Belagavi : ಬಾಯಿಗೆ ಬಟ್ಟೆ ತುರುಕಿ ಮಾಜಿ ಗ್ರಾಪಂ ಅಧ್ಯಕ್ಷನ ಮನೆ ಕಳ್ಳತನ

By Kannadaprabha News  |  First Published Oct 26, 2022, 5:28 AM IST

ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯನ ಮನೆಗೆ ದರೋಡೆಕೋರರ ಗುಂಪೊಂದು ದಾಳಿ ಮಾಡಿ ಮನೆಯವರ ಮೇಲೆ ಹಲ್ಲೆ ನಡೆಸಿ ಮಗನ ಸಾವಿನಿಂದ ಬಂದಿದ್ದ ವಿಮೆ ಹಣ .23 ಲಕ್ಷ, 120 ಗ್ರಾಮ ಚಿನ್ನಾಭರಣ ದೋಚಿ ಪರಾರಿಯಾಗಿದ ಘಟನೆ ಭಾನುವಾರ ಮಧ್ಯರಾತ್ರಿ ತಾಲೂಕಿನ ಕಟಕೋಳ ಪೊಲೀಸ್‌ ಠಾಣೆ ವ್ಯಾಪ್ತಿಯ ಬನ್ನೂರ ತಾಂಡಾದಲ್ಲಿ ನಡೆದಿದೆ


 ರಾಮದುರ್ಗ (ಅ.26):  ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯನ ಮನೆಗೆ ದರೋಡೆಕೋರರ ಗುಂಪೊಂದು ದಾಳಿ ಮಾಡಿ ಮನೆಯವರ ಮೇಲೆ ಹಲ್ಲೆ ನಡೆಸಿ ಮಗನ ಸಾವಿನಿಂದ ಬಂದಿದ್ದ ವಿಮೆ ಹಣ .23 ಲಕ್ಷ, 120 ಗ್ರಾಮ ಚಿನ್ನಾಭರಣ ದೋಚಿ ಪರಾರಿಯಾಗಿದ ಘಟನೆ ಭಾನುವಾರ ಮಧ್ಯರಾತ್ರಿ ತಾಲೂಕಿನ ಕಟಕೋಳ ಪೊಲೀಸ್‌ ಠಾಣೆ ವ್ಯಾಪ್ತಿಯ ಬನ್ನೂರ ತಾಂಡಾದಲ್ಲಿ ನಡೆದಿದೆ.

ತಾಲೂಕಿನ ಬನ್ನೂರ (Bannura)  ತಾಂಡಾದ ನಿವಾಸಿ ಬನ್ನೂರ ಪಂಚಾಯ್ತಿ (Grama Panchayat)  ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಚಂದ್ರು ರಜಪೂತ ಮನೆ ದರೋಡೆ ಮಾಡಲಾಗಿದೆ. ರಾತ್ರಿ ಮಲಗಿದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಕಾಲಿಂಗ್‌ ಬೆಲ್‌ ಒತ್ತಿದಾಗ ಚಂದ್ರ ಪತ್ನಿ ಬಾಗಿಲ ತೆರೆದಾಗ ಸುಮಾರು 7-8 ಜನರು ಒಳಗೆ ನುಗ್ಗಿ ತಲೆಗೆ ಬಡೆದು ಬಟ್ಟೆಯಿಂದ ಬಾಯಿ ಮುಚ್ಚಿ ನಂತರ ಚಂದ್ರ ರಜಪೂತ ಮತ್ತು ಸೊಸೆಯನ್ನು ಬಟ್ಟೆಯಿಂದ ಬಾಯಿ ಕಟ್ಟಿಹಾಕಿ ಟ್ರೇಜರಿ ಒಡೆದು ಅದರಲ್ಲಿದ್ದ ಸುಮಾರು .23 ಲಕ್ಷ ಹಣ ಮತ್ತು 120 ಗ್ರಾಂ ಬಂಗಾರದ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.

Latest Videos

undefined

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಮಗ ಆಕಸ್ಮಿಕ ನಿಧನ ಹೊಂದಿದ್ದರಿಂದ ಬಂದಿರುವ ವಿಮೆ ಹಣವನ್ನು ತಂದು ಮನೆಯಲ್ಲಿಟ್ಟಿದ್ದರು. ಇದೀಗ ಹಣವನ್ನುವನ್ನು ದರೋಡೆಕೋರರು ದೋಚಿಕೊಂಡು ಹೋಗಿದ್ದಾರೆ. ದರೋಡೆಕೋರರೆಲ್ಲ ಮುಸುಕುದಾರಗಳಾಗಿದ್ದು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು ಎಂದು ಚಂದ್ರು ತಿಳಿಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಪರಿಶೀಲಿಸಿದರು. ಪ್ರಕರಣ ಕಟಕೋಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಿಂಗ ನಂದಗಾಂವಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿ ಪರಿಶೀಲಿಸಿದರು.

1 ಕೋಟಿಗೆ ಬೇಡಿಕೆ : ಆರೋಪಿಗಳು ಅಂದರ್

ಮನುಷ್ಯನಿಗೆ ಈ ಅತಿ ಆಸೆ ಅನ್ನೋದು ಯಾವಾಗ್ ಹುಟ್ಟುತ್ತೋ ಹೇಳೋಕಾಗಲ್ಲ. ಜೀವನಕ್ಕೆ ಬೇಕಾದಷ್ಟಿದ್ರೂ ಕೆಲವರು ಅತಿ ಆಸೆಗೆ ಬಿದ್ದು ಎಂತೆಂಥ ಕೆಲಸ ಮಾಡ್ತಾರೆ. ಇವ್ನು ಅಷ್ಟೆ. ಫರ್ನಿಚರ್ಸ್ ಗೆ ಆರ್ಡರ್ ಕೊಟ್ಟವ ಅವ್ನ ದುಡ್ಡು,‌ ಐಶ್ವರ್ಯ ನೋಡಿ ಫರ್ನೀಚರ್ಸ್ ಓನರ್ ನೇ ಕಿಡ್ನಾಪ್ ಮಾಡಿದ್ದ!  ಕಾರಿನಲ್ಲಿ ಕಿಡ್ನಾಪ್ ಮಾಡಿದ್ದವ ಕಾರು ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.  ಹೆಚ್ಚಿನ ಹಣದ ಆಸೆಗಾಗಿ ಬ್ಯುಸಿನೆಸ್ ಮೆನ್ ಒಬ್ಬರನ್ನ ಕಿಡ್ನಾಪ್ ಮಾಡಿದ್ದ ಇಬ್ಬರು ಆರೋಪಿಗಳನ್ನ ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆನಂದ್ ಕುಮಾರ್, ಅಜ್ಗರ್ ಪಾಷ  ಎಂದು ಗುರುತಿಸಿದ್ದಾರೆ.  ಕಿಡ್ನಾಪ್ ಮಾಡಿ ಹಣ 40ಲಕ್ಷ ಹಣ ಈಸ್ಕೊಳ್ಳೋಕೆ ಬಂದಿದ್ದ ಈ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಅಂದ್ಹಾಗೆ ಬಂಧಿತ ಆರೋಪಿಗಳಲ್ಲಿ ಈ ಆನಂದ್ ಆರ್.ಟಿ ನಗರದ ನಿವಾಸಿ. ಫಾರ್ಮಾವೊಂದಕ್ಕೆ ಫರ್ನಿಚರ್ ಆರ್ಡರ್ ಮಾಡಿದ್ದ ಆರೋಪಿ ಚಿಕ್ ಪೇಟೆಯಲ್ಲಿರೋ ಫರ್ನೀಚರ್ಸ್ ಇಂಡಷ್ಟ್ರೀಸ್ ಅವ್ರನ್ನ ಕಾಂಟ್ಯಾಕ್ಟ್ ಮಾಡಿದ್ದ. ಅದರ ಮಾಲೀಕ ಮಹೇಂದ್ರ ಕುಮಾರ್ ಮತ್ತು ವಿಕಾಸ್ ಬೋರೆ ನೀಟಾಗಿ ಅವ್ರ ಕೆಲಸ ಮಾಡಿಕೊಟ್ಟಿದ್ರು. ಈ ವೇಳೆ ವಿಕಾಸ್ ಮನೆ, ಹಣ, ಐಶ್ವರ್ಯ ಅಂಥಸ್ಥಿನ ಬಗ್ಗೆ ತಿಳಿದುಕೊಂಡಿದ್ದ ಆರೋಪಿ ಕಳ್ಳದಾರಿ ಯೋಚನೆ ಮಾಡಿದ್ದ. ತನ್ನ ಸ್ನೇಹಿತ ಅರ್ಜಿತ್ ಎಂಬಾತನ ಜೊತೆ ಡಿಸ್ಕಸ್ ಮಾಡಿ ವಿಕಾಸ್ ನನ್ನ ಕಿಡ್ನಾಪ್ ಮಾಡಿ ಇವ್ರಿಂದ ಕೋಟಿ ಹಣ ಒಡೆಯೋ ಪ್ಲಾನ್ ಹಾಕಿದ್ರು.‌ 

ಪ್ಲಾನ್ ನಂತೆ ವಿಜಯನಗರದ ಆರ್.ಪಿಸಿ ಲೇಔಟ್ ನ ಮನೆಯಲ್ಲಿದ್ದ ವಿಕಾಸ್ ಬೋರೆನನ್ನ ಫರ್ನಿಚರ್ ಆರ್ಡರ್ ಕೊಡ್ಬೇಕು ಅಂತಾ ಉತ್ತರಹಳ್ಳಿಗೆ ಕರೆಸಿ ಕಿಡ್ನಾಪ್ ಮಾಡಿದ್ದಾರೆ. ಕಳೆದ 21ನೇ ತಾರೀಖು ಕಿಡ್ನಾಪ್ ಮಾಡಿ ಮಂಡ್ಯದತ್ತ ಕಾಲ್ಕಿತ್ತವರು ವಿಕಾಸ್ ತಂದೆ ಮಹೇಂದ್ರ ಕುಮಾರ್ ಗೆ ಕಾಲ್ ಮಾಡಿ ನಿಮ್ಮ ಮಗನನ್ನ ಕಿಡ್ನಾಪ್ ಮಾಡಿದ್ದೀವಿ, 1ಕೋಟಿ ಹಣ 15kg ಚಿನ್ನ ಕೊಟ್ರೆ ಬಿಡ್ತೀವಿ.. ಕಂಪ್ಲೆಂಟ್ ಗಿಂಪ್ಲೆಂಟ್ ಅಂತಾ ಹೋದ್ರೆ ಮಗನನ್ನ ಮುಗಿಸಿ ಬಿಡ್ತೀವಿ ಅಂತಾ ಬೆದರಿಕೆ ಹಾಕಿದ್ರು.

ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ, ಮರ್ಡರ್ ಆರೋಪಿಗಳ ಸುಳಿವು ನೀಡಿದ ಪೊಲೀಸ್ ನಾಯಿ!

ಇನ್ನು ಮಗನ ಕಿಡ್ನಾಪ್ ಬಗ್ಗೆ ಕಾಲ್ ಬಂದಿದ್ದೇ ತಡ ಮಹೇಂದ್ರ ಕುಮಾರ್ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದ.. ಕೂಡಲೇ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ವಿಶೇಷ ತಂಡ ರಚಿಸಿ ಆರೋಪಿ ಪತ್ತೆಗೆ  ಸೂಚನೆ ನೀಡಿದ್ರು.. ಕೂಡಲೇ ಅಲರ್ಟ್ ಆಗಿದ್ದ ವಿಜಯನಗರ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಹಾಗೂ ಅವರ ತನಿಖಾ ತಂಡ ಸತತವಾಗಿ ಆರೋಪಿಗಳನ್ನ ಟ್ರ್ಯಾಕ್ ಮಾಡಿ ಮಂಡ್ಯದ ಬಳಿ ಬಂಧಿಸಿದ್ದಾರೆ. ಒಂದು ಕೋಟಿಗೆ ಡಿಮ್ಯಾಂಡ್ ಮಾಡಿದ್ದವರು 40ಲಕ್ಷ ಹಣ ಈಸ್ಕೊಳ್ಳೋಕೆ ಬಂದಿದ್ದ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಶಿವಮೊಗ್ಗದಲ್ಲಿ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ, ಮೃತ ಹರ್ಷನ ಕುಟುಂಬಸ್ಥರಿಗೆ ಬೆದರಿಕೆ!

 ಇನ್ನು ತನಿಖೆ ವೇಳೆ ಕಿಡ್ನಾಪ್ ಪ್ಲಾನ್ ಮಾಡಿದ್ದ ಆನಂದ್ ಮತ್ತು ಅರ್ಜಿತ್ ತನ್ವೀರ್ ಎಂಬಾತನಗೆ ಸುಪಾರಿ ನೀಡಿ ಕಿಡ್ನಾಪ್ ಮಾಡಿಸಿದ್ರು ಅನ್ನೋದು ಗೊತ್ತಾಗಿದೆ. ಸದ್ಯ ತನ್ವೀರ್ ಸಹಚರ ಅಜ್ಗರ್ ಮತ್ತು ಸುಪಾರಿ ನೀಡಿದ್ದ ಆನಂದ್ ನನ್ನ ಬಂಧಿಸಿ ವಿಕಾಸ್ ಬೋರೆ ರಕ್ಷಣೆ ಮಾಡಿದ್ದಾರೆ. ಇನ್ನೂ ಈ ಗ್ಯಾಂಗ್ ನ ಆರು ಜನ ತಪ್ಪಿಸಿಕೊಂಡಿದ್ದು ಅವ್ರ ಪತ್ತೆಗೆ ಬಲೆ ಬೀಸಲಾಗಿದೆ.. ಈ ಗ್ಯಾಂಗ್  ಮತ್ತಷ್ಟು ಆ್ಯಕ್ಟಿವಿಟಿ ಬಗ್ಗೆ ತನಿಖೆ ನಂತರವೇ ಗೊತ್ತಾಗಬೇಕಿದೆ.

click me!