ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯನ್ನು ಕಣ್ಣಿದ್ದವರು ನೋಡುತ್ತಾರೆ, ಕಿವಿ ಇದ್ದವರು ಕೇಳುತ್ತಾರೆ. ಎರಡೂ ಇಲ್ಲದವರು ಏನೂ ಮಾಡಿಲ್ಲವೆಂದು ಹೇಳುತ್ತಾರೆ ಎಂದು ಶಾಸಕ ಸಿ ಟಿ ರವಿ ಹೇಳಿದರು.
ಕಡೂರು (ಡಿ.14): ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯನ್ನು ಕಣ್ಣಿದ್ದವರು ನೋಡುತ್ತಾರೆ, ಕಿವಿ ಇದ್ದವರು ಕೇಳುತ್ತಾರೆ. ಎರಡೂ ಇಲ್ಲದವರು ಏನೂ ಮಾಡಿಲ್ಲವೆಂದು ಹೇಳುತ್ತಾರೆ ಎಂದು ಶಾಸಕ ಸಿ ಟಿ ರವಿ ಹೇಳಿದರು. ತಾಲೂಕಿನ ಸಖರಾಯಪಟ್ಟಣ ಸಮೀಪದ ಬಾಣೂರು ಗ್ರಾಮದಲ್ಲಿ 3.45 ಕೋಟಿ ರು. ವೆಚ್ಚದಲ್ಲಿ ಸಖರಾಯಪಟ್ಟಣ -ಬಾಣಾವರ ರಸ್ತೆಯ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಣೂರು ಗ್ರಾ.ಪಂ. ಗೆ ಇದಷ್ಟೇ ಅಲ್ಲದೆ 17 ಕೋಟಿ ರು. ಗಳ ಕಾಮಗಾರಿಯನ್ನು ಯಾರೂ ಮಾತನಾಡದ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇನೆ.
ಸಖರಾಯಪಟ್ಟಣ- ಬಾಣಾವಾರ ರಸ್ತೆಗೆ 8 ಕೋಟಿ ರು. ಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಏನೂ ಮಾಡದಿದ್ದರೆ ಮೆಡಿಕಲ್ ಕಾಲೇಜು ಬರುತಿತ್ತೆ? ಕಡೂರು ಚಿಕ್ಕಮಗಳೂರು ರಸ್ತೆ ಆಗುತಿತ್ತೆ? ಇದನ್ನೆಲ್ಲಾ ಕಣ್ಣಿದ್ದವರು ನೋಡಲಿ, ಕಿವಿ ಇದ್ದವರು ಕೇಳಲಿ. ಏನೇ ಆಗಲಿ ಅಭಿವೃದ್ಧಿಯೇ ನನ್ನ ಮೂಲಮಂತ್ರ ಎಂದರು. ಗ್ರಾ.ಪಂ. ಅಧ್ಯಕ್ಷೆ ಮಮತಾ ಮಾತನಾಡಿ, ಈ ಸೇತುವೆ ಬಹಳ ವರ್ಷಗಳಿಂದ ಶಿಥಿಲಗೊಂಡಿತ್ತು, ಈಗ ಆಗುತ್ತಿರುವುದು ಸಂತಸ ತಂದಿದೆ. ಇದರಿಂದ ಅನೇಕ ಗ್ರಾಮಗಳಿಗೆ ಹೋಗಲು ಅನುಕೂಲವಾಗಲಿದೆ.
undefined
Assembly election: ಜೆಡಿಎಸ್ ನಿಂದ ಬಿಜೆಪಿಗೆ ಎಂದ ಅಶೋಕ್ ಹೇಳಿಕೆಗೆ ವ್ಯತಿರಿಕ್ತ ಉತ್ತರ ನೀಡಿದ ಸಿಟಿ ರವಿ
ಶಾಸಕ ಸಿ. ಟಿ. ರವಿಯವರು ಬಾಣೂರು ಗ್ರಾ.ಪಂ. ಗೆ ಎಲ್ಲಾ ತರಹದ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಅದರಲ್ಲಿ ಅಂಬೇಡ್ಕರ್ ಭವನ ಸೇರಿದಂತೆ ಅನೇಕ ಅಭಿವೃದ್ಧಿಗಳನ್ನು ಮಾಡಿ ಮನೆ ಮಾತಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ. ನ ಮಾಜಿ ಅಧ್ಯಕ್ಷ ಕಲ್ಮರುಡಪ್ಪ, ಎಇಇ ಗವಿರಂಗಪ್ಪ, ಗ್ರಾ.ಪಂ.ಉಪಾಧ್ಯಕ್ಷೆ ರುಕ್ಮಿಣಿಬಾಯಿ , ಸದಸ್ಯರಾದ ನವೀನ್‌ಕುಮಾರ್, ಸುನಂದ, ಮುಖಂಡರಾದ ರಾಕೇಶ್, ವಿಜಯಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಚಾಲನೆ: ನಗರದ ಆಜಾದ್ ಪಾರ್ಕ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎರಡೂ ಬದಿಗಳಲ್ಲಿ ಸುಮಾರು .39 ಲಕ್ಷ ವೆಚ್ಚದ ಫುಟ್‌ಪಾತ್ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರಸಭೆ ಕಚೇರಿ ಮುಂಭಾಗದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ನಗರ ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸುವ ಜತೆಗೆ ನಗರದ ಪಾರ್ಕ್ಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ. 146 ಪಾರ್ಕ್ಗಳನ್ನು ಗುರುತಿಸಿ ಇ-ಖಾತೆ ಮಾಡುವ ಜತೆಗೆ ಒತ್ತುವರಿಯಾದ ಜಾಗ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಪಿಎಫ್‌ಐ, ಸಿಎಫ್‌ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ: ಸಿ.ಟಿ.ರವಿ
ಕಳೆದ 2 ವರ್ಷಗಳಿಂದ ಇದ್ದ ಬೀದಿದೀಪದ ಸಮಸ್ಯೆಯಿಂದ ಹಲವು ಬಾರಿ ನಗರಸಭೆಗೆ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಇಡೀ ನಗರಕ್ಕೆ 12 ಸಾವಿರ ಎಲ್‌ಇಡಿ ದೀಪ ಅಳವಡಿಕೆ ಮಾಡಲು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರೊಂದಿಗೆ ಚರ್ಚಿಸಿ ಶೀಘ್ರ ಕೆಲಸವನ್ನು ಪ್ರಾರಂಭಿಸುವಂತೆ ಒತ್ತಾಯ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ವೆಂಕಟೇಶ್, ನಗರಸಭಾ ಸದಸ್ಯರಾದ ರೂಪ ಕುಮಾರ್, ಸುಜಾತ ಶಿವಕುಮಾರ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಎಂಜಿನಿಯರ್ ಚಂದನ್ ಉಪಸ್ಥಿತರಿದ್ದರು.