ಆನೇಕಲ್: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

Published : Aug 14, 2019, 01:37 PM ISTUpdated : Aug 14, 2019, 01:55 PM IST
ಆನೇಕಲ್: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

ಸಾರಾಂಶ

ರಸ್ತೆ ಅಪಘಾತವೊಂದರಲ್ಲಿ ಬೆಂಗಳೂರು ಕುಟುಂಬದ 5 ಜನ ಮೃತಪಟ್ಟಿದ್ದಾರೆ. ತಮಿಳುನಾಡಿನ ತಿರುವಲ್ಲೂರು ದೇವಸ್ಥಾನಕ್ಕೆ ತೆರಳುತ್ತಿದ್ದ ಶ್ರೀನಾಥ್ ರೆಡ್ಡಿ ಕುಟುಂಬ ಸದಸ್ಯರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ಧಾರೆ. ಕಾರು ಮತ್ತು ಭಾರತ್ ಬೆನ್ಜ್ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಐದು ಜನ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಬೆಂಗಳೂರು(ಆ.14): ರಸ್ತೆ ಅಪಘಾತವೊಂದರಲ್ಲಿ ಬೆಂಗಳೂರು ಕುಟುಂಬದ 5 ಜನ ಮೃತಪಟ್ಟಿದ್ದಾರೆ. ತಮಿಳುನಾಡಿನ ತಿರುವಲ್ಲೂರು ದೇವಸ್ಥಾನಕ್ಕೆ ತೆರಳುತ್ತಿದ್ದ ಶ್ರೀನಾಥ್ ರೆಡ್ಡಿ ಕುಟುಂಬ ಸದಸ್ಯರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ಧಾರೆ. ಕಾರು ಮತ್ತು ಭಾರತ್ ಬೆನ್ಜ್ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ.

ದೇವಸ್ಥಾನಕ್ಕೆ ಹೊರಟಿದ್ದ ಕುಟುಂಬ:

ಬೆಂಗಳೂರಿನ ಕುಟುಂಬ ತಮಿಳುನಾಡು ಪ್ರವಾಸ ಹೊರಟಿದ್ದರು. ತಮಿಳುನಾಡಿನ ತಿರುವಲ್ಲೂರು ದೇವಸ್ಥಾನಕ್ಕೆ ತೆರಳುತ್ತಿದ್ದ ಶ್ರೀನಾಥ್ ರೆಡ್ಡಿ ಕುಟುಂಬ ಸಂಚರಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿಯಾಗಿದೆ. ತಮಿಳುನಾಡಿನ‌ ಕೃಷ್ಣಗಿರಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಪಘಾತ ನಡೆದಿದೆ.

ಮೃತ ಕುಟುಂಬ ಬೊಮ್ಮನಹಳ್ಳಿ ಬೇಗೂರು ಸಮೀಪದ ಹುಲಿಮಂಗಲ ನಿವಾಸಿಗಳಾಗಿದ್ದು, ಮೃತರನ್ನು ತಂದೆ ಶ್ರೀನಾಥ್ ರೆಡ್ಡಿ (55), ತಾಯಿ ಚಂದ್ರಮ್ಮ (45), ಮಗ ಭರತ್ ರೆಡ್ಡಿ (24), ಮಗಳು ಶಾಲಿನಿ (26), ಅಳಿಯಸಂದೀಪ್‌ ರೆಡ್ಡಿ (29) ಮೃತಪಟ್ಟ ದುರ್ದೈವಿಗಳು.

ಧಾರವಾಡ: ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ, ಒಂದು ಮಗು ಸಾವು

ಕೃಷ್ಣಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಮಧ್ಯಾಹ್ನ12ಕ್ಕೆ ಮೃತರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಲಿವೆ. ಬೇಗೂರು ಸಮೀಪದ ಮೃತರ ಸ್ವಗ್ರಾಮ ಹುಲಿಮಂಗಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

PREV
click me!

Recommended Stories

Rapido Bike ಬುಕ್ ಮಾಡುವ ಮುನ್ನ ಎಚ್ಚರ! ರೈಡರ್ ಎಡವಟ್ಟಿಗೆ ಹಿಂಬದಿ ಕುಳಿತ ಗ್ರಾಹಕನ ಮಂಡಿ ಚಿಪ್ಪು ಪುಡಿ ಪುಡಿ!
ಕೆಲಸ ಮಾಡದಿದ್ರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸ್ತೇನೆ; ಮಾಗಡಿ ತಹಸೀಲ್ದಾರ್‌ಗೆ ಶಾಸಕ ಬಾಲಕೃಷ್ಣ ಹಿಗ್ಗಾಮುಗ್ಗ ತರಾಟೆ!