ಇತ್ತೀಚಿಗೆ ಕಾಡಂಚಿನ ಗ್ರಾಮಗಳಲ್ಲಿ ಚಿರತೆಯ ಕಾಟದಿಂದ ಜನರು ಆತಂಕದಲ್ಲಿ ಜೀವನ ಮಾಡುತ್ತಿದ್ದರು. ಅಲ್ಲದೇ ರಾತ್ರಿಹೊತ್ತು ಚಿರತೆ ದಾಳಿಯಿಂದ ಸಾಕುಪ್ರಾಣಿಗಳನ್ನ ಕಳೆದುಕೊಳ್ಳುವ ಆತಂತ ಮನೆ ಮಾಡಿತ್ತು.ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಶಿವಮೊಗ್ಗ (ಡಿ.2) : ಇತ್ತೀಚಿಗೆ ಕಾಡಂಚಿನ ಗ್ರಾಮಗಳಲ್ಲಿ ಚಿರತೆಯ ಕಾಟದಿಂದ ಜನರು ಆತಂಕದಲ್ಲಿ ಜೀವನ ಮಾಡುತ್ತಿದ್ದರು. ಅಲ್ಲದೇ ರಾತ್ರಿಹೊತ್ತು ಚಿರತೆ ದಾಳಿಯಿಂದ ಸಾಕುಪ್ರಾಣಿಗಳನ್ನ ಕಳೆದುಕೊಳ್ಳುವ ಆತಂತ ಮನೆ ಮಾಡಿತ್ತು.
ರಾತ್ರಿ ವೇಳೆಯಲ್ಲಿ ದಿಡೀರನೆ ಪ್ರತ್ಯಕ್ಷವಾಗುವ ಚಿರತೆ ಹಸು ನಾಯಿ ಹೆಮ್ಮೆ ಹೀಗೆ ಸಾಕುಪ್ರಾಣಿಗಳನ್ನ ಬೇಟೆಯಾಡುತ್ತಿತ್ತು. ಇದರಿಂದ ಭಯ ಆತಂಕಗೊಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ.
ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ರಾತ್ರಿ ಬೀಟ್ ವ್ಯವಸ್ಥೆ ಮುಂದುವರಿಸಿದರೂ ಚಿರತೆ ಹಾವಳಿ ತಪ್ಪಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ ಚಿರತೆಯನ್ನು ಸೆರೆಹಿಡಿಯಲು ಗ್ರಾಮದ ಸುತ್ತಮುತ್ತಲಿನ ಜಾಗಗಳಲ್ಲಿ ಬೋನನ್ನು ಇಟ್ಟು ಅದರೊಳಗೆ ಒಂದು ನಾಯಿಯನ್ನು ಕೂಡ ಬಿಟ್ಟು ಬಲೆ ಬೀಸಿದ್ದರು. ಕೊನೆಗೂ ಚಿರತೆ ಬೋನಿಗೆ ಬಿದ್ದಿದೆ.
Bengaluru: ಸಿಲಿಕಾನ್ ಸಿಟಿಯಲ್ಲಿ ಚಿರತೆಗಳು ಪ್ರತ್ಯಕ್ಷ, ಆತಂಕ
ಹೌದು ಭದ್ರಾವತಿ ತಾಲೂಕು ಹರಮಘಟ್ಟ ಗ್ರಾಮದಲ್ಲಿ ಸುಮಾರು 15 ದಿನಗಳ ಹಿಂದೆ 3 ಹಸುಗಳನ್ನ ಭೇಟೆಯಾಡಿದ್ದ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಹಾವಳಿಯಿಂದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಭಯ ಹುಟ್ಟಿಸಿತ್ತು. ಗ್ರಾಮಸ್ಥರಲ್ಲಿ ಭಯವನ್ನ ಹುಟ್ಟಿಸಿತ್ತು. ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಯವರಿಗೆ ಆಗ್ರಹಿಸಿದ್ದರು. ಇದೀಗ ಕೊನೆಗೂ ಚಿರತೆ ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಹರಮಘಟ್ಟ ಗ್ರಾಮದಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ಬೋನು ಇಟ್ಟು ಅದರಲ್ಲಿ ನಾಯಿಯನ್ನ ಇಡಲಾಗಿತ್ತು. ಇಂದು ಬೆಳಗ್ಗೆ ಚಿರತೆ ಬೋನಿಗೆ ಬಿದ್ದಿದೆ.
ಇದೊಂದು ಗಂಡು ಚಿರತೆಯಾಗಿದ್ದು ಸಾಕಷ್ಟು ದಷ್ಟಪುಷ್ಟವಾಗಿದೆ. ಬೋನಿಗೆ ಬಿದ್ದ ಚಿರತೆ ನೋಡಲು ಗ್ರಾಮಸ್ಥರು ಮುಗಿಬಿದ್ದರು. ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಕೂಡ ಚಿರತೆ ನೋಡಲು ಹರಮಘಟ್ಟ ಗ್ರಾಮಕ್ಕೆ ಬಂದಿದ್ದರು.
ಚಿರತೆ ಕಾರ್ಯಾಚರಣೆ ಠುಸ್; ಬೃಂದಾವನ ಓಪನ್
ಚಿರತೆ ಬೋನಿಗೆ ಬಿದ್ದ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಇದೀಗ ಚಿರತೆ ಸಂರಕ್ಷಿಸಿ ಅಭಯಾರಣ್ಯಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಕೆಲ ತಿಂಗಳಿಂದ ಚಿರತೆಯ ಕಾಟಕ್ಕೆ ಬೇಸತ್ತಿದ್ದ ಹರಮಘಟ್ಟ ಗ್ರಾಮಸ್ಥರು ಚಿರತೆಯ ಸೆರೆಯೊಂದಿಗೆ ಅದರ ಭಯದಿಂದ ಮುಕ್ತವಾಗಿದ್ದಾರೆ