ಚಾರ್ಮಾಡಿ ಘಾಟಿಯಲ್ಲಿ ಬೃಹತ್‌ ಕಂದಕ

By Kannadaprabha News  |  First Published Aug 14, 2019, 2:36 PM IST

ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ಘಾಟಿ ಪ್ರದೇಶಗಳಲ್ಲಿ ಹಲವೆಡೆ ಭೂಕುಸಿತ ಸಂಭವಿಸಿದೆ. ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಾರ್ಮಾಡಿ ಘಾಡಿ ರಸ್ತೆಯಲ್ಲಿ ಕಂದಕ ಸೃಷ್ಟಿಯಾಗಿದ್ದು, ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗದ ಸ್ಥಿತಿಗೆ ತಲುಪಿದೆ.


ಮಂಗಳೂರು(ಆ.14): ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿಘಾಟಿ ರಸ್ತೆಯಲ್ಲಿ ಭಾರಿ ಭೂ ಕುಸಿತಗಳಾಗಿದ್ದು ರಸ್ತೆ ತಾತ್ಕಾಲಿಕವಾಗಿ ದುರಸ್ತಿಮಾಡಲಾಗದ ಸ್ಥಿತಿ ತಲುಪಿದೆ.

ಈಗ ಘಾಟಿಯಲ್ಲಿ ನಡೆದಿರುವ ಭೂ ಕುಸಿತಗಳನ್ನು ನೋಡಿದರೆ ಚಾರ್ಮಾಡಿ ಘಾಟಿ ರಸ್ತೆಗೆ ಪರ್ಯಾಯ ಕ್ರಮಗಳನ್ನು ಮಾಡದಿದ್ದರೆ ಶಾಶ್ವತವಾಗಿ ಮುಚ್ಚಿ ಹೋಗುವ ಭೀತಿ ಎದುರಾಗಿದೆ.

Tap to resize

Latest Videos

undefined

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಎರಡು ಮೂರು ವರ್ಷಗಳಿಂದ ಪ್ರತಿ ಬಾರಿಯೂ ಚಾರ್ಮಾಡಿ ಘಾಟಿಯಲ್ಲಿ ನಿರಂತರ ಭೂಕುಸಿತ ಸಂಭವಿಸುತ್ತಿತ್ತು. ಈ ಬಾರಿ ದೊಡ್ಡ ಪ್ರಮಾಣದ ಕುಸಿತ ಕಂಡುಬಂದಿದೆ. ವಿಶೇಷವೆಂದರೆ ಈ ಬಾರಿ ಘಾಟಿಯ ಮೇಲ್ಭಾಗದಲ್ಲಿ ಮೂಡಿಗೆರೆ ತಾಲೂಕಿಗೆ ಸೇರಿದ ಭಾಗದಲ್ಲಿ ಭೂ ಕುಸಿತ ಹೆಚ್ಚಾಗಿ ಸಂಭವಿಸಿದ್ದು ಕುಸಿತದ ತೀವ್ರತೆ ಅತ್ಯಂತ ಹೆಚ್ಚಿನದಾಗಿದೆ.

ಬಹುತೇಕ ತಿರುವುಗಳಲ್ಲಿ ಕುಸಿತ:

ಚಾರ್ಮಾಡಿ ಘಾಟ್‌ನಲ್ಲಿ 11 ಹೇರ್‌ ಪಿನ್‌ ತಿರುವುಗಳಿದ್ದು, 3ನೇ ತಿರುವಿನಿಂದ 11ತಿರುವಿನ ವರೆಗೂ ಅಲ್ಲಲ್ಲಿ ಗುಡ್ಡಕುಸಿತಗಳಾಗಿದ್ದು ಅದನ್ನು ತೆರವು ಮಾಡುವ ಕಾರಾರ‍ಯಚರಣೆ ನಡೆಯುತ್ತಿದೆ. ಸುಮಾರು ಏಳು ಕಡೆಗಳಲ್ಲಿ ಇಂತಹ ಕುಸಿತಗಳು ಕಂಡು ಬಂದಿದೆ. ಘಾಟಿಯಲ್ಲಿ ಅಣ್ಣಪ್ಪ ದೇವಸ್ಥಾನದಿಂದ ಆ ಕಡೆಗೆ ಮಲೆಯ ಮಾರುತದವರೆಗೂ ವಿವಿಧೆಡೆಗಳಲ್ಲಿ ಭೂ ಕುಸಿತವಾಗಿರುವುದು ವರದಿಯಾಗಿದ್ದು ಇದು ಅಪಾಯಕಾರಿ ರೀತಿಯಲ್ಲಿ ಆಗಿರುವುದಾಗಿ ತಿಳಿದು ಬರುತ್ತಿದೆ. ಭೂ ಕುಸಿತದಿಂದಾಗಿ ಭಾರಿ ಪ್ರಮಾಣದ ಕಲ್ಲು ಮಣ್ಣುಗಳು, ಮರಗಳು ರಸ್ತೆಯಲ್ಲಿ ತುಂಬಿಕೊಂಡಿದೆ. ಅದೇ ರೀತಿ ಕೆಲವೆಡೆ ರಸ್ತೆಯ ಅರ್ಧ ಭಾಗವೇ ಕುಸಿದು ಹೋಗಿದ್ದು ಇಡೀ ರಸ್ತೆಯೇ ಕುಸಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಮೈಸೂರು: 20 ಲಕ್ಷ ರು. ಮೌಲ್ಯದ ಪರಿಹಾರ ವಸ್ತು ಸಂಗ್ರಹ

ರಸ್ತೆಯೇ ಕುಸಿದು ಹೋಗಿರುವಲ್ಲಿ ತಾತ್ಕಾಲಿಕ ಪರಿಹಾರ ಕಾಣುವುದು ಸುಲಭದಲ್ಲಿ ಸಾಧ್ಯವಿಲ್ಲ. ರಸ್ತೆ ಸುರಕ್ಷತೆಗೆ ಸರಿಯಾಗಿ ಕ್ರಮ ಕೈಗೊಳ್ಳದೆ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸುವ ಸಾಧ್ಯತೆ ತೀರಾ ಕಡಿಮೆ. ಇದೇ ರೀತಿಯಲ್ಲಿ ಮಳೆ ಹಾಗೂ ಭೂ ಕುಸಿತಗಳು ಮುಂದುವರಿದರೆ ಚಾರ್ಮಾಡಿಘಾಟ್‌ ರಸ್ತೆ ಶಾಶ್ವತವಾಗಿ ಬಂದ್‌ ಆಗುವ ಸಾಧ್ಯತೆಗಳು ಇದೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ ಪರಿಸರ ತಜ್ಞರು.

4 ಕಡೆ ಬೃಹತ್‌ ಕಂದಕ:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಅರಣ್ಯ ಇಲಾಖಾ ಸಿಬ್ಬಂದಿ ಉಪಸ್ಥಿತಿಯಲ್ಲಿ ಮಣ್ಣು, ಕಲ್ಲು ತೆರವು ಕಾರ್ಯ ನಿರಂತರ ನಡೆಯುತ್ತಿದ್ದು, 4 ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕುಸಿದು ಬೃಹತ್‌ ಕಂದಕ ನಿರ್ಮಾಣಗೊಂಡಿದೆ. ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶಗಳಲ್ಲಿ ಚಾರ್ಮಾಡಿ ಘಾಟ್‌ ಅರಣ್ಯ ವ್ಯಾಪ್ತಿಯಲ್ಲಿ ಕಳೆದ 6 ದಿನಗಳಿಂದ ಬೆಟ್ಟದ ಬೆನ್ನಿನ ಭಾಗದಲ್ಲಿ ಹಲವೆಡೆ ಬಂಡೆ, ಮಣ್ಣು ಜಾರಿದ ಸ್ಥಿತಿಯಲ್ಲಿರುವುದು ಶನಿವಾರ ರಾತ್ರಿಯಿಂದ ಘಾಟ್‌ ಕುಸಿಯಲು ಆರಂಭಗೊಂಡಿದೆ. ಚಾರ್ಮಾಡಿ ಘಾಟ್‌ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳು ಬೃಹತ್‌ ಬಂಡೆಗಳೊಂದಿಗೆ ಕುಸಿದಿದ್ದು, ಘಾಟ್‌ ಪ್ರದೇಶದಲ್ಲಿ ಬೃಹತ್‌ ಕಂದಕಗಳು ನಿರ್ಮಾಣಗೊಂಡಿದೆ.

click me!