ಇಲ್ಲಸಲ್ಲದ ಭರವಸೆ ನೀಡುತ್ತಿರುವ ಸಿಎಂ: ಪರಂ

By Kannadaprabha News  |  First Published Feb 16, 2023, 9:49 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಇಲ್ಲಸಲ್ಲದ ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಸರ್ಕಾರದ ಕಾರ್ಯವೈಖರಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.


  ಮಧುಗಿರಿ :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಇಲ್ಲಸಲ್ಲದ ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಸರ್ಕಾರದ ಕಾರ್ಯವೈಖರಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಪುರವರ ಹೋಬಳಿ ಹನುಮತಪುರದಲ್ಲಿ ಬುಧವಾರ ಡಾ.ಜಿ.ಪರಮೇಶ್ವರ್‌ ಅವರ 5 ವಷÜರ್‍ದ ಸಾಧನೆಗಳ ಹೆಜ್ಜೆ ಗುರುತು ಪುಸ್ತಕವನ್ನು ಕೊರಟಗೆರೆ ಕ್ಷೇತ್ರದ ಜನತೆಯ ಪ್ರತಿ ಮನೆಗೆ ತಲುಪಿಸುವ ಮೂಲಕ ಮಾತನಾಡಿದ ಅವರು, ಬಜೆಟ್‌ ಸಮಯದಲ್ಲಿ ಸರ್ಕಾರಗಳು ಘೋಷಣೆ ಮಾಡದೇ ಬಜೆಟ್‌ನಲ್ಲಿ ಯೋಜನೆ ಸೇರಿಸಿ ಅದಕ್ಕೆ ಹಣ ಬಿಡುಗಡೆ ಮಾಡಬೇಕು. ಆದರೆ ಬಿಜೆಪಿ ಸರ್ಕಾರ ಇದ್ಯಾವುದನ್ನು ಮಾಡದೇ ಓಟಿಗಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

Tap to resize

Latest Videos

ಕಾಂಗ್ರೆಸ್‌ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸ್ಕ್ರೀನಿಂಗ್‌ ಕಮಿಟಿಯಲ್ಲಿ ಈ ತಿಂಗಳ ಒಳಗಾಗಿ ಅಂತಿಮ ಪಟ್ಟಿಪ್ರಕಟವಾಗಲಿದ್ದು, ನಾನು ಸಹ ಸ್ಕ್ರೀನಿಂಗ್‌ ಕಮಿಟಿಯ ಸದಸ್ಯನಾಗಿದ್ದೇನೆ ಎಂದರು.

ನಾನು ಸಿಎಂ ರೇಸ್‌ಲ್ಲಿದ್ದೇನೆ: 2023ರಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಈ ಸಲ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಶೇ.100ರಷ್ಟುಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಪಕ್ಷದಲ್ಲಿ 10 ಜನ ಸಿಎಂ ರೇಸ್‌ನಲ್ಲಿದ್ದಾರೆ. ಈ ಪೈಕಿ ನಾನು ಸಹ ಒಬ್ಬನಾಗಿ ಸಿಎಂ ರೇಸಲ್ಲಿದ್ದೇನೆ. ಆದರೆ ನಮ್ಮ ಗುರಿ ರಾಜ್ಯದಲ್ಲಿ ಮೊದಲು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ. ಆ ನಂತರ ಸಿಎಂ ಯಾರಗಬೇಕು ಎಂಬುದನ್ನು ಅಂತಿಮವಾಗಿ ನಮ್ಮ ಹೈಕಮಾಂಡ್‌ ತೀರ್ಮಾನಿಸಲಿದ್ದು ಅದಕ್ಕೆ ನಾವುಗಳು ಬದ್ಧ ಎಂದು ಪರಮೇಶ್ವರ್‌ ತಿಳಿಸಿದರು.

ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟುಹಣ ತಂದು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬರುವ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು. ಹನುಮಂತಪುರದ ಮುಖಂಡ ಭೈರಪ್ಪ ನೇತೃತ್ವದಲ್ಲಿ ಡಾ.ಜಿ.ಪರಮೇಶ್ವರ್‌ ಅವರಿಗೆ ಬೃಹತ್‌ ಸೇಬಿನ ಹಾರ

ಹಾಕುವ ಮೂಲಕ ಗ್ರಾಮಸ್ಥರು ಸ್ವಾಗತ ಕೋರಿದರು.

ಈ ವೇಳೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ದಿನೇಶ್‌, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಭೈರಪ್ಪ, ಗ್ರಾಪಂ ಅಧ್ಯಕ್ಷೆ ಗಂಗರತ್ನಮ್ಮ, ಮುಖಂಡರಾದ ಕೊಂಡವಾಡಿ ರಾಜ್‌ಕುಮಾರ್‌, ಎಂ.ಜಿ.ಶ್ರೀನಿವಾಸಮೂರ್ತಿ, ಬಡಚೌಡನಹಳ್ಳಿ ಶಿವಕುಮಾರ್‌, ದೊಡ್ಡಹೊಸಹಳ್ಳಿ ಗ್ರಾಪಂ ಸದಸ್ಯ ನರಸಿಂಹಮೂರ್ತಿ, ವಾಲೇ ಚಂದ್ರಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅಶ್ವತ್ಥನಾರಾಯಣ, ಅರಕೆರೆ ಶಂಕರ್‌ ಸೇರಿದಂತೆ ಅನೇಕರಿದ್ದರು.

ಜೆಡಿಎಸ್‌ ಪಕ್ಷದವರು 123 ಸ್ಥಾನ ಗೆಲ್ಲುತ್ತೇವೇಂದು ಹೇಳುತ್ತಾರೆ. ಮೊದಲು ಜೆಡಿಎಸ್‌ನವರು ರಾಜ್ಯದ 224 ಕ್ಷೇತ್ರಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿ ಆ ನಂತರ 123 ಸ್ಥಾನ ಗೆಲ್ಲಲಿ.

ಡಾ.ಜಿ.ಪರಮೇಶ್ವರ್‌ ಮಾಜಿ ಡಿಸಿಎಂ

 

click me!