‘ದೇಶದ ಅಭಿವೃದ್ಧಿಯಲ್ಲಿ ಯುವಸಮುದಾಯದ ಪಾಲಿದೆ’

By Kannadaprabha News  |  First Published Feb 16, 2023, 10:00 AM IST

ಹಳ್ಳಿ ಜನರ ಬುದ್ಧಿ ಶಕ್ತಿ ಯಾವುದಕ್ಕೂ ಕಡಿಮೆ ಇಲ್ಲ. ಅವರಿಗೆ ತರಬೇತಿಗಳನ್ನು ಕೊಟ್ಟು ಉದ್ಯೋಗ ಅವಕಾಶಗಳನ್ನು ದೊರಕಿಸಿಕೊಟ್ಟಾಗ ದೇಶದ ಅಭಿವೃದ್ಧಿಗೆ ಯುವಸಮುದಾಯ ಮತ್ತು ಕೃಷಿಕ ಸಮುದಾಯದ ಕೊಡುಗೆ ಅನನ್ಯವಾಗಿರುತ್ತದೆ ಎಂದು ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.


 ತುಮಕೂರು :  ಹಳ್ಳಿ ಜನರ ಬುದ್ಧಿ ಶಕ್ತಿ ಯಾವುದಕ್ಕೂ ಕಡಿಮೆ ಇಲ್ಲ. ಅವರಿಗೆ ತರಬೇತಿಗಳನ್ನು ಕೊಟ್ಟು ಉದ್ಯೋಗ ಅವಕಾಶಗಳನ್ನು ದೊರಕಿಸಿಕೊಟ್ಟಾಗ ದೇಶದ ಅಭಿವೃದ್ಧಿಗೆ ಯುವಸಮುದಾಯ ಮತ್ತು ಕೃಷಿಕ ಸಮುದಾಯದ ಕೊಡುಗೆ ಅನನ್ಯವಾಗಿರುತ್ತದೆ ಎಂದು ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.

ಕೊರಟಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ಮೇಳಕ್ಕೆ ಜ್ಯೋತಿ ಬೆಳಗುವುದರ ಮೂಲಕ ಚಾಲನ ನೀಡಿ ಮಾತನಾಡಿದರು.

Latest Videos

undefined

ಉದ್ಯೋಗ ಮೇಳದಲ್ಲಿ 60ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಯಾವಾಗಲು ಧನಾತ್ಮಕ ಚಿಂತನೆಗಳ ಕಡೆ ಗಮನ ಹರಿಸಬೇಕು. ಕೀಳರಿಮೆಯಿಂದ ನಮ್ಮನ್ನು ನಾವೇ ಅಳಿಯಬಾರದು. ಮನುಷ್ಯನಿಗೆ ಮನಸ್ಸು ಮಾಡಿದರೇ ಎಷ್ಟೋ ಕಠಿಣ ಕೆಲಸಗಳನ್ನು ಗಿಟ್ಟಿಸಿಕೊಳ್ಳಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

ವಿಶ್ವದಲ್ಲಿ ಅತಿ ಹೆಚ್ಚು ಮಾನವ ಸಂಪನ್ಮೂಲಗಳನ್ನು ಹೊಂದಿರುವ ದೇಶ ನಮ್ಮದು. ಇಲ್ಲಿನ ಸಂಪನ್ಮೂಲಗಳ ಬಳಕೆ ವಿದೇಶಕ್ಕೆ ಹೆಚ್ಚಾಗಿ ಆಗುತ್ತದೆ. ಆದರೆ ಮುಂದಿನ ದಿನದಲ್ಲಿ ರಾಜ್ಯ ಮತ್ತು ದೇಶಕ್ಕೆ ಸಿಗಬೇಕಾದರೆ, ಹಳ್ಳಿಗಾಡಿನ ಮಕ್ಕಳು ಉದ್ಯೋಗ ದೊರಕಿಸಿಕೊಳ್ಳಲುಬೇಕಾದ ನೈಪುಣ್ಯತೆಗಳನ್ನು ರೂಢಿಸಿಕೊಳ್ಳಬೇಕು. ಸೂಕ್ತ ರೀತಿಯಲ್ಲಿ ತರಬೇತಿ ಪಡೆಯುವಲ್ಲಿ ಮುಂದಾಗಬೇಕಿದೆ ಎಂದು ಡಾ.ಜಿ.ಪರಮೇಶ್ವರ ಕರೆ ನೀಡಿದರು.

ಕೊರಟಗೆರೆ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಇನ್ನಷ್ಟುಸುಧಾರಣೆ ಮತ್ತು ಸೌಲಭ್ಯಗಳನ್ನು ನೀಡುವುದಾಗಿ ಹೇಳಿದ ಅವರು, ಮುಂದಿನ ದಿನ ಮಾನಗಳಲ್ಲಿ ಕೊರಟಗೆರೆಯಲ್ಲಿ ಡಿಪ್ಲೊಮಾ ಕಾಲೇಜನ್ನು ಪ್ರಾರಂಭಿಸುವುದಾಗಿ ಪರಮೇಶ್ವರ್‌ ಭರವಸೆ ನೀಡಿದರು.

ರಾಜ್ಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕಿ ಸಾಧನಾ ಪೋಟೆ ಮಾತನಾಡಿ, ಅನುಭವ ಮತ್ತು ಕೌಶಲ್ಯಗಳಿಂದ ವೃತ್ತಿ ಬದುಕನ್ನು ಹಸನು ಮಾಡಿಕೊಳ್ಳಿ. ಅಸಾಧ್ಯವನ್ನು ಸಾಧ್ಯ ಮಾಡುವ ಕಲೆ ಕರಗತ ಮಾಡಿಕೊಳ್ಳಿ. ಯಾವುದೇ ಉದ್ಯೋಗವಾಗಲಿ ಮನಸ್ಸಿಚ್ಚೆಯಾಗಿ ಮಾಡಿ. ಅದು ನಾವು ನಮ್ಮ ವೃತ್ತಿಗೆ ಕೋಡುವ ಗೌರವ ಎಂದರು. ವೇತನಕ್ಕೇ ಸೀಮಿತವಾಗಿ ಉದ್ಯೋಗದಿಂದ ಉದ್ಯೋಗಕ್ಕೆ ಹೋಗಬೇಡಿ. ನಿಮ್ಮ ವೃತ್ತಿಗೆ ನೈಪುಣ್ಯತೆ ಮತ್ತು ಆತ್ಮತೃಪ್ತಿ ಇರಲಿ. ಇದು ನಿಮ್ಮಜೀವನದ ಅಭಿವೃದ್ಧಿಗೆ ಪೂರಕವಾಗುತ್ತದೆ. ಇಂದಿನ ದಿನ ಎಷ್ಟೇಲ್ಲಾ ಕಲಿತು ಮತ್ತೇ ನಿರುದ್ಯೋಗ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಶಿಕ್ಷಣ ಕಲಿತವರಷ್ಟೆಜಾಣರಲ್ಲ. ಎಲ್ಲರಲ್ಲೂ ಒಂದು ಕಲೆ ಇರುತ್ತದೆ. ಅದನ್ನು ಗುರುತಿಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲೇ ಇರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಾಧನಾ ಅವರು ಹೇಳಿದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಮಾತನಾಡಿ, ಉದ್ಯೋಗ ಮೇಳ ಹಲವಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿದೆ. ತಂದೆ ತಾಯಿಗಳ ಆಸೆ, ಮಕ್ಕಳಿಗೆ ಉದ್ಯೋಗ ಸಿಗಲಿ ಅನ್ನೋದಾಗಿದೆ. ಆ ಆಸೆಗಳನ್ನು ನನಸು ಮಾಡಿಕೊಳ್ಳುವ ಅವಕಾಶ ಬಂದಿದೆ ಎಂದರು.

ತುಮಕೂರು, ಬೆಂಗಳೂರಿನ ಸುತ್ತ ಮುತ್ತಲಿನ ಕೈಗಾರಿಕೆಗಳಿಗೆ ಸಂಪರ್ಕ ಮಾಡಿ, ಉದ್ಯೋಗ ಮೇಳ ಆಯೋಜಿಸಿ, ಆ ಮೂಲಕ ತಾಲೂಕಿನ ಮಕ್ಕಳಿಗೆ ಕೆಲಸದ ಸೌಕರ್ಯಗಳನ್ನು ಕೊಡಿಸಲು ಶಾಸಕರಾದ ಡಾ.ಜಿ.ಪರಮೇಶ್ವರ ಅವರು ಕಾರ್ಯೋನ್ಮುಖರಾಗಿ, ಹಲವಾರು ಸಂಘ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ಈ ಅವಕಾಶ ಒದಗಿಸಿಕೊಟ್ಟಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಸನ್ನ, ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಮ್‌.ಎಸ್‌.ರವಿಪ್ರಕಾಶ, ಜಿಲಾ ್ಲಉದ್ಯೋಗ ಮತ್ತು ವಿನಿಮಯ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಪಿ.ನಾಗೇಶ್‌, ಸಿದ್ದಾರ್ಥ ಎಂಜಿನಿಯರಿಂಗ್‌ ಕಾಲೇಜಿನ ಉದ್ಯೋಗ ಮತ್ತು ನೇಮಕಾತಿ ವಿಭಾಗದ ಅಧಿಕಾರಿ ಡಾ. ಅಶೋಕ ಮೆಹ್ತಾ, ವಿವಿಧ ಪದವಿ ಕಾಲೇಜಿನ ಪ್ರಾಂಶುಪಾಲರು, ವಿವಿಧ ಕಂಪನಿಗಳ ಮುಖ್ಯಸ್ಥರು ಹಾಗೂ ಕೊರಟಗೆರೆ ಸುತ್ತಮುತ್ತಲಿನ ಕಾಲೇಜಿನ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು.

60ಕ್ಕೂ ಹೆಚ್ಚಿನ ಕಂಪನಿಗಳು ಈ ಮೇಳದಲ್ಲಿ ಭಾಗಿಯಾಗಿದ್ದು, 2260 ವಿದ್ಯಾರ್ಥಿಗಳು ನೊಂದಣಿ ಮಾಡಿಸಿದ್ದಾರೆ. 520 ಮಂದಿ ಉದ್ಯೋಗಕ್ಕೆ ಆಯ್ಕೆಯಾಗಿದ್ದು, 600 ಮಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ. ಮತ್ತಷ್ಟುವಿದ್ಯಾರ್ಥಿಗಳಿಗೆ ಕೆಲವು ಕಂಪನಿಗಳು ಉದ್ಯೋಗ ನೀಡುವ ಭರವಸೆ ನೀಡಿವೆ.

ಮುರಳೀಧರ ಹಾಲಪ್ಪ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ

ಉದ್ಯೋಗ ಪ್ರಪಂಚ ಬಹಳ ಸ್ಪರ್ಧಾತ್ಮಕವಾಗಿದೆ. ನಮ್ಮ ಹೆಚ್ಚಿನ ಕೌಶಲ್ಯ ನಮಗೆ ದಾರಿ ಮಾಡಿಕೊಡುತ್ತವೆ. ನಾವು ಮೊದಲು ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ ಹುಡುಕಿಕೊಳ್ಳಿ. ಸರ್ಕಾರದಲ್ಲಿ ಅನೇಕ ಯೋಜನೆಗಳಿವೆ. ಅದನ್ನೆಲ್ಲಾ ಸದುಪಯೋಗ ಪಡಿಸಿಕೊಳ್ಳಿ.

ಶ್ರೀನಿವಾಸ.ಕೆ. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ

click me!