ಆಡಾಯ್ತು, ಕಾಮುಕರಿಂದ ಈಗ ಗೋವೂ ಸೇಫಲ್ಲ! ಬೆಂಗಳೂರಿನಲ್ಲಿ ಹೇಯ ಕೃತ್ಯ

Published : Jul 31, 2018, 05:27 PM ISTUpdated : Jul 31, 2018, 05:29 PM IST
ಆಡಾಯ್ತು, ಕಾಮುಕರಿಂದ ಈಗ ಗೋವೂ ಸೇಫಲ್ಲ! ಬೆಂಗಳೂರಿನಲ್ಲಿ ಹೇಯ ಕೃತ್ಯ

ಸಾರಾಂಶ

ಹಾಲು ಕೊಡುವ‌ ಗೋ ಮಾತೆ ಜೊತೆ ಕಾಮಚೇಷ್ಟೇ! ಗೋ ಮಾತೆಯನ್ನು ಕಾಮುಕರಿಂದ ರಕ್ಷಿಸುವಂತಹ ಪರಿಸ್ಥಿತಿ!

ಬೆಂಗಳೂರು:  ಹಾಲು ಕೊಡುವ ಗೋ ಮಾತೆಯನ್ನು ದೇವರಿಗೆ ಹೋಲಿಸಿ ಪೂಜಿಸುವ ನಾಡು ನಮ್ಮದು. ಆದರೆ ಇಂತಹ ನಾಡಿನಲ್ಲಿ ಕಾಮುಕನೋರ್ವ ಗೋ ಮಾತೆಯಾಗಿರುವ ಹಸುವಿನ ಮೇಲೆರಗಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿದ್ದ ಘಟನೆ ಬೆಳಕಿಗೆ ಬಂದಿದೆ.

ಹೆಣ್ಣು ಮಕ್ಕಳನ್ನು ರಕ್ಷಿಸುವಂತೆ ಇದೀಗ ಗೋ ಮಾತೆಯನ್ನು ಕಾಮುಕರಿಂದ ರಕ್ಷಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಘಟನೆ ನಡೆದಿರುವುದು ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣ ವ್ಯಾಪ್ತಿಯ ದೇವಸಂದ್ರದಲ್ಲಿ. 

ಸೋಮವಾರ ಮುಂಜಾನೆ ದೇವಸಂದ್ರದಲ್ಲಿ ಮುನಿರಾಜು ಹಾಗೂ ರತ್ನ ದಂಪತಿಗಳ ಎರಡು ಹಸುಗಳು ಕಳವಾಗಿದ್ದವು. ಈ ಸಂಬಂಧ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಈ ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಕೆ.ಆರ್.ಪುರಂ ಪೊಲೀಸರು ತನಿಖೆ ನಡೆಸುವ ಸಲುವಾಗಿ ಮತ್ತಷ್ಟು ಸಿಸಿಟಿವಿ ಪುಟೇಜ್ ಪರಿಶೀಲಿಸಿದಾಗ ಇಂತಹ ಘೋರ ಪ್ರಕರಣ ಬೆಳಕಿಗೆ ಬಂದಿದೆ. 

ಮಾದಕ ವಸ್ತು ಸೇವಿಸಿದ್ದ  8 ಮಂದಿ  ಕಾಮಾಂಧರು ಗರ್ಭಿಣಿ ಮೇಕೆಯೊಂದರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಇದರಿಂದ ಮೇಕೆ ಸತ್ತುಹೋಗಿರುವ ಘಟನೆ ಕೆಲದಿನಗಳ ಹಿಂದೆ ಹರ್ಯಾಣದಲ್ಲಿ ವರದಿಯಾಗಿತ್ತು.

ಇದನ್ನೂ ಓದಿ: 8 ಮಂದಿ ಸಾಮೂಹಿಕ ಅತ್ಯಾಚಾರ : ಗರ್ಭಿಣಿ ಮೇಕೆ ಸಾವು

 

PREV
click me!

Recommended Stories

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌, ಕಾರ್ಯಸಾಧ್ಯತಾ ವರದಿ ಬಗ್ಗೆ ಕರ್ನಾಟಕ ಪ್ರತಿಕ್ರಿಯೆ ನೀಡಿಲ್ಲ ಎಂದ ಕೇಂದ್ರ!
BPL Card Income Limit 1.80 ಲಕ್ಷಕ್ಕೆ ಏರಿಕೆ? ಸಚಿವ ಮುನಿಯಪ್ಪ ಕೊಟ್ಟ ಬಿಗ್ ಅಪ್ಡೇಟ್ ಏನು?