*ಮೈಸೂರಿನಲ್ಲಿ ಮತ್ತೊಂದು ಹುಲಿ ದಾಳಿ ಪ್ರಕರಣ.
*ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆಯಲ್ಲಿ ಘಟನೆ
*ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಅಟ್ಯಾಕ್
ಮೈಸೂರು (ಜ. 22): ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕು ಹಿರೇಹಳ್ಳಿ ಬಿ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಲಿಯಾಗಿದ್ದಾರೆ. ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವಲಯದಲ್ಲಿ ಘಟನೆ ನಡೆದಿದ್ದು ಹೆಚ್ ಡಿ ಕೋಟೆ ತಾಲೂಕಿನ ಹಿರೇಹಳ್ಳಿ ಬಿ ಕಾಲೋನಿ ನಿವಾಸಿ ಮರೀಗೌಡ ಮೃತ ರೈತ. ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಹಿರೇಹಳ್ಳಿ ಬಿ ಗ್ರಾಮದಲ್ಲಿ ರೈತನ ಮೇಲೆ ಹುಲಿ ದಾಳಿ ಮಾಡಿದೆ. ಹುಲಿ ದಾಳಿಯಿಂದ ಕುಸಿದು ಬಿದ್ದು ರೈತ ಮರೀಗೌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಿಂದ ಹೆಚ್.ಡಿ.ಕೋಟೆಯ ಹಲವು ಭಾಗಗಳಲ್ಲಿ ಹುಲಿ ಕಾಣಿಸಿಕೊಂಡು ಜನರ ಮೇಲೆ ದಾಳಿ ಮಾಡುತ್ತಿದೆ. ಆದರೆ ಕಾರ್ಯಾಚರಣೆ ವೇಳೆ ಹುಲಿಯ ಗುರುತು ಪತ್ತೆಯಾಗಿಲ್ಲ.
ಅರಣ್ಯ ಸಿಬ್ಬಂದಿ ಜೀಪಿನ ಮೇಲೆ ಕಾಡಾನೆ ದಾಳಿ, ನಾಲ್ವರು ಪಾರು: ಕುರುಬರಹುಂಡಿ ಗ್ರಾಮದ ಬಳಿ ರೈತರ ಜಮೀನಿಗೆ ಕಾಡಾನೆಗಳು ಬರದಂತೆ ಕಾವಲು ಕಾಯುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದ ಜೀಪಿನ ಮೇಲೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ(Bandipur Tiger Reserve And National Park) ಓಂಕಾರ ವಲಯದಲ್ಲಿ ಸಲಗ(Elephant) ದಾಳಿ(Attack) ನಡೆಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಅರಣ್ಯ ಇಲಾಖೆಗೆ(Forest Department) ಸೇರಿದ ಜೀಪನ್ನು ಕಂಡ ಕಾಡಾನೆ ರೊಚ್ಚಿಗೆದ್ದು ಜೀಪನ್ನು ಕೊಂಬಿನಿಂದ ಮೇಲೆತ್ತಿ ಉರುಳಿಸಿದೆ. ಜೀಪು ಉರುಳಿ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಷಾತ್ ಜೀಪಲ್ಲಿದ್ದ ನಾಲ್ವರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!
ಕಾಡಾನೆ ದಾಳಿಗೆ ಜೀಪ್ ಪಲ್ಟಿ ಹೊಡೆದಾಗ ಸದ್ದಿಗೆ ಕಾಡಾನೆ ಓಡಿ ಹೋಗಿದೆ. ಇಲ್ಲದಿದ್ದಲ್ಲಿ ಜೀಪಲ್ಲಿದ್ದ ನಾಲ್ವರು ಸಿಬ್ಬಂದಿ ಮೇಲೆ ದಾಳಿ ಮಾಡುವ ಸಾಧ್ಯತೆ ಮೇಲೆ ಹೆಚ್ಚಿತ್ತು ಎನ್ನಲಾಗುತ್ತಿದೆ. ಜೀಪಿನೊಳಗಿದ್ದ(Jeep) ನಾಲ್ವರು ಸವರಿಸಿಕೊಂಡ ಜೀಪಿನಿಂದ ಮೇಲೆ ಬರುವುದನ್ನು ಕಂಡ ಕಾಡಾನೆ ಮತ್ತೆ ದಾಳಿ ನಡೆಸಲು ಪ್ರಯತ್ನ ಕಂಡು ಸಿಬ್ಬಂದಿ ಸನಿಹದಲ್ಲಿದ್ದ ಕಂದಕಕ್ಕೆ ಓಡಿ ಹೋಗಿದ್ದಾರೆ. ಜಮೀನಿನಲ್ಲಿದ್ದ(Land) ಆನೆಯನ್ನು ಕಾಡಿನತ್ತ ಓಡಿಸಲು ಜೀಪಿನಲ್ಲಿದ್ದ ಡಿಆರ್‌ಎಫ್‌ಒ(DRFO) ಹಾಗೂ ಸಿಬ್ಬಂದಿ ಜೀವ ಉಳಿಸಿಕೊಂಡಿದ್ದಾರೆ. ರೈತರು(Farmers) ಮಾತ್ರ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಒಂದೇ ದಿನ 9 ಮೇಕೆ ಕೊಂದಿದ್ದ ಹುಲಿ ಹಿಡಿದುಮೈಸೂರಿಗೆ ರವಾನೆ: ಪೊನ್ನಂಪೇಟೆ (Ponnampete) ತಾಲೂಕಿನ ಕುಟ್ಟ- ಬಾಡಗ ಗ್ರಾಮದಲ್ಲಿ ಒಂದೇ ದಿನ 9 ಮೇಕೆಗಳನ್ನು ಬಲಿ ಪಡೆದು ಗ್ರಾಮಸ್ಥರಲ್ಲಿ (Villagers) ಆತಂಕ ಮೂಡಿಸಿದ್ದ 10 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸೆರೆ ಹಿಡಿದಿದ್ದು, ಮೈಸೂರು (Mysuru) ಮೃಗಾಲಯಕ್ಕೆ ರವಾನಿಸಲಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಭೀಮ ಆನೆಗಳನ್ನು ಬಳಸಿಕೊಂಡು ಗುರುವಾರ ಮಧ್ಯಾಹ್ನದಿಂದ ಕೂಂಬಿಂಗ್ ನಡೆಸಿದಾಗ ನಾಣಚ್ಚಿ ಎಂಬಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹುಲಿ (Tiger) ಪತ್ತೆಯಾಯಿತು. 3.30ರ ಸುಮಾರಿಗೆ ಹುಲಿಗೆ ಅರವಳಿಕೆ ನೀಡಿ ಹಿಡಿಯಲಾಯಿತು.
ಇದನ್ನೂ ಓದಿ: Mahindra Xylo ಬನ್ನೇರುಘಟ್ಟದಲ್ಲಿ ಪ್ರವಾಸಿಗರಿದ್ದ ಸಫಾರಿ ಗಾಡಿಯನ್ನು ಎಳೆದಾಡಿದ ಹುಲಿ... ಆನಂದ್ ಮಹೀಂದ್ರಾ ಹೇಳಿದ್ದೇನು..!
ಸುಮಾರು 10 ವರ್ಷ ಪ್ರಾಯದ ಹೆಣ್ಣು ಹುಲಿ ಇದಾಗಿದ್ದು, ನಡೆದಾಡಲು ಸ್ವಲ್ಪ ಕಷ್ಟ ಪಡುತ್ತಿದ್ದು, ಕಾಲಿಗೆ ಗಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಗ್ರಾಮದ ಜಯರಾಮ್ ಅವರಿಗೆ ಸೇರಿದ 7 ಹಾಗೂ ಅನಿತಾ ಎಂಬವರ ಎರಡು ಮೇಕೆಗಳ (Goat) ಮೇಲೆ ಹುಲಿ ದಾಳಿ ನಡೆಸಿತ್ತು.
*ಪೊನ್ನಂಪೇಟೆ ತಾಲೂಕಿನ ಕುಟ್ಟ- ಬಾಡಗ ಗ್ರಾಮದಲ್ಲಿ ಒಂದೇ ದಿನ 9 ಮೇಕೆಗಳನ್ನು ಬಲಿ ಪಡೆದ ಹುಲಿ
*ಆತಂಕ ಮೂಡಿಸಿದ್ದ 10 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸೆರೆ
*ಹುಲಿ ಸೆರೆ ಹಿಡಿದು ಮೈಸೂರಿ ಮೃಗಾಲಯಕ್ಕೆ ರವಾನೆ