ಜಗತ್ತಿನಲ್ಲೇ ಭಾರತ ಡಿಜಿಟಲೈಸ್ಡ್‌ ದೇಶವಾಗುವ ಕಾಲ ಸನ್ನಿಹಿತ: ನಾರಾಯಣಮೂರ್ತಿ

By Kannadaprabha News  |  First Published Feb 5, 2023, 12:32 PM IST

ಮುಂದೆ ಭಾರತವೇ ವಿಶ್ವದ ಪ್ರಮುಖ ಡಿಜಿಟಲೈಸ್ಡ್‌ ದೇಶವಾಗಿ ಹೊರಹೊಮ್ಮಲಿದೆ. ಆ ಮೂಲಕ ಭಾರತ ಜಗತ್ತಿನ ಇತರ ದೇಶಗಳಿಗೆ ಮಾದರಿ ಆಗಲಿದೆ. ನಮ್ಮ ದೇಶದ ಪ್ರತಿಯೊಂದು ಮಾತಿಗೂ ಮನ್ನಣೆ ದೊರೆಯುವ ಕಾಲ ಸನ್ನಿಹಿತವಾಗಲಿದೆ ಎಂದು ಇಸ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅಭಿಪ್ರಾಯಪಟ್ಟರು.


ಹುಬ್ಬಳ್ಳಿ (ಫೆ.5) : ಮುಂದೆ ಭಾರತವೇ ವಿಶ್ವದ ಪ್ರಮುಖ ಡಿಜಿಟಲೈಸ್ಡ್‌ ದೇಶವಾಗಿ ಹೊರಹೊಮ್ಮಲಿದೆ. ಆ ಮೂಲಕ ಭಾರತ ಜಗತ್ತಿನ ಇತರ ದೇಶಗಳಿಗೆ ಮಾದರಿ ಆಗಲಿದೆ. ನಮ್ಮ ದೇಶದ ಪ್ರತಿಯೊಂದು ಮಾತಿಗೂ ಮನ್ನಣೆ ದೊರೆಯುವ ಕಾಲ ಸನ್ನಿಹಿತವಾಗಲಿದೆ ಎಂದು ಇಸ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅಭಿಪ್ರಾಯಪಟ್ಟರು.

ನಗರದ ಗೋಕುಲ ರಸ್ತೆಯ ಇಸ್ಫೋಸಿಸ್‌ ಕಚೇರಿಯ ಸಭಾಭವನದಲ್ಲಿ ದೇಶಪಾಂಡೆ ¶ೌಂಡೇಶನ್‌ ವತಿಯಿಂದ ಶನಿವಾರ ಸಂಜೆ ನಡೆದ (ಇವನಿಂಗ್‌ ವಿಥ್‌ ಲೆಜೆಂಡ್‌) ಅಭಿವೃದ್ಧಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Tap to resize

Latest Videos

ಇನ್ಫಿ ಸಂಸ್ಥಾಪಕ ಮೂರ್ತಿ, ಸುಧಾಮೂರ್ತಿ ಜೀವನ ಚರಿತ್ರೆ ಶೀಘ್ರ ತೆರೆಗೆ

ಭಾರತವು ಮುಂದಿನ 50 ವರ್ಷದಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಅತಿ ಹೆಚ್ಚು ಅಭಿವೃದ್ಧಿಯಾಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರಲಿದೆ. ಆ ಅಭಿವೃದ್ಧಿ ಗ್ರಾಮೀಣ ಮತ್ತು ನಗರದ ಅಂತರವನ್ನೂ ಕಡಿಮೆ ಮಾಡಲಿದೆ ಎಂದು ನುಡಿದರು.

ತಂತ್ರಜ್ಞಾನದ ಆವಿಷ್ಕಾರದ ಜೊತೆಗೆ ಅದರ ಬಳಕೆಯೂ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಯಾವುದೇ ತಂತ್ರಜ್ಞಾನವನ್ನು ಸಮಾಜದ ಒಳತಿಗೆ ಬಳಸಿದರೆ, ಅಭಿವೃದ್ಧಿ ಆಗಲಿದೆ. ಆದರೆ ಅದು ಕೆಟ್ಟವರ ಕೈಯಲ್ಲಿ ಸಿಕ್ಕರೆ ನಾಶವಾಗುತ್ತದೆ ಎಂದ ಅವರು, ಅದು ಒಳ್ಳೆಯ ಕಾರ್ಯಕ್ಕೆ ಮಾತ್ರ ಬಳಕೆ ಆಗುವಂತಾಗಲಿ ಎಂದು ಸಲಹೆ ನೀಡಿದರು.

ಕೆನಡಾದ ಪೌಲ್‌ ಮಾತನಾಡಿ, ತಂತ್ರಜ್ಞಾನದಲ್ಲಿ ಯುವಕರಿಗೆ ಸಾಕಷ್ಟುಅವಕಾಶಗಳಿದ್ದು, ಅವುಗಳನ್ನು ಯುವಜನತೆ ಸದುಪಯೋಗ ಪಡೆದುಕೊಳ್ಳಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಲ್ಲಿ, ಅಮೋಘ ಸಾಧನೆ ಸಾಧ್ಯವಾಗಿದೆ ಎಂದರು.

ರಾಧಾ ಬಾಸು ಮಾತನಾಡಿ, ದೇಶದ ಯುವಕರ ಬದುಕು ಇನ್ನಷ್ಟುಉತ್ತಮವಾಗಬೇಕು.ನಿತ್ಯ ಅವರು ಹೊಸದನ್ನು ಕಲಿಯುವಂತಾಗಬೇಕು. ಅವರ ಪರಿಪೂರ್ಣ ಜ್ಞಾನಾಭಿವೃದ್ಧಿಗೆ ಅವಕಾಶ ದೊರೆಯುವಂತಾಗಬೇಕು ಎಂದು ಸಲಹೆ ನೀಡಿದರು. ದೇಶಪಾಂಡೆ ¶ೌಂಡೆಶನ್‌ ಸಹ ಸಂಸ್ಥಾಪಕ ಗುರುರಾಜ ದೇಶಪಾಂಡೆ ಸಂವಾದ ನಿರ್ವಹಣೆ ಮಾಡಿದರು. ರೂಪಾ ಮತಿಜಾ ಉಪಸ್ಥಿತರಿದ್ದರು.

ಪತಿ ನಾರಾಯಣ ಮೂರ್ತಿ, ಮಗಳು ಮತ್ತು ಅಳಿಯ ರಿಷಿ ಸುನಕ್‌ಗೆ 4 ಅಂಶಗಳ ಸಲಹೆ ನೀಡಿದ ಸುಧಾಮೂರ್ತಿ..

ಸಂಗೀತ ಕಾರ್ಯಕ್ರಮ

ಇದಕ್ಕೂ ಮುನ್ನ ನಡೆದ ಸಪ್ತ ಸಿತಾರಾ ವಾದಕರ ತಂಡದ ಸಂಗೀತ ಕಾರ್ಯಕ್ರಮ ಶ್ರೋತೃಗಳನ್ನು ಮಂತ್ರ ಮುಗ್ಧಗೊಳಿಸಿತು. ನಂತರ ನಡೆದ ಸಂವಾದದಲ್ಲಿ ದೇಶಪಾಂಡೆ ¶ೌಂಡೆಶನ್‌ ನೆರವಿನಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಮಾ ಮಣಕವಾಡ, ವೈಭವಿ, ಭಾರತಿ, ರುಕ್ಷಾನಾ ಸೇರಿದಂತೆ ಅನೇಕರು ತಮ್ಮ ಅನಿಸಿಕೆ ಹಂಚಿಕೊಂಡರು. ದೇಶಪಾಂಡೆ ¶ೌಂಡೇಶನ್‌ ಸಿಇಒ ಸುನಿಲ್‌ ಚಕ್ರಪಾನಿ ಸಾಧಕರನ್ನು ಸನ್ಮಾನಿಸಿದರು.

click me!