ಜನಸೇವೆ ಮಾಡಿ ಎಂದರೆ ಶಾಸಕ ಸ್ಥಾನ ಮಾರಿದ್ದಾರೆ: ಜವರಾಯಿ ಗೌಡ

By Web DeskFirst Published Nov 18, 2019, 2:58 PM IST
Highlights

ಜನಸೇವೆ ಮಾಡಿ ಎಂದರೆ ಶಾಸಕ ಸ್ಥಾನವನ್ನು ಮಾರಾಟ ಮಾಡಿದ್ದಾರೆ ಎಂದು ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಹೇಳಿದ್ದಾರೆ. ಉಪಚುನಾವಣೆಗೆ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಇದು ಸತ್ಯ ಅಸತ್ಯದ ಹೋರಾಟ ನಡೆಯುತ್ತಿದೆ. ಜನರು ಸತ್ಯದ ಪರ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ಯಶವಂತಪುರ(ನ.18): ಜನಸೇವೆ ಮಾಡಿ ಎಂದರೆ ಶಾಸಕ ಸ್ಥಾನವನ್ನು ಮಾರಾಟ ಮಾಡಿದ್ದಾರೆ ಎಂದು ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಹೇಳಿದ್ದಾರೆ. ಉಪಚುನಾವಣೆಗೆ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಇದು ಸತ್ಯ ಅಸತ್ಯದ ಹೋರಾಟ ನಡೆಯುತ್ತಿದೆ. ಜನರು ಸತ್ಯದ ಪರ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ನಾಮಪತ್ರ ಸಲ್ಲಿಕೆ ಬಳಿಕ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮಾತನಾಡಿ, ನಾಮಪತ್ರ ಸಲ್ಲಿಸಿದ್ದೇನೆ, ಮತದಾರರು ನನ್ನ ಜೊತೆ ಇದ್ದಾರೆ. ನಾನು ಈ ಬಾರಿ ಖಂಡಿತ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಊರಿನವರ ಮಾತು ಕೇಳಿ ಮಗಳನ್ನೇ ವಿಧವೆಯಾಗಿಸಿದ ತಂದೆ..!

ಸೋಮಶೇಖರ್ ಅವರಿಗೆ ಅಭಿವೃದ್ಧಿ ಮಾಡಲು ಗೆಲ್ಲಿಸಿದ್ದರು. ಆದರೆ ಅವರು ತಮ್ಮನ್ನು ಮಾರಾಟ ಮಾಡಿಕೊಂಡಿದ್ದಾರೆ. ಜನಸೇವೆ ಮಾಡಿ ಎಂದರೆ ಶಾಸಕ ಸ್ಥಾನ ಮಾರಾಟ ಮಾಡಿದ್ದಾರೆ. ಇದು ಸತ್ಯ ಅಸತ್ಯದ ಹೋರಾಟ ನಡೆಯುತ್ತಿದೆ. ಜನರು ಸತ್ಯದ ಪರ ನಿಲ್ಲುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ಸೋಮಶೇಖರ್ ಅವರು ಐದು ವರ್ಷ ಇದ್ದರು. ಅವರದ್ದೇ ಸರ್ಕಾರ ಇದ್ದಾಗ ಯಾಕೆ‌ ಅಭಿವೃದ್ಧಿ ಮಾಡಿಲ್ಲ..? ನಿಮ್ಮದೇ ಸರ್ಕಾರ ಇದ್ದಾಗ ಲೂಟಿ ಹೊಡೆದರು. ಈಗ ಕೋಮುವಾದಿ ಪಕ್ಷದ ಜೊತೆ ಹೋಗಿದ್ದಾರೆ. ಅಮ್ಮ ನಾ ಸೇಲಾದೆ ಎಂದು ಜಗ್ಗೇಶ್ ಬಗ್ಗೆ ಮಾತನಾಡಿದ್ದರು. ಆದರೆ ಈಗ ಸೋಮಶೇಖರ್ ಸೇಲ್ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಮುಂದಿನ ಸಿಎಂ ನಿಖಿಲ್ ಕುಮಾರಸ್ವಾಮಿ ಎಂದ ಜೆಡಿಎಸ್ ಶಾಸಕ

ತಮ್ಮ ಜೇಬು ತುಂಬಿಸಿಕೊಂಡು ಮೋಸ ಮಾಡಿದ್ದಾರೆ. ನಿಮಗೆ ಹಣ ಹೊಡೆಯಲು ಕುಮಾರಸ್ವಾಮಿ ಇವರಿಗೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ಬೀಳಿಸಿದರು. ಕೊಳ್ಳೆ ಹೊಡೆಯಲು ಬಿಜೆಪಿಗೆ ಹೋಗಿದ್ದಾರೆ. ಅವರು ಸಾಕಷ್ಟು ಹಗರಣ ಮಾಡಿದ್ದಾರೆ. ಅನರ್ಹರಿಗೆ ಕೊಡಬೇಕಾ? ಅರ್ಹರಿಗೆ ಅವಕಾಶ ಕೊಡ್ತಾರಾ? ಜನ ನಮ್ಮ ಗೆಲುವಿನ ಬಗ್ಗೆ ನಿರ್ಧಾರ ಮಾಡ್ತಾರೆ ಎಂದು ಹೇಳಿದ್ದಾರೆ.

click me!