ರಿಯಾಯಿತಿ ದರದಲ್ಲಿ ಕೃಷಿ ಯಂತ್ರ ವಿತರಣೆಗೆ ಅರ್ಜಿ ಸಲ್ಲಿಸಿ

By Kannadaprabha News  |  First Published Feb 16, 2023, 9:38 AM IST

2022-23ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿ ರಾಗಿ ಕ್ಲೀನಿಂಗ್‌ ಮಿಲ್‌, ಪ್ಲೋರ್‌ ಮಿಲ್‌, ಪಲ್ವ ರೈಸರ್‌, ಬೇಳೆ ಮಾಡುವ ಯಂತ್ರ, ಕಬ್ಬಿನಹಾಲು ತೆಗೆಯುವ ಯಂತ್ರ, ಮೋಟಾರ್‌ ಚಾಲಿತ ಸಣ್ಣ ಎಣ್ಣೆ ಗಾಣಗಳ ಕೃಷಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.


ಕೊರಟಗೆರೆ: 2022-23ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿ ರಾಗಿ ಕ್ಲೀನಿಂಗ್‌ ಮಿಲ್‌, ಪ್ಲೋರ್‌ ಮಿಲ್‌, ಪಲ್ವ ರೈಸರ್‌, ಬೇಳೆ ಮಾಡುವ ಯಂತ್ರ, ಕಬ್ಬಿನಹಾಲು ತೆಗೆಯುವ ಯಂತ್ರ, ಮೋಟಾರ್‌ ಚಾಲಿತ ಸಣ್ಣ ಎಣ್ಣೆ ಗಾಣಗಳ ಕೃಷಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ಶೇ.50ರಷ್ಟುಸಹಾಯಧನ ಹಾಗೂ ಪರಿಶಿಷ್ಟಜಾತಿ-ಪರಿಶಿಷ್ಟಪಂಗಡದವರಿಗೆ ಶೇ.90 ರಷ್ಟುಸಹಾಯಧನವಿದ್ದು, ಆಸಕ್ತ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪಹಣಿ, ಆಧಾರ್‌ ಹಾಗೂ ಬ್ಯಾಂಕ್‌ ಪಾಸ್‌ಬುಕ್‌ ಜೆರಾಕ್ಸ್‌, ಒಂದು ಪೋಟೋದೊಂದಿಗೆ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಜನರಲ್‌ ಲೈಸೆನ್ಸ್‌, ತ್ರೀಫೇಸ್‌ ಕರೆಂಟ್‌ ಬಿಲ್‌ ಹಾಗೂ 20ರು.ನ ಛಾಪಾಕಾಗದ ಒಳಗೊಂಡಂತೆ ಅರ್ಜಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ.

Tap to resize

Latest Videos

ಲಘು ನೀರಾವರಿ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ತುಂತುರು ನೀರಾವರಿ ಘಟಕಗಳನ್ನು ಸಾಮಾನ್ಯ ವರ್ಗ, ಪರಿಶಿಷ್ಟಜಾತಿ/ ಪರಿಶಿಷ್ಟಪಂಗಡದ ರೈತರಿಗೆ ಶೇ.90 ರಷ್ಟುಸಹಾಯಧನದಲ್ಲಿ ಪ್ರತಿ ಸೆಟ್‌ಗೆ ರು.1,746/- ರೈತರ ವಂತಿಗೆ ಪಾವತಿಸಿ ಅಗತ್ಯ ದಾಖಲೆಗಳನ್ನು ನೀಡಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಆಯಾಯ ಹೋಬಳಿಯ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಚ್‌.ನಾಗರಾಜು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ 

ನವದೆಹಲಿ: ದೇಶದ ಸಹಕಾರ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಮುಂದಡಿ ಇಟ್ಟಿರುವ ಕೇಂದ್ರ ಸರ್ಕಾರ, ದೇಶಾದ್ಯಂತ 2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ/ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರ ಸಂಘವನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ಕೃಷಿ ಸಾಲ ನೀಡಿಕೆಯನ್ನು ಇನ್ನಷ್ಟು ತಳಮಟ್ಟಕ್ಕೆ ವಿಸ್ತರಿಸುವ ಮತ್ತು ಅದನ್ನು ಇನ್ನಷ್ಟು ವ್ಯಾಪಕ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Union Cabinet meeting) ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮುಂದಿನ 5 ವರ್ಷದಲ್ಲಿ ಸಂಘಗಳು ಸ್ಥಾಪನೆ ಆಗಲಿವೆ.

ಹಾಲಿ ದೇಶದಲ್ಲಿ 63 ಸಾವಿರ ಪ್ರಾಥಮಿಕ ಕೃಷಿ ಸಾಲ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಈಗಲೂ ದೇಶದ 1.6 ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳು (Primary Agricultural Credit Unions) ಮತ್ತು 2 ಲಕ್ಷ ಪಂಚಾಯತ್‌ಗಳು ಯಾವುದೇ ಹೈನುಗಾರಿಕೆ ಸಹಕಾರ ಸಂಘಗಳನ್ನು ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಪಂಚಾಯತ್‌ಗೆ ಒಂದರಂತೆ ಪ್ರಾಥಮಿಕ ಕೃಷಿ ಸಾಲ ಸಂಘ/ ಹೈನುಗಾರಿಕೆ ಸಂಘ (Dairy Co-operative Societies.) ಸ್ಥಾಪಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಜೊತೆಗೆ, ದೊಡ್ಡ ಮಟ್ಟದ ನೀರಾವರಿ ಸೌಲಭ್ಯ ಇದ್ದು ಕಾರ್ಯ ಎನ್ನಿಸುವ ಪಂಚಾಯತ್‌ ವ್ಯಾಪ್ತಿಯಲ್ಲಿ ಹಾಗೂ ಕರಾವಳಿ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕಾರ್ಯ ಸಾಧು ಎನ್ನಿಸುವ ಸ್ಥಳಗಳಲ್ಲಿ ಕನಿಷ್ಠ ಒಂದಾದರೂ ಮೀನುಗಾರಿಕೆ ಸಹಕಾರ ಸಂಘ ಸ್ಥಾಪನೆಯ ಗುರಿಯನ್ನು ಸರ್ಕಾರ ರೂಪಿಸಿದೆ.

ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪದ ತಂತ್ರಾಂಶ ಅಳವಡಿಕೆ: ಸಚಿವ ಸೋಮಶೇಖರ್

5 ವರ್ಷದಲ್ಲಿ ಸ್ಥಾಪನೆ:

ಸಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ (, Union Information and Broadcasting Minister) ಅನುರಾಗ್‌ ಠಾಕೂರ್‌ (Anurag Thakur), ‘ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಸಾಲ ಸಂಘ/ಹೈನುಗಾರಿಕೆ/ಮೀನುಗಾರಿಕೆ ಸಂಘ ಸ್ಥಾಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಯೋಜನೆಯನ್ನು ಒಂದುಗೂಡಿಸಿ ಈ ಯೋಜನೆ ಜಾರಿಗೊಳಿಸಲಾಗುವುದು. ಇದರಡಿ ಹೊಸ ಸಹಕಾರ ಸಂಘ ಸ್ಥಾಪನೆ ಜೊತೆಗೆ ಅವುಗಳನ್ನು ಆಧುನಿಕ ಮೂಲಸೌಕರ್ಯಗಳ (modern infrastructure) ಮೂಲಕ ಉನ್ನತೀಕರಿಸಲಾಗುವುದು’ ಎಂದು ತಿಳಿಸಿದರು.

ಪಂಚಾಯ್ತಿಗೊಂದು ಕೃಷಿ ಸಹಕಾರ ಸಂಘ: ಕೇಂದ್ರ ಸಚಿವ ಅಮಿತ್‌ ಶಾ

click me!