ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಹೌದು ಹುಲಿಯಾ ಕಲರವ ಮೊಳಗಿದೆ. ಸಮಾವೇಶದಲ್ಲಿ ಭಾಗಿಯಾಗಿದ್ದ ಕರಾವಳಿಯ ಹುಲಿವೇಷಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ವೇಷಧಾರಿಗಳು ಹೋದಲ್ಲೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಹೌದು ಹುಲಿಯಾ ಎಂದು ಚಿಯರ್ ಅಪ್ ಮಾಡಿದ್ದಾರೆ.
ಉಡುಪಿ: ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಹೌದು ಹುಲಿಯಾ ಕಲರವ ಮೊಳಗಿದೆ. ಸಮಾವೇಶದಲ್ಲಿ ಭಾಗಿಯಾಗಿದ್ದ ಕರಾವಳಿಯ ಹುಲಿವೇಷಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ವೇಷಧಾರಿಗಳು ಹೋದಲ್ಲೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಹೌದು ಹುಲಿಯಾ ಎಂದು ಚಿಯರ್ ಅಪ್ ಮಾಡಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಭರ್ಜರಿಯಾಗಿ ಪೂರ್ಣಗೊಂಡಿದೆ. ನಾಡಿನ ನಾನಾ ಭಾಗಗಳಿಂದ ಭಾಗವಹಿಸಿದ್ದ ಲಕ್ಷಾಂತರ ಜನರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಉಡುಪಿಯಿಂದಲೂ ಸಾವಿರಾರು ಜನರು ಸಮಾವೇಶಕ್ಕೆ ತೆರಳಿದ್ದು, ಕಿನ್ನಿ ಮೂಲ್ಕಿಯ ಹುಲಿ ವೇಷ ತಂಡ ಎಲ್ಲರ ಮೆಚ್ಚುಗೆ ಪಡೆದಿದೆ.
ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಏಳು ಮಂದಿ ಹುಲಿವೇಷಧಾರಿಗಳ ತಂಡ ದಾವಣಗೆರೆಗೆ ತೆರಳಿತ್ತು. ಬೆಳ್ಳಂ ಬೆಳಗ್ಗೆ ಮೈಗೆಲ್ಲಾ ಬಣ್ಣ ಹಚ್ಚಿಕೊಂಡು ತಯಾರಾಗಿತ್ತು. ಹುಲಿ ವೇಷಧಾರಿಯೊಬ್ಬರ ಹೊಟ್ಟೆಯ ಮೇಲೆ ಸಿದ್ದರಾಮಯ್ಯ ಅವರ ಭಾವಚಿತ್ರದ ಪಡಿಯಚ್ಚು ಮೂಡಿಸಲಾಗಿತ್ತು. ಈ ಹುಲಿವೇಷಧಾರಿಗಳು ಕಾಂಗ್ರೆಸ್ ಕಾರ್ಯಕರ್ತರ ಮೆಚ್ಚುಗೆ ಪಡೆದರು. ಸಮಾವೇಶವೊಂದರಲ್ಲಿ ಸಿದ್ದರಾಮಯ್ಯ ಅವರನ್ನು ಹೌದು ಹುಲಿಯ ಎಂದು ಕರೆಯುವ ಮೂಲಕ, ಈ ಘೋಷಣೆ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಉಡುಪಿಯ ಹುಲಿವೇಷಗಳನ್ನು ಕಂಡು ದಾವಣಗೆರೆಯಲ್ಲಿ ಸೇರಿದ್ದ ಲಕ್ಷಾಂತರ ಕಾರ್ಯಕರ್ತರು ಹೌದು ಹುಲಿಯಾ.. ಎಂದು ಘೋಷಣೆಗಳನ್ನು ಕೂಗಿದ್ದಾರೆ. ಜೊತೆಗೆ ತಾಸೆಯ ಪೆಟ್ಟಿಗೆ ಕರಾವಳಿಯ ಅಪ್ಪಟ ಜನಪದೀಯ ಶೈಲಿಯಲ್ಲಿ ಈ ವೇಷಧಾರಿಗಳು ಹುಲಿವೇಷ ಕುಣಿದಿದ್ದಾರೆ.
Siddaramotsava: ‘ಮೈಸೂರು ಹುಲಿಯಾ’, ‘ಸೆಲ್ಫ್ ಮೇಡ್ ಸಿದ್ದಣ್ಣ’ ಹಾಡು ರೆಡಿ
ಮೆರವಣಿಗೆಯಲ್ಲಿಯೇ ಸುಮಾರು ಹತ್ತು ಕಿಲೋ ಮೀಟರ್ ದೂರ ಕುಣಿಯುತ್ತಾ ಸಾಗಿದ್ದಾರೆ. ಏಳು ಮಂದಿ ವೇಷಧಾರಿಗಳು ಮತ್ತು ತಾಸೆಯ ಜೊತೆಗೆ 15 ಮಂದಿಯ ತಂಡ ದಾವಣಗೆರೆ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಮಾಡಿದ್ದಾರೆ. ಹೋದಲ್ಲೆಲ್ಲ ಜನರು ಹೌದು ಹುಲಿಯಾ..ಹೌದು ಹುಲಿಯಾ... ಎಂದು ಹುಲಿ ವೇಷಧಾರಿಗಳನ್ನು ಬರ ಮಾಡಿಕೊಂಡಿದ್ದಾರೆ. ಜನರು ಅದೆಷ್ಟು ಈ ಹುಲಿವೇಷ ತಂಡವನ್ನು ಮೆಚ್ಚಿಕೊಂಡರು ಅಂದ್ರೆ, ಕೊನೆಗೂ ಈ ತಂಡಕ್ಕೆ ಸಮಾವೇಶ ನಡೆಯುವ ಸ್ಥಳ ತಲುಪಲು ಸಾಧ್ಯವಾಗಲೇ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಗಣೇಶರಾಜ ಸರಳಬೆಟ್ಟು ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.
'ಹುಲಿಯಾ VS ಕಾಡು ಮನುಷ್ಯ' ಸಿದ್ದು ಮಾತಿಗೆ ಕಟೀಲ್ ಅದ್ಭುತ ಕೌಂಟರ್!