Bengaluru Traffic Police: ಕಳಪೆ ಹೆಲ್ಮೆಟ್‌ ಧರಿಸಿದ್ದವನಿಂದ 100 ಪಡೆದ ಪೇದೆ ತಲೆದಂಡ

Kannadaprabha News   | Asianet News
Published : Feb 05, 2022, 11:42 AM IST
Bengaluru Traffic Police: ಕಳಪೆ ಹೆಲ್ಮೆಟ್‌ ಧರಿಸಿದ್ದವನಿಂದ 100 ಪಡೆದ ಪೇದೆ ತಲೆದಂಡ

ಸಾರಾಂಶ

*  ಹಣ ಹಿಂತಿರುಗಿಸಿದ್ದ ವಿಡಿಯೋ ವೈರಲ್‌ * ಪಿಸಿ, ಎಚ್‌ಸಿಗೆ ದಂಡ ವಿಧಿಸುವ ಅಧಿಕಾರವಿಲ್ಲ * ಪ್ರಾಣ ರಕ್ಷಣೆಯ ಹಿತದೃಷ್ಟಿಯಿಂದ ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ ಧರಿಸಬೇಕು 

ಬೆಂಗಳೂರು(ಫೆ.05): ಕಳಪೆ ಹೆಲ್ಮೆಟ್‌(Helmet) ಧರಿಸಿದ್ದ ಎಂಬ ಕಾರಣಕ್ಕೆ ಬೈಕ್‌ ಸವಾರನನ್ನು ಅಡ್ಡಗಟ್ಟಿದಂಡದ ಹೆಸರಿನಲ್ಲಿ 100 ವಸೂಲಿ ಮಾಡಿ ಬಳಿಕ ಜನರು ವಿರೋಧ ವ್ಯಕ್ತಪಡಿಸಿದ್ದರಿಂದ ಹಣ(Money( ಮರಳಿಸಿ ಟೀಕೆಗೆ ಗುರಿಯಾಗಿದ್ದ ಎಚ್‌ಎಎಲ್‌ ಸಂಚಾರ ಠಾಣೆ ಕಾನ್‌ಸ್ಟೇಬಲ್‌(Traffic Constable) ತಲೆದಂಡವಾಗಿದೆ.

ಎಚ್‌ಎಎಲ್‌ ಸಂಚಾರ ಠಾಣೆ ಕಾನ್‌ಸ್ಟೇಬಲ್‌ ಪವನ್‌ ದ್ಯಾಮಣ್ಣನವರ್‌ ಅಮಾನತುಗೊಂಡಿದ್ದು(Suspend), ಸವಾರನಿಂದ ಹಣ ಪಡೆದು ಕಾನ್‌ಸ್ಟೇಬಲ್‌ ಮರಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಶುಕ್ರವಾರ ವೈರಲ್‌ ಆಗಿತ್ತು. ಈ ಪ್ರಸಂಗವನ್ನು ಗಂಭೀರವಾಗಿ ಪರಿಗಣಿಸಿದ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಡಾ. ಬಿ.ಆರ್‌.ರವಿಕಾಂತೇಗೌಡ ಅವರು, ಇಲಾಖೆಗೆ ಮುಜುಗರ ಉಂಟು ಮಾಡಿದ ಕಾನ್‌ಸ್ಟೇಬಲ್‌ ಪವನ್‌ನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಟ್ರಾಫಿಕ್ ಪೊಲೀಸರು ಈ ನಿಯಮಗಳ ಪ್ರಕಾರ ವಾಹನಗಳನ್ನ ಟೋಯಿಂಗ್ ಮಾಡ್ಬೇಕು!

ಕಳಪೆ ಹೆಲ್ಮೆಟ್‌ ಧರಿಸಿದ್ದ ಬೈಕ್‌ ಸವಾರನಿಂದ ಪವನ್‌ 100 ಪಡೆದಿದ್ದ. ಆನಂತರ ಸವಾರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ದಂಡವನ್ನು ಪವನ್‌ ವಾಪಸ್‌ ಕೊಟ್ಟಿದ್ದ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್‌ ಆಗಿತ್ತು. ಈ ಸಂಬಂಧ ಆಂತರಿಕ ವಿಚಾರಣೆಯಲ್ಲಿ ಕಾನ್‌ಸ್ಟೇಬಲ್‌ ತಪ್ಪು ಮಾಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಾನ್‌ಸ್ಟೇಬಲ್‌ ಪವನ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಪಿಸಿ, ಎಚ್‌ಸಿಗೆ ದಂಡ ವಿಧಿಸುವ ಅಧಿಕಾರವಿಲ್ಲ

ಸ್ಥಳದಲ್ಲಿ ದಂಡ ವಿಧಿಸುವ ಅಧಿಕಾರ ಎಎಸ್‌ಐ ಮತ್ತು ಮೇಲ್ದರ್ಜೆ ಅಧಿಕಾರಿಗಳಿಗೆ ಮಾತ್ರ ಇದೆ. ಆದರೆ ಸ್ಥಳದಲ್ಲಿ ದಂಡ ವಿಧಿಸುವ ಅಧಿಕಾರವು ಕಾನ್‌ಸ್ಟೇಬಲ್‌ ಮತ್ತು ಹೆಡ್‌ ಕಾನ್‌ಸ್ಟೇಬಲ್‌ಗಳಿಗೆ ಇಲ್ಲ. 15 ದಿನಗಳಿಂದ ನಗರ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್‌ ವತಿಯಿಂದ ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ಗಳ ಬಗ್ಗೆ ಬೈಕ್‌ ಸವಾರರಿಗೆ ಜಾಗೃತಿ ಅಭಿಯಾನ ನಡೆದಿದೆ. ಆದರೆ, ಇಲ್ಲಿಯವರೆಗೂ ಕಳಪೆ ಹೆಲ್ಮೆಟ್‌ ಧರಿಸಿದ ಸವಾರರಿಗೆ ದಂಡ ವಿಧಿಸುವಂತೆ ಯಾವುದೇ ಆದೇಶ ನೀಡಿರುವುದಿಲ್ಲ ಎಂದು ಜಂಟಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಣೆಯ ಹಿತದೃಷ್ಟಿಯಿಂದ ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌(ISI Quality Helmet) ಧರಿಸಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ(Awareness) ಅಭಿಯಾನವನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಟ್ರಾಫಿಕ್‌ ಪೊಲೀಸ್‌ ಟೋಯಿಂಗ್‌ ವಾಹನದಿಂದಲೇ ಸಿಗ್ನಲ್‌ ಜಂಪ್‌: ಬಿತ್ತು ಭರ್ಜರಿ ದಂಡ

ಬೆಂಗಳೂರು: ಸಿಗ್ನಲ್‌ ಜಂಪ್‌ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ (Traffic Rules Violation)  ತಮ್ಮದೇ ಠಾಣೆಯ ಟೋಯಿಂಗ್‌ ವಾಹನಕ್ಕೆ (towing Vehicle) ಹೈಗ್ರೌಂಡ್ಸ್‌ ಠಾಣೆ ಸಂಚಾರ ಪೊಲೀಸರು (Police) 500ರು. ದಂಡ ವಿಧಿಸಿದ್ದ ಘಟನೆ ಕಳೆದ ವರ್ಷದ ಡಿ.13 ರಂದು ನಡೆದಿತ್ತು. ನಗರದ ಚಾಲುಕ್ಯ ಸರ್ಕಲ್‌ನಲ್ಲಿ ಟೋಯಿಂಗ್‌ ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದು, ಟ್ವಿಟರ್‌ನಲ್ಲಿ (twitter) ಸಾರ್ವಜನಿಕರು ನೀಡಿದ ದೂರು ಆಧರಿಸಿ ಟೋಯಿಂಗ್‌ ವಾಹನಕ್ಕೆ ಪೊಲೀಸರು ದಂಡ ವಿಧಿಸಿದ್ದರು.

Bengaluru Traffic Police: ಹಳೆ ಬಾಕಿ ವಸೂಲಿಗೆ RTO ಕಚೇರಿ ಬಳಿ ಪೊಲೀಸರ ಠಿಕಾಣಿ

ರಾಜಭವನ ರಸ್ತೆಯಿಂದ ಭಾನುವಾರ ಬಂದ ಟೋಯಿಂಗ್‌ ವಾಹನ ಚಾಲುಕ್ಯ ವೃತ್ತದಲ್ಲಿ ಸಿಗ್ನಲ್‌ ಜಂಪ್‌ (Signal Jumnp) ಮಾಡಿ ಸಾಗಿತ್ತು. ಆಗ ಟೋಯಿಂಗ್‌ ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಮೊಬೈಲ್‌ ಸೆರೆ ಹಿಡಿದಿದ್ದ ವ್ಯಕ್ತಿಯೊಬ್ಬರು, ‘ಏಜೆಂಟ್‌ ಪೀಣ್ಯ’ ಹೆಸರಿನಲ್ಲಿ ಟ್ವಿಟ್‌ ಮಾಡಿ ಬೆಂಗಳೂರು ಸಂಚಾರ ಪೊಲೀಸರಿಗೆ (Bengaluru Traffic Police) ಟ್ಯಾಗ್‌ ಮಾಡಿದ್ದರು. ನಿಮ್ಮ ವಾಹನವೇ ಸಿಗ್ನಲ್‌ ಜಂಪ್‌ ಮಾಡಿದೆ. ನೀವು ದಂಡ ವಿಧಿಸಿ ಚಲನ್‌ ಅನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿ ಎಂದು ಒತ್ತಾಯಿಸಿದ್ದರು.

ರೂಲ್ಸ್ ಬ್ರೇಕ್ ಮಾಡಿದರೆ ಎಸ್‌ಎಂಎಸ್‌ ಬರುತ್ತೆ: 

ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಆ ವಾಹನಗಳ ಮಾಲೀಕರ ಮೊಬೈಲ್‌ಗೆ ಸಂಚಾರ ಉಲ್ಲಂಘನೆ ಸ್ವರೂಪ ಹಾಗೂ ದಂಡದ ವಿವರಗಳನ್ನು ಎಸ್‌ಎಂಎಸ್‌(SMS)  ಮೂಲಕ ಮಾಹಿತಿ ನೀಡುವ ಹೊಸ ವ್ಯವಸ್ಥೆಯನ್ನು ನಗರ ಸಂಚಾರ ವಿಭಾಗದ ಪೊಲೀಸರು(Traffic Police) ಆರಂಭಿಸಿದ್ದಾರೆ. ಈ ವ್ಯವಸ್ಥೆಯಿಂದ ಕಾನೂನು ಮೀರಿದವರನ್ನು ಹುಡುಕಿಕೊಂಡು ಮನೆಗಳಿಗೆ ಹೋಗುವ ಪೊಲೀಸರ(Police) ಶ್ರಮ ಮತ್ತು ಸಮಯ ಹಾಗೂ ಅಂಚೆ ವೆಚ್ಚ ಉಳಿಯಲಿದೆ. ಅಲ್ಲದೆ ತ್ವರಿತವಾಗಿ ನಿಯಮ ಉಲ್ಲಂಘನೆ ಮಾಹಿತಿಯನ್ನು ವಾಹನ(Vehicle) ಮಾಲೀಕರಿಗೆ ತಿಳಿಸಲು ನೆರವಾಗಲಿದೆ.
 

PREV
Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ