* ಸರ್ಕಾರದ ಯೋಜನೆ ಅಕ್ಕಿಯೇ ಲೂಟಿಗೆ ಇಳಿದ ದಂಗೆಕೋರರು
* ಪಡಿತರ ಅಕ್ಕಿ ರೇಡ್ ಆದ್ರೂ ಕ್ರಮಕೈಗೊಳ್ಳದ ಅಧಿಕಾರಿಗಳು
* ಪಡಿತರ ಅಕ್ಕಿ ಸಿಕ್ಕರೂ ಕೇಸ್ ದಾಖಲಿಗೆ ಮಾತ್ರ ಸೀಮಿತ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು(ಮೇ.01): ಎರಡು ದೊಡ್ಡ ಕಾಲುವೆ ಹರಿಯುವುದರಿಂದ ಕಾಲುವೆ ನೀರು ನಂಬಿ ಜಿಲ್ಲೆಯಾದ್ಯಂತ ಒಳ್ಳೆಯ ಗುಣಮಟ್ಟದ ಭತ್ತವನ್ನು ಅತೀ ಹೆಚ್ಚು ಬೆಳೆಯುತ್ತಾರೆ. ರಾಯಚೂರು(Raichur) ಜಿಲ್ಲೆಯಲ್ಲಿ ಬೆಳೆಯುವ ಭತ್ತ(Paddy) ಮತ್ತು ಅಕ್ಕಿಗೆ ದೇಶದ ನಾನಾ ರಾಜ್ಯದಲ್ಲಿ ಭಾರೀ ಬೇಡಿಕೆಯಿದೆ. ಈ ಬೇಡಿಕೆಯನ್ನ ಬಂಡವಾಳ ಮಾಡಿಕೊಂಡು ಖದೀಮರು ಪಡಿತರ ಅಕ್ಕಿ ಲೂಟಿಗೆ ಮುಂದಾಗಿದ್ದಾರೆ.
undefined
ಪಡಿತರ ಅಕ್ಕಿ ಮೇಲೆ ದಂಧೆಕೋರರ ಕಣ್ಣು :
ರಾಯಚೂರು ಜಿಲ್ಲೆಯ 7 ತಾಲೂಕಿನ ರೈತರು(Farmers( ವರ್ಷಕ್ಕೆ ಎರಡು ಬೆಳೆ ಭತ್ತ ಬೆಳೆಯುತ್ತಾರೆ. ಹೀಗಾಗಿ ರಾಯಚೂರು ಜಿಲ್ಲೆಯಲ್ಲಿ ನೂರಾರು ರೈಸ್ ಮಿಲ್‌ಗಳು ಇವೆ. ನಿತ್ಯವೂ ಲಕ್ಷಾಂತರ ಕ್ವಿಂಟಾಲ್ ಅಕ್ಕಿ ತಮಿಳುನಾಡು(Tamil Nadu), ಮಹಾರಾಷ್ಟ್ರ(Maharashtra), ಗುಜರಾತ್(Gujarat) ಮತ್ತು ಕೇರಳಕ್ಕೆ(Kerala) ಸರಭರಾಜು ಆಗುತ್ತೆ. ಇದೇ ಬಂಡವಾಳ ಮಾಡಿಕೊಂಡ ಕೆಲ ಧಂಧೆಕೋರರು ಪಡಿತರ ಅಕ್ಕಿ ಮೇಲೆ ಕಣ್ಣು ಹಾಕಿ ಬಡವರಿಗೆ ಸೇರಬೇಕಾದ ರೇಷನ್ ಅಕ್ಕಿ ಪಾಲಿಶ್ ಮಾಡಿ ಬೇರೆ ರಾಜ್ಯಗಳಿಗೆ ರಾಯಚೂರು ಅಕ್ಕಿ ಎಂದು ಸಾಗಾಟ ಮಾಡುವ ದಂಧೆ ನಡೆಸಿದ್ದಾರೆ.
ರಾಯಚೂರು ಜಿಲ್ಲೆಗೆ ಕಾಡುತ್ತಿದೆ ಅಪೌಷ್ಟಿಕತೆ, ಅವಧಿಗೂ ಮುನ್ನವೇ ಶೇ.3ರಷ್ಟು ಗರ್ಭಿಣಿಯರ ಹೆರಿಗೆ
7 ತಾಲೂಕಿನಲ್ಲಿ ಇದ್ದಾರೆ ಅಕ್ಕಿ ಕಳ್ಳತನ ಮಾಡುವ ಕಿಂಗ್ ಪಿನ್ ಗಳು
ಸರ್ಕಾರ ಹಿಂದುಳಿದ ರಾಯಚೂರು ಜಿಲ್ಲೆಯ ಜನರ ಅಪೌಷ್ಟಿಕತೆ ದೂರ ಮಾಡಬೇಕೆಂದು ಹತ್ತಾರು ಯೋಜನೆಗಳು ಜಾರಿಗೆ ತಂದಿದೆ. ಆಹಾರ ಇಲಾಖೆ ಪಡಿತರ ವಿತರಣೆ ಮಾಡುತ್ತೆ, ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುತ್ತಿದೆ.ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ(Pregnant) ಊಟ ನೀಡಲಾಗುತ್ತಿದೆ. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಊಟಕ್ಕಾಗಿ ಸರ್ಕಾರ ಅಕ್ಕಿ ಸರಬರಾಜು ಮಾಡುತ್ತಿದೆ. ಇಂತಹ ಯೋಜನೆಗಳ ಮೇಲೆ ಕಣ್ಣು ಹಾಕಿದ ಖದೀಮರು ನಾನಾ ಮಾರ್ಗದ ಮುಖಾಂತರ ಪಡಿತರ ಅಕ್ಕಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಂಗ್ರಹಿಸಿದ ಅಕ್ಕಿ ರೈಸ್ ಮಿಲ್ ಗಳಿಗೆ ಸಾಗಿಸಿ ಅಲ್ಲಿ ಪಾಲಿಶ್ ಮಾಡಿ ತಾವೇ ಒಂದು ಬ್ರಾಂಡ್ ನೀಡಿ ಅಕ್ಕಿ ಸಾಗಾಟ ದಂಧೆ ನಡೆಸಿದ್ದಾರೆ. ರಾಯಚೂರು, ಮಾನವಿ, ಲಿಂಗಸೂಗೂರು ಸಿಂಧನೂರು, ಮಸ್ಕಿ ಹಾಗೂ ಸಿರವಾರ ಮತ್ತು ದೇವದುರ್ಗದಲ್ಲಿ ಈ ಪಡಿತರ ಅಕ್ಕಿ ಸಂಗ್ರಹಿಸುವ ಕಿಂಗ್ ಫಿನ್ ಗಳು ಇದ್ದಾರೆ. ಪಡಿತರ ಅಕ್ಕಿ ಹೇಗೆ ಸಂಗ್ರಹಿಸುತ್ತಾರೆ
ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಅಕ್ಕಿ ಸಂಗ್ರಹಿಸುವ ಕಿಂಗ್ ಪಿನ್ ಗಳು ಇದ್ದಾರೆ. ಬಡವರಿಗೆ ನೀಡಿದ ಪಡಿತರ ಅಕ್ಕಿಯನ್ನ 10-15 ರೂಪಾಯಿಗೆ ಹಳ್ಳಿ- ಹಳ್ಳಿಗೆ ಆಟೋ ಅಥವಾ ವಾಹನದ ಮುಖಾಂತರ ಹೋಗಿ ಖದೀಮ ಮಾಡುತ್ತಾರೆ. ಮತ್ತೊಂದು ಕಡೆ ಪಡಿತರ ವಿತರಣೆ ಮಾಡುವ ಅಂಗಡಿಗಳ ಜೊತೆಗೆ ಡಿಲ್ಲಿಂಗ್ ಮಾಡಿಕೊಂಡು ತಿಂಗಳಿಗೆ ಇಷ್ಟು ಚೀಲ ಅಕ್ಕಿ ನಮಗೆ ನೀಡುವಂತೆ ಒಪ್ಪಂದ ಮಾಡಿಕೊಂಡು ಅಕ್ಕಿ ಸಂಗ್ರಹಿಸುತ್ತಾರೆ..
ಸಂಗ್ರಹಿಸಿದ ಪಡಿತರ ಅಕ್ಕಿ ಏನು ಮಾಡುತ್ತಾರೆ
ಪಡಿತರ ಅಂಗಡಿ, ಕಿರಾಣಿ ಅಂಗಡಿ, ಅಂಗನವಾಡಿ, ಬಿಸಿಯೂಟ ಹಾಗೂ ವಸತಿ ನಿಲಯಗಳಿಂದ ಸಂಗ್ರಹಿಸಿದ ಪಡಿತರ ಅಕ್ಕಿ ಚೀಲಗಟ್ಟಲೇ ಕಿಂಗ್ ಫಿನ್ ಖರೀದಿ ಮಾಡುತ್ತಾನೆ. ತಾನು ಖರೀದಿ ಮಾಡಿದ ಸರ್ಕಾರದ ಅಕ್ಕಿಗೆ ರೈಸ್ ಮಿಲ್ ಗಳಿಗೆ ಸಾಗಾಟ ಮಾಡಿ ಅಲ್ಲಿ ಸಂಗ್ರಹಿಸಿ ತಮಗೆ ಬೇಕಾದಂತೆ ಅಕ್ಕಿಗೆ ಪಾಲಿಶ್ ಮಾಡಿಸಿ ಬೇರೆ ರಾಜ್ಯಗಳಿಗೆ ಸರಭರಾಜು ಮಾಡುತ್ತಾರೆ. ಈ ದಂಧೆ ರಾಯಚೂರು ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ರೂ ಅಧಿಕಾರಿಗಳು ಏಕೆ ಗಫ್ ಚುಪ್ ಆಗಿದ್ದಾರೆ
ಪಡಿತರ ಅಕ್ಕಿ ದಂಧೆಗೆ ಕಡಿವಾಣ ಹಾಕಲು ಸರ್ಕಾರ ವಿಶೇಷ ಕಮಿಟಿ ಮಾಡಿದ್ದಾರೆ. ಆಹಾರ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಕ್ಕಿ ಬಡವರ ಬದಲು ದಂಧೆಕೋರ ಕೈ ಸೇರುತ್ತಿದೆ.
ಬೆಟ್ಟದ ಹಂದಿ ಗೂಡಿನಲ್ಲಿ ಪತ್ತೆಯಾಯ್ತು ಪಡಿತರ ಅಕ್ಕಿ
ರಾಯಚೂರು ನಗರ ಹೊರವಲಯದ ಕೃಷ್ಣಗಿರಿ ಬೆಟ್ಟದಲ್ಲಿ ಬರೋಬ್ಬರಿ 405 ಪಡಿತರ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಹೋದ ಪಶ್ಚಿಮ ಠಾಣೆ ಪೊಲೀಸರು ಪಡಿತರ ಅಕ್ಕಿ ನೋಡಿ ಅಕ್ಷರಶಃ ಬೆರಗಾಗಿದ್ರು. ಒಂದಲ್ಲ- ಎರಡಲ್ಲ ಬರೋಬ್ಬರಿ 405 ಪಡಿತರ ಅಕ್ಕಿ ಮೂಟೆಗಳು ಬೆಟ್ಟದ ಸಮೀಪ ಬಿದ್ದಿರುವುದು ಕಂಡು ಪೊಲೀಸರು ಶಾಕ್ ಆಗಿದ್ರು. ರಾಯಚೂರಿನ ಗ್ರಾಮೀಣ ಭಾಗದ ಕಾರ್ಡುದಾರರಿಂದ ಈ ಪಡಿತರ ಅಕ್ಕಿಯನ್ನ ಸಂಗ್ರಹಿದ್ದ ದಂಧೆಕೋರರು ರಾತ್ರಿ ವೇಳೆ ಲೋಡ್ ಮಾಡಿ ಮಹಾರಾಷ್ಟ್ರ ಮತ್ತು ತಮಿಳುನಾಡಿಗೆ ಸಾಗಾಟ ಮಾಡ್ತಿದ್ರು ಎನ್ನಲಾಗಿದೆ.
ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಗೆ ಬೆದರಿಕೆ, ಗೂಗಲ್ ಪೇ ಮೂಲಕ ಹಣಕ್ಕೆ ಬೇಡಿಕೆ
ಸ್ಥಳಕ್ಕೆ ಪೊಲೀಸರು ಬರೋದನ್ನ ಅರಿತ ಖದೀಮರು ಸ್ಥಳದಲ್ಲಿ ಎಲ್ಲಾ ಅಕ್ಕಿ ಮೂಟ್ಟೆಗಳು ಹಾಗೂ ಲಾರಿ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸ್ಥಳದಲ್ಲಿ ಯಾರೂ ಆರೋಪಿಗಳು ಸಿಗದ ಕಾರಣಕ್ಕೆ ಲಾರಿ ಸಮೇತ ಹೆಸರಿಲ್ಲದ ಲಾರಿ ಚಾಲಕ ಹಾಗೂ ಮಾಲೀಕರ ಮೇಲೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂತಹ ಹತ್ತಾರು ಪ್ರಕರಣಗಳು ದಾಖಲಾದರೂ ಯಾರ ವಿರುದ್ಧವೂ ಈವರೆಗೆ ಕ್ರಮವಾಗಿಲ್ಲ..ಹೀಗಾಗಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಸಾಗಾಟದಂಧೆ ನಿರಂತರವಾಗಿ ನಡೆಯುತ್ತಿದೆ.
ಪಡಿತರ ಅಕ್ಕಿ ಸಿಕ್ಕರೂ ಕೇಸ್ ದಾಖಲಿಗೆ ಮಾತ್ರ ಸೀಮಿತ
ಜಿಲ್ಲೆಯ ವಿವಿಧೆಡೆ ಪಡಿತರ ಅಕ್ಕಿಯ ನೂರಾರು ಮೂಟ್ಟೆಗಳು ಸಿಕ್ಕಿದ್ರೂ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಾತ್ರ ದಾಖಲು ಆಗುತ್ತೆ. ಮುಂದಿನ ತನಿಖೆ ಮಾತ್ರ ಆಗುವುದಿಲ್ಲ..ಹೀಗಾಗಿ ಪಡಿತರ ಅಕ್ಕಿ ಸಾಗಾಟದ ದೊಡ್ಡ ಜಾಲ ಜಿಲ್ಲೆಯಲ್ಲಿ ಬೇರೂರಿರೋದು ಅಧಿಕಾರಿಗಳು ಹಾಗೂ ಪೊಲೀಸರಿಗೆ ತಿಳಿದಿದ್ರೂ ಕ್ರಮ ಕೈಗೊಳ್ತಿಲ್ಲ. ಅಕ್ರಮದ ನೂಲ ಪತ್ತೆ ಹಚ್ಚದೇ ಹೆಸರಿಲ್ಲದ ಲಾರಿ ಚಾಲಕ ಹಾಗೂ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಇವೆಲ್ಲಾ ಅಧಿಕಾರಿಗಳು ಹಾಗೂ ಪೊಲೀಸರು ಕೃಪಕಟಾಕ್ಷದಿಂದಲೇ ನಡೆಯುತ್ತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇನ್ನೂ ಮುಂದಾದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಪಡಿತರ ಅಕ್ಕಿ ದಂಧೆಗೆ ಕಡಿವಾಣ ಹಾಕುತ್ತಾರೋ ಕಾದುನೋಡಬೇಕಾಗಿದೆ.