ಆ್ಯಕ್ಷನ್‌ ಇದ್ರೆ ರಿಯಾಕ್ಷನ್‌: ವಿಶ್ವನಾಥ್‌ ಜೊತೆ ಸಾರಾ ಮಹೇಶ್‌ ಕದನ ವಿರಾಮ!

By Kannadaprabha News  |  First Published Dec 21, 2019, 10:51 AM IST

ನಮ್ಮ ಪಕ್ಷದಲ್ಲಿದ್ದು, ಶಾಸಕರಾಗಿ ಗೆದ್ದು, ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದರಿಂದ ವಿಶ್ವನಾಥ್‌ ವಿರುದ್ಧ ಮಾತನಾಡಿದ್ದೆ. ಉಪಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದರಿಂದ ಮತ್ತೆ ಮಾತನಾಡಿದ್ದೆ. ಈಗ ಅವರು ನನ್ನ ಬಗ್ಗೆ ಮಾತನಾಡಿಲ್ಲ, ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಆ್ಯಕ್ಷನ್‌ ಇದ್ದರೆ ಮಾತ್ರ ರಿಯ್ಯಾಕ್ಷನ್‌ ಎಂದು ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ಹೇಳಿದ್ದಾರೆ.


ಮೈಸೂರು(ಡಿ.21): ಉಪಚುನಾವಣೆಗೂ ಮುನ್ನ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರ ವಿಷಯದಲ್ಲಿ ಮಾಜಿ ಸಚಿವರಾದ ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ಕದನ ವಿರಾಮ ಘೋಷಿಸಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್‌, ನಾನಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಮ್ಮ ಪಕ್ಷದಲ್ಲಿದ್ದು, ಶಾಸಕರಾಗಿ ಗೆದ್ದು, ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದರಿಂದ ವಿಶ್ವನಾಥ್‌ ವಿರುದ್ಧ ಮಾತನಾಡಿದ್ದೆ. ಉಪಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದರಿಂದ ಮತ್ತೆ ಮಾತನಾಡಿದ್ದೆ. ಈಗ ಅವರು ನನ್ನ ಬಗ್ಗೆ ಮಾತನಾಡಿಲ್ಲ, ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಆ್ಯಕ್ಷನ್‌ ಇದ್ದರೆ ಮಾತ್ರ ರಿಯ್ಯಾಕ್ಷನ್‌ ಎಂದು ನಸು ನಕ್ಕರು.

Tap to resize

Latest Videos

ಕಾಯ್ದೆ ನೆಪದಲ್ಲಿ ಗಲಭೆ, ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಹುನ್ನಾರ: ಪ್ರತಾಪ್ ಸಿಂಹ

ಹುಣಸೂರಿನಲ್ಲಿ ಜೆಡಿಎಸ್‌ ವೋಟುಗಳನ್ನು ಕಾಂಗ್ರೆಸ್‌ಗೆ ಮಾರಾಟ ಮಾಡಿಕೊಂಡಿದೆ ಎಂಬ ವಿಶ್ವನಾಥ್‌ ಅವರ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಪಾಪ ಸೋತಿದ್ದಾರೆ. ಏನೋ ಹೇಳಿದ್ದಾರೆ. ನಾವಂತೂ ಪ್ರಾಮಾಣಿಕ ಹೋರಾಟ ನಡೆಸಿದ್ದೇವೆ ಎಂದಿದ್ದಾರೆ.

ಉದ್ಯೋಗ ಕೊಡಿಸುವುದು ಹಾಗೂ ವರ್ಗಾವಣೆಯಲ್ಲಿ ಎಚ್‌.ಡಿ. ದೇವೇಗೌಡರ ಕುಟುಂಬ ಹಣ ಮಾಡುವುದಿಲ್ಲ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಹೇಳಿದ್ದಾರೆ. ಜಿ.ಟಿ. ದೇವೇಗೌಡರ ಬಗ್ಗೆ ಕೇಳಿದಾಗ, ನಮ್ಮ ಪಕ್ಷದಲ್ಲಿ ಒಬ್ಬರು ತಟಸ್ಠ ಎನ್ನುತ್ತಾರೆ. ಅವರ ಪುತ್ರ ಸ್ವತಂತ್ರ ಎನ್ನುತ್ತಾರೆ. ನೋಡೋಣ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

ಮೈಸೂರು: ಜಿಟಿಡಿ ರಾಜಕೀಯ ನಿಲುವು ಸರಿ ಇಲ್ಲ ಎಂದ ಸಂಸದ

click me!