ಮಸ್ಕಿ: ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್‌, ಹಸೆಮಣೆ ಏರಬೇಕಿದ್ದ ವಧು ಸೇರಿ ಮೂವರ ದುರ್ಮರಣ

Kannadaprabha News   | Asianet News
Published : Jan 20, 2021, 11:34 AM IST
ಮಸ್ಕಿ: ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್‌, ಹಸೆಮಣೆ ಏರಬೇಕಿದ್ದ ವಧು ಸೇರಿ ಮೂವರ ದುರ್ಮರಣ

ಸಾರಾಂಶ

ಗೆಳೆಯರಿಗೆ ವಿವಾಹ ಮಹೋತ್ಸವ ಆಮಂತ್ರಣ ಪತ್ರಿಕೆ ಕೊಡುವುದಕ್ಕಾಗಿ ತೆರಳುವ ವೇಳೆ ಅಪಘಾತ| ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದ ಘಟನೆ| ಈ ಸಂಬಂಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲು| 

ಮಸ್ಕಿ(ಜ.20): ವಿವಾಹ ಆಮಂತ್ರಣ ಪತ್ರಿಕೆ ವಿತರಿಸಲು ವಾಹನದ ಮೇಲೆ ತೆರಳುತ್ತಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರಭಾಗದಲ್ಲಿ ಜರುಗಿದೆ. ತಾಲೂಕಿನ ಅಡವಿಬಾವಿ ಗ್ರಾಮದ ರಜೀಯಾ ಬೇಗಂ(23), ಅರುಣಾಕ್ಷಿ(22) ಹಾಗೂ ವೀರೇಶ(23) ಅಪಘಾತದಲ್ಲಿ ಮೃತಪಟ್ಟವರು. 

ರಜೀಯಾ ಬೇಗಂ ಇದೇ ಜ. 24 ರಂದು ಮದುವೆ ನಿಶ್ಚಯಗೊಂಡಿದ್ದು, ಗೆಳೆಯರೆಲ್ಲರಿಗೂ ವಿವಾಹ ಮಹೋತ್ಸವ ಆಮಂತ್ರಣ ಪತ್ರಿಕೆಯನ್ನು ಕೊಡುವುದಕ್ಕಾಗಿ ಉಳಿದ ಸ್ನೇಹಿತರಾದ ಅರುಣಾಕ್ಷಿ, ವಿರೇಶ ಜೊತೆ ಬೈಕ್‌ ಮೇಲೆ ಹೋಗುತ್ತಿದ್ದರು. 

ಲಾರಿ ಹರಿದು 15 ವಲಸೆ ಕಾರ್ಮಿಕರ ಸಾವು!

ಈ ಸಮಯದಲ್ಲಿ ಸವಾರ ವೀರೇಶ ವೇಗವಾಗಿ ಬೈಕ್‌ನ್ನು ಚಲಾಯಿಸಿ ಹೆದ್ದಾರಿ ಪಕ್ಕದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು