ಧರ್ಮ ದಂಗಲ್‌ ಮಧ್ಯೆ ಸುಬ್ರಮಣ್ಯ ಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ: ಬಿಗಿ ಪೊಲೀಸ್‌ ಬಂದೋಬಸ್ತ್‌

By Girish GoudarFirst Published Nov 29, 2022, 9:15 AM IST
Highlights

ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಅಂತ ಆಕ್ಷೇಪ ವ್ಯಕ್ತಪಡಿಸಿದ್ದ ಹಿಂದೂಪರ ಸಂಘಟನೆಗಳು 

ಬೆಂಗಳೂರು(ನ.29):  ಇಂದು(ಮಂಗಳವಾರ) ವಿವಿ ಪುರಂನ ಸುಬ್ರಮಣ್ಯ ಸ್ವಾಮಿ ಬೆಳ್ಳಿ ರಥೋತ್ಸವದ ಹಿನ್ನೆಲೆಯಲ್ಲಿ ಹಿಂದೂಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಿಗ್ಗೆ ಸುಬ್ರಮಣ್ಯ ಸ್ವಾಮಿ ಬೆಳ್ಳಿ ರಥೋತ್ಸವ ನಡೆಯಲಿದೆ. ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಅಂತ ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದರಿಂದ ಪೊಲೀಸರು ರಾತ್ರಿ ಒಂದು ಗಂಟೆಗೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿದಂತೆ ಕಾರ್ಯಕರ್ತರನ್ನು ಬಸವನಗುಡಿ ಸ್ಟೇಷನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವನಗುಡಿಯ ರಾಷ್ಟ್ರ ರಕ್ಷಣಾ ಪಡೆಯ ಕಚೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವ್ಯಾಪಾರ ದಂಗಲ್ ನಡುವೆ ಸುಬ್ರಹ್ಮಣ್ಯ ಬೆಳ್ಳಿ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಧರ್ಮ ದಂಗಲ್‌ನ ಕರಿನೆರಳ ನಡುವೆಯೇ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ರಥೋತ್ಸವ ನಡೆಯಲಿದೆ. ಬೆಳಗ್ಗೆ 11.45 ಕ್ಕೆ ಬೆಳ್ಳಿ ರಥೋತ್ಸವ ಆರಂಭವಾಗಲಿದೆ. ಇಂದು ಬೆಳಗ್ಗೆಯಿಂದಲೇ ಪೂಜೆ, ಅಭಿಷೇಕಗಳು ಆರಂಭವಾಗಿವೆ. 

ಧರ್ಮದಂಗಲ್‌ ವೇದಿಕೆಯಾಗುವುದೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ?

ರಥೋತ್ಸವ ಹಾದು ಹೋಗುವ ಹಾದಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ರಥೋತ್ಸವ ಹಾದು ಹೋಗುವ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಸಜ್ಜನ್ ರಾವ್ ಸರ್ಕಲ್‌ನ ಮುಂಭಾಗದಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಧರ್ಮ ದಂಗಲ್ ವಿಚಾರವಾಗಿ ಮುನ್ನೆಚ್ಚರಿಕ ಕ್ರಮವಾಗಿ 626 ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಪಿಎಸ್ಐ- 49 ಇನ್ಸ್ಪೆಕ್ಟರ್- 14 ಎಸಿಪಿ-16 ಎಎಸ್ಐ 158, ಹೆಡ್‌ಕಾನ್‌ಸ್ಟೇಬಲ್ - 148 ಪಿಸಿ- 236 ಹೋಂಗಾರ್ಡ್- 22 ಗಳನ್ನ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಫುಲ್‌ ಅಲರ್ಟ್ ಆಗಿದ್ದಾರೆ. 

click me!