* 545 ಪಿಎಸೈ ಪರೀಕ್ಷೆಯಲ್ಲಿ ಅಕ್ರಮಗಳ ಆರೋಪ
* ಸಿಎಂಗೆ ಸಚಿವ ಪ್ರಭು ಚವ್ಹಾಣ್ ಪತ್ರ
* 'ಕನ್ನಡಪ್ರಭ’ ಸರಣಿ ವರದಿಗಳ ಲಗತ್ತಿಸಿ ಸಿಎಂ, ಗೃಹ ಸಚಿವರಿಗೆ ಚವ್ಹಾಣ್ ಪತ್ರ
ಆನಂದ್ ಎಂ. ಸೌದಿ
ಯಾದಗಿರಿ(ಫೆ.05): ಪಿಎಸೈ ಪರೀಕ್ಷೆಯಲ್ಲಿ ಅಕ್ರಮಗಳ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಸರ್ಕಾರ ಆದೇಶಿಸಬೇಕು, ಈ ವಿಚಾರದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದು ಬೇಡ ಎಂದು ಸಚಿವ ಪ್ರಭು ಚವ್ಹಾಣ್(Prabhu Chauhan) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರಿಗೆ ಪತ್ರ ಬರೆದಿದ್ದಾರೆ.
undefined
‘ಕನ್ನಡಪ್ರಭ’(Kannada Prabha) ಸರಣಿ ವರದಿಗಳನ್ನೂ ಸಹ ಸಿಎಂ ಹಾಗೂ ಗೃಹ ಸಚಿವರಿಗೆ ಗುರುವಾರ ಬರೆದ ಈ ಪತ್ರದ ಜೊತೆಯಲ್ಲಿ ಲಗತ್ತಿಸಿರುವ ಸಚಿವ ಪ್ರಭು ಚವ್ಹಾಣ್, ಪಿಎಸೈ ನೇಮಕಾತಿಯಲ್ಲಿ(PSI Recruitment) ಭಾರಿ ಅಕ್ರಮ(Illegal) ನಡೆದಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ. ಇದರಿಂದ ರಾಜ್ಯ ಸರ್ಕಾರಕ್ಕೆ(Govenment of Karnataka) ಕೆಟ್ಟ ಹೆಸರು ಬರುವುದನ್ನು ತಡೆಗಟ್ಟಲು ಕೂಡಲೇ ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕೆಂದು ಕೋರಿದ್ದಾರೆ.
PSI Exam Scam: ಪಿಎಸೈ ಪರೀಕ್ಷೆ ಅಕ್ರಮ ಶಂಕೆ, ಯಾದಗಿರಿ ವ್ಯಕ್ತಿ ಸೂತ್ರಧಾರಿಯೇ?
ಪಿಎಸೈ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದ್ದು, ದೊಡ್ಡ ಜಾಲವೇ ಇದರ ಹಿಂದಿದೆ. ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆಯನ್ನೂ ವ್ಯಕ್ತಪಡಿಸಿದ್ದ ನೊಂದ ಅಭ್ಯರ್ಥಿಗಳು, ಪ್ರತಿ ಹುದ್ದೆಗೆ ಸುಮಾರು 60 ಲಕ್ಷ ರು.ಗಳಂತೆ ಹಣ ನೀಡಿದ ಕೆಲವರು ಹುದ್ದೆ ಗಿಟ್ಟಿಸಿದ್ದಾರೆ ಎಂದು ದೂರಿದ್ದರು.
‘ಕನ್ನಡಪ್ರಭ’ ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿ, ಗಮನ ಸೆಳೆದಿತ್ತು.
ಇನ್ನು, ಕಲ್ಯಾಣ ಕರ್ನಾಟಕ(Kalyana Karnataka) ಭಾಗದ ಮೀಸಲಾತಿಯಲ್ಲಾದ(Reservation) ತೊಂದರೆ ಸರಿಪಡಿಸುವುದು ಸೇರಿದಂತೆ, ಪರೀಕ್ಷಾ ಅಕ್ರಮ ಹಾಗೂ ನೇಮಕಾತಿ ಆರೋಪಗಳ ಕುರಿತು ತನಿಖೆ ನಡೆಸುವಂತೆ ಪ್ರಭು ಚವ್ಹಾಣ್ ಈ ಪತ್ರ ಮುಖೇನ ಮನವಿ ಮಾಡಿದ್ದಾರೆ.
ಪಿಎಸೈ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ ತೊಂದರೆ ಸರಿಪಡಿಸಬೇಕು, ಈ ಭಾಗದ ಹೆಚ್ಚು ಅಂಕಗಳ ಗಳಿಸಿದ ಅಭ್ಯರ್ಥಿಗಳನ್ನು ‘ನಾನ್ ಕೆಕೆ’ (ಕಲ್ಯಾಣ ಕರ್ನಾಟಕ ಭಾಗದವರಲ್ಲದ) ಆಯ್ಕೆಗೆ ಪರಿಗಣಿಸದೆ, ಕಲ್ಯಾಣ ಕರ್ನಾಟಕದಲ್ಲಿಯೇ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡುವ ಮೂಲಕ, ಈ ಭಾಗಕ್ಕೆ ಸಿಗಬೇಕಾದ ಸೌಲತ್ತುಗಳಿಂದ ವಂಚಿತವಾದಂತಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಕೂಡಲೇ ಸರಿಪಡಿಸಬೇಕು. ಪಿಎಸೈ ತಾತ್ಕಾಲಿಕ ಆಯ್ಕೆಪಟ್ಟಿ ತಡೆ ಹಿಡಿಯಬೇಕು, ಪರೀಕ್ಷೆ-1 ಹಾಗೂ ಪರೀಕ್ಷೆ-2 ರಲ್ಲಿ ಕಲಬುರಗಿ(Kalaburagi) ಜಿಲ್ಲೆಯ ಅಫಜಲ್ಪೂರ ತಾಲೂಕಿನಲ್ಲೇ 43ಕ್ಕೂ ಹೆಚ್ಚು ಅಭ್ಯರ್ಥಿಗಳು(Candidates) ಆಯ್ಕೆಯಾಗುವ ಮೂಲಕ ಪೊಲೀಸ್ ಸಬ್ ಇನ್ಸಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿರವುದರಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದನ್ನು ತಡೆಗಟ್ಟಲು ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಅಂತ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ.
PSI Recruitment: ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ: ಸಿಎಂಗೆ ಶಾಸಕ ರಾಜೂಗೌಡ ಪತ್ರ
ತಮ್ಮ ಹೆಸರೇ ಬರೆಯಲಿಕ್ಕಾಗದ ಕೆಲವರು ರ‍್ಯಾಂಕ್ ಹೇಗೆ ಪಡೆದ್ರು..?
ಯಾದಗಿರಿ: 545 ಪಿಎಸೈ-ಸಿವಿಲ್ ನೇಮಕಾತಿ(PSI Civil Recruitment) ಪರೀಕ್ಷೆ ಹಾಗೂ ಆಯ್ಕೆ ಪಟ್ಟಿಯಲ್ಲಿ ಅಕ್ರಮ(Illegal) ನಡೆದಿದೆ ಎಂಬ ಆರೋಪಗಳ ಕುರಿತ ಹಗರಣದ ಹೂರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿರುವಂತಿವೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಸಾಮಾಜಿಕ ಜಾಲತಾಣಗಳ ಈ ಕುರಿತು ಪ್ರಶ್ನಿಸುತ್ತಿರುವ ನೊಂದ ಅಭ್ಯರ್ಥಿಗಳು, ಅಕ್ರಮದ ಕುರಿತ ಅನುಮಾನಸ್ಪದ ಅಂಶಗಳುಳ್ಳ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಜ.19 ರಂದು ಬಿಡುಗಡೆಯಾದ ಆಯ್ಕೆ ಪಟ್ಟಿ ಪ್ರಕಟವಾದ ನಂತರ, ತಮ್ಮ ಹೆಸರಿಗಾಗಿ ಹುಡುಕಾಡಿದ ಪ್ರತಿಭಾವಂತರ ಪಡೆ ಕಂಗಾಲಾಗಿದೆ. ಅತೀ ಕ್ಲಿಷ್ಟಕರವಾದ ಎಂದೇ ವಿಶ್ಲೇಷಿಸಲ್ಪಟ್ಟ ಪರೀಕ್ಷೆಯಲ್ಲಿ(Exam) ಅರ್ಹತೆಗೆ ತಕ್ಕಂತೆ ಬರೆದ ಪ್ರತಿಭಾವಂತರು, ಹುದ್ದೆಗೆ ಆಯ್ಕೆಯಾಗುವುದು ಖಚಿತ ಎಂದೇ ನಂಬಿದ್ದರು. ಆದರೆ, ರ‍್ಯಾಂಕ್ ಪಟ್ಟಿ(Rank List) ಕಂಡೊಡನೆ ಅನೇಕರು ಹೌಹಾರಿದ್ದಾರೆ. ತಮ್ಮ ಹೆಸರುಗಳನ್ನೇ ಬರೆಯಲಿಕ್ಕೆ ಆಗದ ಕೆಲವರು ಪಟ್ಟಿಯ ಆರಂಭದ ಕ್ರಮಗಳಲ್ಲಿ ಹೆಸರು ಗಿಟ್ಟಿಸಿರುವುದು ಪ್ರತಿಭಾವಂತರ ಅಚ್ಚರಿ ಮೂಡಿಸಿದೆ. ಪರೀಕ್ಷೆ-1 ಹಾಗೂ ಪರೀಕ್ಷೆ-2 ರಲ್ಲಿ ಕೆಲವರ ಅಂಕಗಳು ಭಾರಿ ಸಂಶಯಕ್ಕೀಡಾಗಿಸಿದೆ.