ಚಲಿಸುತ್ತಿದ್ದ ಓಮಿನಿ ಏಕಾ ಏಕಿ ಬೆಂಕಿಗಾಹುತಿ

Suvarna News   | Asianet News
Published : Dec 21, 2019, 10:44 AM IST
ಚಲಿಸುತ್ತಿದ್ದ ಓಮಿನಿ ಏಕಾ ಏಕಿ ಬೆಂಕಿಗಾಹುತಿ

ಸಾರಾಂಶ

ಚಲಿಸುತ್ತಿದ್ದ ಓಮಿನಿ ವ್ಯಾನ್ ಒಂದು ಏಕಾ ಏಕಿ ಹೊತ್ತಿ ಉರಿದ ಘಟನೆ ನಡೆದಿದೆ. ಹಒಣ ಹುಲ್ಲಿಗೆ ಬಿಸಿ ತಾಗಿ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದೆ.

ಚಿತ್ರದುರ್ಗ(ಡಿ.21) : ಚಲಿಸುತ್ತಿದ್ದ ಓಮಿನಿಯೊಂದು ಇದ್ದಕ್ಕಿದ್ದಂತೆ ಬೆಂಕಿಯಿಂದ ಹೊತ್ತಿ ಉರಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿ ರಾಜಣ್ಣ ಎನ್ನುವವರಿಗೆ ಸೇರಿದ ಓಮಿನಿ ವ್ಯಾನ್ ಗೆ ಬೆಂಕಿ ತಗುಲಿದೆ. 

ಶ್ರೀ ರಾಂಪುರದಿಂದ ಕಂಚೀಪುರಕ್ಕೆ ತೆರಳುವ ವೇಳೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಓಮಿನಿಯಲ್ಲಿದ್ದವರೆಲ್ಲಾ ಕೆಳಕ್ಕೆ ಇಳಿದಿದ್ದು, ಅಪಾಯದಿಂದ ಪಾರಾಗಿದ್ದಾರೆ. 

ಬಿಸಿಯಾಗಿದ್ದ ಸೈಲೆನ್ಸರ್ ಗೆ ಒಣಗಿದ್ದ ಹುಲ್ಲು ತಾಗಿ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಬಿಸಿಲು ಇರುವ ಕಾರಣ ಒಣಗಿದ್ದ ಹುಲ್ಲಿಗೆ ಬಿಸಿ ತಾಗಿದ್ದರಿಂದ ಬೆಂಕಿಗೆ ವಾಹನ ಆಹುತಿಯಾಗಿದೆ. 

ವಿದ್ಯಾರ್ಥಿಗೆ ರಕ್ತ ಬರುವಂತೆ ಹೊಡೆದು ಬೆದರಿಕೆ ಹಾಕಿದ ಶಿಕ್ಷಕರು ಅರೆಸ್ಟ್‌...

ಈ ಸಂಬಂಧ ಇದೀಗ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ