್ತು ಇಲ್ಲದೇ ಪಕ್ಷಕ್ಕೆ ಸೇರುತ್ತಿದ್ದು, ನಮ್ಮ ಕುಟುಂಬದ ಸದಸ್ಯರಾಗುತ್ತಿದ್ದಾರೆ. ಅವರು ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಪಕ್ಷ ಸೇರುತ್ತಿದ್ದು ಅವರಿಗೆ ಶಕ್ತಿ ತುಂಬುವುದು ನಮ್ಮ ಜವಾಬ್ದಾರಿ. ಇಂದು ಪಕ್ಷದ ನಾಯಕರೆಲ್ಲರೂ ಲಕ್ಷ್ಮಣ ಸವದಿ ಅವರ ಜತೆ ಚರ್ಚೆ ಮಾಡಿದ್ದೇವೆ. ಅವರನ್ನು ಪಕ್ಷದ ಎಲ್ಲಾ ನಾಯಕರು ತುಂಬು ಹೃದಯದ ಸ್ವಾಗತ ಕೋರುತ್ತೇವೆ.

 ಲಕ್ಷ್ಮಣ ಸವದಿ ಅವರ ಜತೆಗೆ ಇನ್ನು ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಎಲ್ಲರನ್ನೂ ನಾವು ಒಮ್ಮತದಿಂದ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಸವದಿ ಅವರು ಇಂದು ಸಂಜೆ 4 ಗಂಟೆಗೆ ವಿಧಾನ ಪರಿಷತ್ ಸಭಾಪತಿಗಳನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ 4.30ಕ್ಕೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ’ ಎಂದು ಅವರು ತಿಳಿಸಿದರು.

ಇಂದು ಸಂಜೆ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆ, ಅಥಣಿಯಿಂದ ಟಿಕೆಟ್, ಕುಮಟಳ್ಳಿ ವಿರುದ್ಧ ಸ್ಪರ್ಧೆ!

click me!