ಸೂಡಾನ್‌ ಹಿಂಸಾಚಾರ: ಮಗಳು-ಅಳಿಯನ ರಕ್ಷಣೆಗೆ ಮಹಿಳಾ ಶಕ್ತಿ ಶಿರೋಮಣಿ ಪ್ರಶಸ್ತಿ ಪುರಸ್ಕೃತ ಕುಮುದ ಮನವಿ

By Kannadaprabha News  |  First Published Apr 23, 2023, 11:09 AM IST

ಕುಮುದ ಅವರ ಮಗಳು ರಾಜೇಶ್ವರಿ ಮತ್ತು ಅಳಿಯ ಅಬ್ರಾಂ ಅವರು ಸೂಡಾನ್‌ಗೆ ಏ.13 ರಂದು ತೆರಳಿದ್ದು, ಅಲ್ಲಿ ಸದ್ಯ ನಡೆಯುತ್ತಿರುವ ಸೇನಾ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷ ಸಂದರ್ಭದಲ್ಲಿ ಸಿಲುಕಿಕೊಂಡಿದ್ದಾರೆ, ಇವರಂತೆಯೇ ರಾಜ್ಯದಿಂದ ತೆರಳಿದ ನೂರಾರು ಕನ್ನಡಿಗರು ಅಲ್ಲಿನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣೆಗೆ ಮನವಿ ಮಾಡಿದ್ದಾರೆ.


ತರೀಕೆರೆ (ಏ.23) : ಪಟ್ಟಣದ ಮೆಸ್ಕಾಂನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿರುವ, ಹಕ್ಕಿ ಪಿಕ್ಕಿ ಜನಾಂಗದ, ಇಂಡೋ-ನೇಪಾಳ್‌ ಸಮರಸ್‌ ಮಂಚ್‌ (On behalf of the Indo-Nepal Samaras Manch)ವತಿಯಿಂದ ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಶಕ್ತಿ ಶಿರೋಮಣಿ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕದ ಏಕೈಕ ಮಹಿಳೆ ಕುಮುದ ಅವರ ಮಗಳು ರಾಜೇಶ್ವರಿ, ಅಳಿಯ ಅಬ್ರಾಂ ಸೇರಿದಂತೆ ಸೂಡಾನ್‌ನಲ್ಲಿ ಸೇನಾ ಮತ್ತು ಅರೆಸೇನಾ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಸಿಲುಕಿಕೊಂಡಿರುವ ಎಲ್ಲಾ ಕನ್ನಡಿಗರನ್ನು ರಕ್ಷಿಸಿ ಸುರಕ್ಷಿತವಾಗಿ ತಾಯಿನಾಡಿಗೆ ಕರೆಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ,

ಕುಮುದ ಅವರ ಮಗಳು ರಾಜೇಶ್ವರಿ ಮತ್ತು ಅಳಿಯ ಅಬ್ರಾಂ ಅವರು ಸೂಡಾನ್‌ಗೆ ಏ.13 ರಂದು ತೆರಳಿದ್ದು, ಅಲ್ಲಿ ಸದ್ಯ ನಡೆಯುತ್ತಿರುವ ಸೇನಾ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷ ಸಂದರ್ಭದಲ್ಲಿ ಸಿಲುಕಿಕೊಂಡಿದ್ದಾರೆ, ಇವರಂತೆಯೇ ರಾಜ್ಯದಿಂದ ತೆರಳಿದ ನೂರಾರು ಕನ್ನಡಿಗರು ಅಲ್ಲಿನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

Latest Videos

undefined

 

ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಕನ್ನಡಿಗರು ಸೇರಿ 3000 ಭಾರತೀಯರ ರಕ್ಷಣೆಗೆ ಏರ್‌ಲಿಫ್ಟ್‌ ಮಾಡಲು ಮೋದಿ ಸೂಚನೆ

ದಕ್ಷಿಣ ಅಪ್ರಿಕಾದ ಸೂಡಾನ್‌ (Sudan, South Africa)ಮತ್ತಿತರ ಪ್ರದೇಶಗಳಿಗೆ ಇವರಂತೆ ರಾಜ್ಯದ ಹಲವಾರು ಕನ‚್ನಡಿಗರು ತರೆಳಿ ಅಲ್ಲಿ ಸಿಲುಕಿಕೊಂಡಿದ್ದು, ಅನ್ನಾಹಾರ ವಿಲ್ಲದೆ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ ಎಂದು ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ಸಭೆ ನಡೆಸಿ ಅವರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕರೆಸಿಕೊಳ್ಳಲು, ಬಂಧು ಬಳಗ ಮಕ್ಕಳೊಂದಿಗೆ ಸೇರಿಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕೆಂದು ಅವರು ಕನ್ನಡಪ್ರಭಕ್ಕೆ ಈ ಮಾಹಿತಿ ನೀಡಿ ಮನವಿ ಮಾಡಿದ್ದಾರೆ.

ಮೂಲತಃ ಅದಿವಾಸಿಗಳಾದ ಈ ಸಮುದಾಯ ಕಾಡಿನಲ್ಲಿ ವಾಸವಾಗಿದ್ದು ಇತ್ತೀಚಿನ ಅರಣ್ಯ ಕಾಯಿದೆಯಿಂದಾಗಿ ಕಾಡಿನಿಂದ ನಾಡಿಗೆ ಬರುವಂತಾದುದರಿಂದ ನೌಕರಿ ಸಿಗದೆ ತಮ್ಮ ಬದುಕಿಗಾಗಿ ಸಣ್ಣ ಪುಟ್ಟಕರಕುಶಲ ವಸ್ತುಗಳ ವ್ಯಾಪಾರ ತಮಗೆ ತಿಳಿದ ಗಿಡಮಮೂಲಿಕೆಗಳಿಂದ ವೈದ್ಯೋಪಚಾರ ನಡೆಸುತ್ತಾ ಜೀವನ ಸಾಗಿಸುವಂತಾಗಿದೆ ಎಂದು ಎಇಇ ಕುಮುದ ತಿಳಿಸಿದ್ದಾರೆ.

ದುಡ್ಡಿಲ್ಲ, ಫುಡ್ಡಿಲ್ಲ... ಕಾಪಾಡಿ: ಸೂಡಾನ್ ಕನ್ನಡಿಗರ ಮೊರೆ

click me!