ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯ ಗಳಿಸಿದ್ದ ಮೇಬಿನಾ ಮೈಕಲ್ ಅವರು ಮಂಗಳವಾರ ಸಂಜೆ ಸಂಭವಿಸಿದ ಭೀರಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಡಿಕೇರಿ(ಮೇ 27): ಪ್ಯಾಟೆ ಹುಡುಗೀರ ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಗಳಿಸಿದ್ದ ಮೇಬಿನಾ ಮೈಕಲ್ ಅವರು ಮಂಗಳವಾರ ಸಂಜೆ ಸಂಭವಿಸಿದ ಭೀರಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸೋಮವಾರಪೇಟೆ ಸಮೀಪದ ಐಗೂರು ನಿವಾಸಿ ಐರಿನ್ ವಾಸ್ ಅವರ ಮೊಮ್ಮಗಳು ಹಾಗೂ ಬೆನ್ಸಿ ಮೈಕಲ್ ಅವರ ಪುತ್ರಿಯಾಗಿದ್ದ ಮೇಬಿನಾ ಮೈಕಲ್ ಶೋ ನಂತರ ಫೇಮಸ್ ಆಗಿದ್ದರು.
ವಂದೇ ಭಾರತ್ ಮಿಷನ್‌ನ 3ನೇ ಹಂತದಲ್ಲೂ ಮಂಗಳೂರಿಗೆ ವಿಮಾನ ಇಲ್ಲ
ಮೃತದೇಹವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಇವರು ಬೆಂಗಳೂರಿನಿಂದ ಅಜ್ಜಿಯ ಮನೆಗೆ ಬರುತ್ತಿದ್ದಾಗ ಬೆಳ್ಳೂರು ಕ್ರಾಸ್‌ನಲ್ಲಿ ಅಪಘಾತ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ವಾಹನದಲ್ಲಿ ಮೂರು ಮಂದಿ ಇದ್ದರೆಂದು ತಿಳಿದುಬಂದಿದೆ.