ಮಕ್ಕಳಲ್ಲಿ ಗಣಿತದ ಭಯ ಹೋಗಲಾಡಿಸಲು ಸಲಹೆ

By Kannadaprabha News  |  First Published Oct 2, 2018, 10:56 AM IST

ಗಣಿತ ವಿಷಯದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ವಿದ್ಯಾರ್ಥಿಗಳಲ್ಲಿ ಆತ್ಮಬಲ ವೃದ್ಧಿಗೆ ಗಣಿತ ಪರೀಕ್ಷೆಗಳು ಪೂರಕ ಎಂದು ಅಕ್ಷರ ಫೌಂಡೇಷನ್ ಜಿಲ್ಲಾ ಸಂಯೋಜಕ ರಂಗನಾಥ ಹೇಳಿದರು. 


ರಾಜನಕೋಳೂರ ಗ್ರಾಮದ ಸರ್ಕಾರಿ ಉರ್ದು ಶಾಲೆಯಲ್ಲಿ ಶನಿವಾರ ಗ್ರಾಮ ಪಂಚಾಯಿತಿ, ಸಮುದಾಯ, ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಜನಕೋಳುರ ಗ್ರಾಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಮಕ್ಕಳಲ್ಲಿ ಗಣಿತ ವಿಷಯದ ಬಗ್ಗೆ ಭಯವಿರುವುದು ಸಾಮಾನ್ಯ. ಈ ಹಿನ್ನೆಲೆ ಮಕ್ಕಳಿಗೆ ಸರಳ ವಿಧಾನ ಪರಿಕರಗಳ ಸಹಾಯದಿಂದ ಗಣಿತದ ಜ್ಞಾನವನ್ನು ನೀಡಲಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ಈ ಸ್ಪರ್ಧೆ ಆಯೋಜಿಸಿರುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿ ಗಣಿತ ವಿಷಯದ ಮೇಲೆ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಗ್ರಾ.ಪಂಗಳು ಗ್ರಾಮ ಅಭಿವೃದ್ಧಿಯ ಜತೆಗೆ ಶೈಕ್ಷಣಿಕ ಅಭಿವೃದ್ಧಿಗೂ ಶ್ರಮಿಸಬೇಕು ಎಂದು ಹೇಳಿದರು.

Tap to resize

Latest Videos

ಶಿಕ್ಷಣ ಸಂಯೋಜಕ ಯಮನಪ್ಪ ಕುರಿ ಮಾತನಾಡಿ, ಇಂತಹ ಪರೀಕ್ಷೆಗಳಿಂದ ಮಕ್ಕಳಿಗೆ ಪರೀಕ್ಷೆ ಬರೆಯುವ ಜ್ಞಾನ ಹೆಚ್ಚಿಸುವುದಲ್ಲದೆ ಮುಂದಿನ ಸ್ಪಧಾತ್ಮಕ ಪರೀಕ್ಷೆಗಳಿಗೆ ಪೂರಕ ತಯಾರಿಗೆ ಸಹಾಯವಾಗುತ್ತದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ರೇಣುಕಾ ವಠಾರ ಗಣಿತ ಸ್ಪರ್ ಉದ್ಘಾಟಿಸಿದರು. ಪ್ರಮುಖರಾದ ಸಂಗನಗೌಡ ಮಾಗನೂರ, ರಾಮನಗೌಡ ವಠಾರ, ಸಂಗನಗೌಡ ಪಾಟೀಲ, ಅಮರಯ್ಯಸ್ವಾಮಿ ಮಠ, ಸೋಮನಗೌಡ ಗುಳಬಾಳ, ಶಿವಲಿಂಗಪ್ಪ ದೊಡ್ಡಮನಿ ಸೇರಿದಂತೆ ೫ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.

click me!