Yadgir Accident: ಬೂಲೆರೋ- ಬೈಕ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ

By Girish Goudar  |  First Published May 1, 2022, 12:28 PM IST

* ಯಾದಗಿರಿ ತಾಲೂಕಿನ ಬಾಚವಾರ್ ಸಮೀಪ ನಡೆದ ಘಟನೆ
*  ಬೂಲೆರೋ ಡಿಕ್ಕಿ ಹೊಡೆದ ರಭಸಕ್ಕೆ ನುಜ್ಜುಗುಜ್ಜಾದ ಬೈಕ್
*  ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು 
 


ಯಾದಗಿರಿ(ಮೇ.01): ಬೂಲೆರೋ ವಾಹನ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ(Collision) ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ(Death) ಘಟನೆ ಯಾದಗಿರಿ(Yadgir) ತಾಲೂಕಿನ ಬಾಚವಾರ್ ಸಮೀಪ ನಿನ್ನೆ(ಶನಿವಾರ) ಸಂಜೆ ಸಂಭವಿಸಿದೆ. ಬಸವರಾಜ್(24), ಬಸವರಾಜ್ ಮೇದಾರ(23) ಹಾಗೂ ಶಿವಪ್ಪ(25) ದುರ್ಘಟನೆಯಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. 

ಬೂಲೆರೋ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ. ಬೈಕ್ ಸವಾರರು ಯಾದಗಿರಿಯಿಂದ ಭೀಮನಹಳ್ಳಿಗೆ ಹೋಗುತ್ತಿದ್ದರು ಅಂತ ತಿಳಿದು ಬಂದಿದೆ. ಮೃತರು ಕಲಬುರಗಿ(Kalaburagi) ಜಿಲ್ಲೆ ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ನಿವಾಸಿಗಳಾಗಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. 

Tap to resize

Latest Videos

undefined

ಲವರ್ ಜೊತೆ ತಿರುಗಾಟ, ಗಾಡಿ ಹತ್ತಿಸಿ ಸಹೋದರಿ ಕೊಲ್ಲಲು ಯತ್ನ : ಸಿಸಿಟಿವಿಯಲ್ಲಿ ಸೆರೆ

ಘಟನಾ ಸ್ಥಳಕ್ಕೆ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ. ಈ ಸಂಬಂಧ ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಯುವತಿ ದುರ್ಮರಣ

ಬಳ್ಳಾರಿ(Ballari): ಸಾವು ಯಾವ ರೂಪದಲ್ಲಾದ್ರೂ ಬರುತ್ತದೆ ಅನ್ನೋದಕ್ಕೆ ‌ಈ ಪ್ರಕರಣ ಸಾಕ್ಷಿಯಾಗಿದೆ. ಹೌದು, ಅವರಿಬ್ಬರು ಪ್ರೇಮಿಗಳೋ ಗೆಳೆಯರೋ ಗೊತ್ತಿಲ್ಲ, ಆದ್ರೇ ಅಪಘಾತದಲ್ಲಿ(Accident) ಯುವತಿ ಸಾವನ್ನಪ್ಪಿದ್ದಾಳೆ. ಇದಕ್ಕೆ ಯುವಕನಂತೂ ಕಾರಣವಲ್ಲ ಆದ್ರೆ ದುರ್ವಿಧಿಯ ಅಟಕ್ಕೆ ಯುವತಿ ಬಲಿಯಾಗಿದ್ದಾಳೆ.

ಟಾಟಾ ಏಸ್ ವಾಹನ ಪಲ್ಟಿ, ಒಬ್ಬನ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಬಳ್ಳಾರಿ ಮೂಲದ ನಂದೀಶ ಮತ್ತು ಅಶ್ವಿನಿ ಬೈಕ್ ಮೇಲೆ ಕುರುಗೋಡು ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ಆದ್ರೆ ವಾಪಸ್ ಬರೋವಾಗ ಕಾರೊಂದು (ಕ್ಸೈಲೋ)ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಪರಸ್ಪರ ಎರಡು ಕುಟುಂಬಕಗಳಿಗೂ ಇವರಿಬ್ಬರ ಸ್ನೇಹದ ಬಗ್ಗೆ ಗೊತ್ತಿಲ್ಲ. ಘಟನೆ ಬಳಿಕ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಹೆಸರಲ್ಲಿ ಯುವಕ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!