ಶಾಸಕರಾಗಿಯೂ, ಸಂಸದರಾಗಿಯೂ ಆಯ್ಕೆಯಾಗುವ ಮೂಲಕ ಜಿಲ್ಲೆಯ ಮೂವರು ಜನಪ್ರತಿನಿಧಿಗಳು ಗಮನ ಸೆಳೆದಿದ್ದಾರೆ. ಸತತ ನಾಲ್ಕು ಬಾರಿ ತುಮಕೂರು ಸಂಸತ್ ಸದಸ್ಯರಾಗಿದ್ದ ಕೆ. ಲಕ್ಕಪ್ಪ ಅವರು ಎರಡು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು.
ತುಮಕೂರು : ಶಾಸಕರಾಗಿಯೂ, ಸಂಸದರಾಗಿಯೂ ಆಯ್ಕೆಯಾಗುವ ಮೂಲಕ ಜಿಲ್ಲೆಯ ಮೂವರು ಜನಪ್ರತಿನಿಧಿಗಳು ಗಮನ ಸೆಳೆದಿದ್ದಾರೆ. ಸತತ ನಾಲ್ಕು ಬಾರಿ ತುಮಕೂರು ಸಂಸತ್ ಸದಸ್ಯರಾಗಿದ್ದ ಕೆ. ಲಕ್ಕಪ್ಪ ಅವರು ಎರಡು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು.
1967, 1971,1977 ಹಾಗೂ 1980ರಲ್ಲಿ ಸತತ ನಾಲ್ಕು ಬಾರಿ ಕ್ಷೇತ್ರವನ್ನು ಕೆ.ಲಕ್ಕಪ್ಪ ಅವರು ಪ್ರತಿನಿಧಿಸಿದ್ದರು. 1967ರ ಲೋಕಸಭಾ ಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಲಕ್ಕಪ್ಪ ಅವರು 1 ಲಕ್ಷ 15 ಸಾವಿರದ 312 ಮತಗಳನ್ನು ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಿ.ಆರ್. ಬಸಪ್ಪ ಅವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.
undefined
1971ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ. ಲಕ್ಕಪ್ಪ ಅವರು 2 ಲಕ್ಷ 40 ಸಾವಿರದ 718 ಮತಗಳನ್ನು ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಂ.ಆರ್. ರಾಮಣ್ಣ ಅವರನ್ನು ಸೋಲಿಸಿ ಎರಡನೇ ಬಾರಿ ಸಂಸತ್ ಪ್ರವೇಶಿಸಿದರು.
1977ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ. ಲಕ್ಕಪ್ಪ ಅವರು 2 ಲಕ್ಷ 37 ಸಾವಿರದ 86 ಮತ ಪಡೆದು ಭಾರತೀಯ ಲೋಕದಳದ ಅಭ್ಯರ್ಥಿ ಎಸ್. ಮಲ್ಲಿಕಾರ್ಜುನಯ್ಯ ಅವರನ್ನು ಪರಾಭವಗೊಳಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. 1980ರ ಚುನಾವಣೆಯಲ್ಲಿ ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ. ಲಕ್ಕಪ್ಪ ಅವರು 2 ಲಕ್ಷ 43 ಸಾವಿರದ 229 ಮತ ಪಡೆದು ಜನತಾ ಪಕ್ಷದಿಂದ ಎಸ್. ಮಲ್ಲಿಕಾರ್ಜುನಯ್ಯ ಅವರನ್ನು ಪರಾಭವಗೊಳಿಸಿ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಿದ್ದರು.
1962ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಲಕ್ಕಪ್ಪ ಅವರು ಹೆಬ್ಬೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅಂದು ನಡೆದ ಚುನಾವಣೆಯಲ್ಲಿ ಲಕ್ಕಪ್ಪ ಅವರು ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ 21 ಸಾವಿರದ 822 ಮತ ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೆ.ಎಲ್. ನರಸಿಂಹಯ್ಯ ಅವರನ್ನು ಪರಾಭವಗೊಳಿಸಿದ್ದರು.
ಹಾಗೆಯೇ 1989ರ ವಿಧಾನಸಭಾ ಚುನಾವಣೆಯಲ್ಲಿ ಕೆ. ಲಕ್ಕಪ್ಪ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಂದು ನಡೆದ ಚುನಾವಣೆಯಲ್ಲಿ ಕೆ. ಲಕ್ಕಪ್ಪ ಅವರು 34 ಸಾವಿರದ 942 ಮತ ಪಡೆದು ಜನತಾದಳದಿಂದ ಸ್ಪರ್ಧಿಸಿದ್ದ ವೈ.ಕೆ. ರಾಮಯ್ಯ ಅವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
1996ರ ಲೋಕಸಭಾ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಸಿ.ಎನ್. ಭಾಸ್ಕರಪ್ಪ ಅವರು 1 ಲಕ್ಷ 92 ಸಾವಿರದ 228 ಮತ ಪಡೆದು ಬಿಜೆಪಿಯ ಎಸ್. ಮಲ್ಲಿಕಾರ್ಜುನಯ್ಯ ಅವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಹಾಗೆಯೇ 1985ರ ಚುನಾವಣೆಯಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ 36 ಸಾವಿರದ 909 ಮತ ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಿ. ಶಿವಮೂರ್ತಿ ಅವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಒಂದು ಬಾರಿ ಬಳಿಕ ಎರಡು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.
ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಪಿ. ಮುದ್ದಹನುಮೇಗೌಡರು 4 ಲಕ್ಷ 29 ಸಾವಿರದ 868 ಮತಗಳನ್ನು ಪಡೆದು ಬಿಜೆಪಿಯ ಬಸವರಾಜು ವಿರುದ್ಧ ಜಯ ದಾಖಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಆ ಚುನಾವಣೆಯಲ್ಲಿ ಜಿ.ಎಸ್. ಬಸವರಾಜು ಅವರು 3 ಲಕ್ಷ 55 ಸಾವಿರದ 829 ಮತಗಳನ್ನು ಪಡೆದಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿಯಿಂದಾಗಿ ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ತುಮಕೂರು ಕ್ಷೇತ್ರವನ್ನು ಬಿಟ್ಟು ಕೊಟ್ಟಿತ್ತು. ಸ್ವತಃ ದೇವೇಗೌಡರೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿತ್ತು.
1994ರ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡರು 37 ಸಾವಿರದ 823 ಮತಗಳನ್ನು ಪಡೆದು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ವೈ.ಕೆ. ರಾಮಯ್ಯ ವಿರುದ್ಧ ಜಯಗಳಿಸಿದರು. ಆ ಚುನಾವಣೆಯಲ್ಲಿ ವೈ.ಕೆ. ರಾಮಯ್ಯ ಅವರು 28 ಸಾವಿರದ 666 ಮತಗಳನ್ನು ಪಡೆದಿದ್ದರು.
ಹಾಗೆಯೇ 1999ರ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್‌ನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡರು 45 ಸಾವಿರದ 659 ಮತಗಳನ್ನು ಪಡೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ನಿಂಗಪ್ಪ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆ ಚುನಾವಣೆಯಲ್ಲಿ ಎಚ್. ನಿಂಗಪ್ಪ ಅವರು 42 ಸಾವಿರದ 78 ಮತಗಳನ್ನು ಪಡೆದಿದ್ದರು.