ಹೆಂಡತಿಯ ಅಕ್ರಮ ಸಂಬಂಧ: ಪತಿ ಆತ್ಮಹತ್ಯೆ

Published : Jul 16, 2018, 08:42 PM IST
ಹೆಂಡತಿಯ ಅಕ್ರಮ ಸಂಬಂಧ: ಪತಿ ಆತ್ಮಹತ್ಯೆ

ಸಾರಾಂಶ

ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿದ್ದ ಪತ್ನಿ ಡ್ರೈವರ್ ಜೊತೆ ಅಕ್ರಮ ಸಂಬಂಧ ಆರೋಪವಿತ್ತು ರಾಜಿ ಪಂಚಾಯಿತಿ ಮಾಡಿಸಿದ್ದರೂ ಸಮಸ್ಯೆ ಬಗೆ ಹರಿಯದ ಕಾರಣ ಆತ್ಮಹತ್ಯೆ ಶಂಕೆ

ಬೆಂಗಳೂರು[ಜು.16]: ಹೆಂಡತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದು ಪತಿ ಆತ್ಮಹತ್ಯೆ ಘಟನೆ ಬೆಂಗಳೂರಿನ ಜ್ಞಾನಗಂಗಾನಗರದಲ್ಲಿ ನಡೆದಿದೆ.

ಯೋಗೇಶ್ (37) ಆತ್ಮಹತ್ಯೆ ಮಾಡಿಕೊಂಡವ. ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿದ್ದ ಪತ್ನಿ ಡ್ರೈವರ್ ಜೊತೆ ಅಕ್ರಮ ಸಂಬಂಧ ಆರೋಪವಿದ್ದು ಈ ಬಗ್ಗೆ ಹೆಂಡತಿಗೆ ಸಾಕಷ್ಟು ಬುದ್ಧಿವಾದ ಹೇಳಲಾಗಿತ್ತು. ಊರಿನ ಹಿರಿಯರ ನೇತೃತ್ವದಲ್ಲಿ ಒಂದೆರಡು ಬಾರಿ ರಾಜಿ ಪಂಚಾಯಿತಿ ಕೂಡ ಮಾಡಿಸಲಾಗಿತ್ತು.

ಇಷ್ಟಾದರೂ ಹೆಂಡತಿ ಪರ ಪುರುಷನ ಸಂಬಂಧ ಬಿಡಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

PREV
click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!