Veer Savarkar: ಸತ್ಯ ಅರಿತು ಸಾವರ್ಕರ್‌ ಬಗ್ಗೆ ಮಾತಾಡಿ: ಬಿ.ಎಲ್‌. ಸಂತೋಷ್‌

By Kannadaprabha NewsFirst Published Dec 19, 2021, 5:15 AM IST
Highlights

*  ದೇಶ ವಿಭಜನೆ ಆಗುವುದನ್ನು ಬಲವಾಗಿ ವಿರೋಧಿಸಿದ್ದ ಸಾವರ್ಕರ್‌ 
*  ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಸಾವರ್ಕರ್‌ಗೆ ಮೊದಲೇ ಅಂದಾಜಿತ್ತು
*  ಬ್ರಿಟಿಷರ ಪಾಲಿಗೆ ನ್ಯೂಕ್ಲಿಯರ್‌ ಬಾಂಬ್‌ ಆಗಿದ್ದ ಸಾವರ್ಕರ್‌
 

ಬೆಂಗಳೂರು(ಡಿ.19):  ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌(Congress) ಹೊರತುಪಡಿಸಿ ಬೇರೆ ಯಾವ ಪಕ್ಷದ ನಾಯಿಯೂ ಹೋರಾಡಿಲ್ಲ ಎಂದು ಆರೋಪಿಸುವವರು ಅಖಂಡ ಭಾರತಕ್ಕೆ ಒತ್ತಾಯಿಸಿದ್ದ ಅಪ್ರತಿಮ ದೇಶಭಕ್ತ ವೀರ ಸಾವರ್ಕರ್‌ ಬಗ್ಗೆ ತಿಳಿದುಕೊಳ್ಳಬೇಕು. ಸಾವರ್ಕರ್‌(Savarkar) ಅವರಂತೆ ಅಸಂಖ್ಯ ಶೂರರೂ ಹೋರಾಡಿದ್ದಾರೆ. ಸ್ವಾತಂತ್ರ್ಯ ಬಂದ ಒಂದು ತಿಂಗಳ ನಂತರ ಕಾಂಗ್ರೆಸ್‌ ವಿಸರ್ಜಿಸಬೇಕು ಎಂದು ಮಹಾತ್ಮ ಗಾಂಧೀಜಿಯವರು ಹೇಳಿಕೆ ನೀಡಿದ್ದನ್ನು ಟೀಕಾಕಾರರು ಮರೆತಿರುವಂತಿದೆ ಎಂದು ಬಿಜೆಪಿ(BJP) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌(BL Santosh) ಹೇಳಿದ್ದಾರೆ.

ಶನಿವಾರ ಸಂಜೆ ಪುರಭವನದಲ್ಲಿ ಏರ್ಪಡಿಸಿದ್ದ ಕೇಂದ್ರದ ಮಾಹಿತಿ ಆಯುಕ್ತ ಉದಯ್‌ ಮಹೂರ್ಕರ್‌ ವಿರಚಿತ ‘ವೀರ ಸಾವರ್ಕರ್‌-ದಿ ಮ್ಯಾನ್‌ ಹು ಕುಡ್‌ ಹ್ಯಾವ್‌ ಪ್ರಿವೆಂಟೆಡ್‌ ಪಾರ್ಟಿಷನ್‌’ ಆಂಗ್ಲ ಕೃತಿ(Book) ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವರ್ಕರ್‌ ಅವರನ್ನು ಟೀಕಿಸುವ ಕಾಂಗ್ರೆಸಿಗರು ಸ್ವಾತಂತ್ರ್ಯಕ್ಕಾಗಿ(Freedom) ಜೈಲಿಗೆ ಹೋಗಿಲ್ಲ. ಬೇರೆ ಬೇರೆ ಕಾರಣಕ್ಕಾಗಿ ಜೈಲಿಗೆ ಹೋಗಿದ್ದಾರೆ. ಆದರೆ ಸಾವರ್ಕರ್‌ ಅವರು ಮಾಡಿರುವ ಮಹತ್ಕಾರ್ಯದ ವಿವಿಧ ಆಯಾಮಗಳನ್ನು ಟೀಕಾಕಾರರು ಅರಿತುಕೊಳ್ಳಬೇಕು ಎಂದರು.

ವೀರ ಸಾವರ್ಕರ್‌ ಇದ್ದ ಸೆಲ್‌ಗೆ ಭೇಟಿ ನೀಡಿ 'ಸತ್ಯ' ಹೇಳಿದ ಕಂಗನಾ!

ದೇಶ ವಿಭಜನೆ(Country Partition) ಆಗುವುದನ್ನು ಸಾವರ್ಕರ್‌ ಬಲವಾಗಿ ವಿರೋಧಿಸಿದ್ದರು. ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಅವರಿಗೆ ಮೊದಲೇ ಅಂದಾಜಿತ್ತು. ಚೀನಾ(China) ಜೊತೆ ಯುದ್ಧ(war) ನಡೆಯುತ್ತದೆ ಎಂದು 8 ವರ್ಷ ಮೊದಲೇ ಸಾವರ್ಕರ್‌ ಎಚ್ಚರಿಸಿದ್ದರು. ಆದರೆ ಅಂದು ಪ್ರಧಾನಿಯಾಗಿದ್ದ ಜವಾಹರ್‌ಲಾಲ್‌ ನೆಹರೂ(Jawaharlal Nehru) ಅವರು ಯುದ್ಧ ನಡೆಯುವುದಿಲ್ಲ ಎಂಬ ಭ್ರಮೆಯಲ್ಲಿದ್ದರು. ನಮ್ಮ ಸೈನಿಕರಿಗೆ(Soldiers) ಹಿಮಪ್ರದೇಶದಲ್ಲಿ ಬಳಸುವ ಶೂ ಕೊಡಲಿಲ್ಲ. ಹೋರಾಡಲು ಬಂದೂಕು ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಚಾರಕ್ಕಾಗಿ ಬೋರ್ಡ್‌:

ನಾನು ನಕ್ಸಲ್‌(Naxal), ನಾನು ಗೌರಿ ಎಂದು ಬೋರ್ಡ್‌ ಹಾಕಿಕೊಳ್ಳುತ್ತಿದ್ದವರು, ಗೋಮಾಂಸ(Beef) ಭಕ್ಷಣೆ ಮಾಡುತ್ತೇನೆ ಎನ್ನುತ್ತಿದ್ದವರ ಸದ್ದು ಈಗ ಸ್ವಲ್ಪ ಅಡಗಿದೆ. ಮೆಟ್ಟಿಲ ಮೇಲೆ 10 ಜನ ಕೂತರೆ ಸಾಕು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಬಹುದು ಎಂದು ಅಂತಹವರು ಭಾವಿಸಿದ್ದರು. ಈ ಕಾರ್ಯಕ್ರಮವನ್ನು ನಮಗಿಂತ ವಿರೋಧಿಗಳು ಆನ್‌ಲೈನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ. ಉರಿದುಕೊಳ್ಳಲಿ ಬಿಡಿ ಎಂದು ವ್ಯಂಗ್ಯವಾಡಿದರು.

ಕೆಂಡ ಕಾರುವವರು ಕಾರಲಿ. ಆದರೆ ಈಗ ದೇಶ ಒಳ್ಳೆಯ ರೀತಿಯಲ್ಲಿ ಬದಲಾಗುತ್ತಿದೆ. ಬದಲಾವಣೆಗೆ ವೇಗ ಸಿಗುತ್ತಿದೆ. ಆಡಳಿತದಲ್ಲಿ ಚಿಂತನೆಯಿದ್ದು, ಬದ್ಧತೆಯಿಂದ ಕೆಲಸ ಮಾಡಲಾಗುತ್ತಿದೆ. ಸಿನಿಮಾ, ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲೆಡೆ ಬದ್ಧತೆಯಿಂದ ಕಾರ್ಯನಿರ್ವಹಿಸುವವರು ಇದ್ದಾರೆ. ಆದರೆ ವಿರೋಧ ಪಕ್ಷದಲ್ಲಿ ಕುಳಿತಿರುವವರು ಅಧಿಕಾರದ ಹಪಹಪಿಯಿಂದ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌(Dr BR Ambedkar) ಮತ್ತು ವೀರ ಸಾವರ್ಕರ್‌ ಉತ್ತಮ ಸ್ನೇಹಿತರಾಗಿದ್ದರು. ಇವರಿಬ್ಬರೂ ಅಸ್ಪೃಶ್ಯತೆ(Untouchability), ದೇಶ ವಿಭಜನೆಯನ್ನು ಬಲವಾಗಿ ವಿರೋಧಿಸಿದ್ದರು. ದೇಶ ವಿಭಜನೆಯ ನೋವನ್ನು ಈಗ ಅನುಭವಿಸುತ್ತಿದ್ದೇವೆ. ಯಾವುದನ್ನೇ ಆಗಲಿ ಪೂರ್ವಾಗ್ರಹ ಪೀಡಿತವಾಗಿ ಓದಬಾರದು, ಅರ್ಥ ಮಾಡಿಕೊಳ್ಳಬಾರದು, ಮಾತನಾಡಬಾರದು ಎಂದು ಟೀಕಾಕಾರರಿಗೆ ಸಲಹೆ ನೀಡಿದರು.
ಮಾದಾರ ಚನ್ನಯ್ಯ ಸ್ವಾಮೀಜಿ, ಲೇಖಕ ಉದಯ್‌ ಮಹೂರ್ಕರ್‌, ಪತ್ರಕರ್ತೆ ಶ್ರೀಲಕ್ಷ್ಮೇ ರಾಜ್‌ಕುಮಾರ್‌ ಉಪಸ್ಥಿತರಿದ್ದರು.

ಬ್ರಿಟಿಷರ ಪಾಲಿಗೆ ನ್ಯೂಕ್ಲಿಯರ್‌ ಬಾಂಬ್‌ ಆಗಿದ್ದ ಸಾವರ್ಕರ್‌

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರು ಬ್ರಿಟಿಷರಿಗೆ(Bitish) ನ್ಯೂಕ್ಲಿಯರ್‌ ಬಾಂಬ್‌ ಆಗಿದ್ದರು. ಒಂದು ವೇಳೆ ಸಾರ್ವಕರ್‌ ಅವರನ್ನು ದೇಶದಲ್ಲಿ ಬದುಕಲು ಬಿಟ್ಟರೆ, ನಮಗೆ ಉಳಿಗಾಲವಿಲ್ಲವೆಂದು ಅಂಡಮಾನ್‌ನಲ್ಲಿರುವ ಕಾಲಪಾಣಿಕ್‌ ಜೈಲಿಗೆ 14 ವರ್ಷ ಹಾಕಿದ್ದರು. ಬಳಿಕ 13 ವರ್ಷ ರತ್ನಗಿರಿ ಬಿಟ್ಟು ಬೇರೆಡೆ ತೆರಳಬಾರದು ಎಂದು ನಿರ್ಬಂಧ ಹೇರಲಾಗಿತ್ತು. ಒಟ್ಟಾರೆ 27 ವರ್ಷ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜೈಲಿನಲ್ಲಿಡಲಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಿಳಿಸಿದರು.

'ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಗಾಂಧೀಜಿ'

ವೀರ ಸಾವರ್ಕರ್‌ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅಸ್ಪೃಶ್ಯತೆಯನ್ನು ಬಲವಾಗಿ ವಿರೋಧಿಸುತ್ತಿದ್ದ ಸಾವರ್ಕರ್‌ ಅವರು ಹಿಂದುತ್ವ, ಹಿಂದೂ ಸಂಘಟನೆಗಳ ಮೂಲಕ ಜನರನ್ನು ಒಗ್ಗೂಡಿಸುತ್ತಿದ್ದರು. ಅದಕ್ಕಾಗಿಯೇ ಅವರನ್ನು ಜೈಲಿನಲ್ಲಿಟ್ಟು ಹತ್ತಿಕ್ಕುವ ಪ್ರಯತ್ನವನ್ನು ಬ್ರಿಟಿಷರು ಮಾಡಿದರು. ನ್ಯೂಕ್ಲಿಯರ್‌ ಬಾಂಬ್‌ ಯಾವ ರೀತಿ ಶಕ್ತಿಯುತ ಆಗಿರುತ್ತದೆಯೋ ಅದೇ ರೀತಿ ಸಾವರ್ಕರ್‌ ಅಪ್ರತಿಮ ಹೋರಾಟಗಾರರಾಗಿದ್ದರು ಎಂದು ಬಣ್ಣಿಸಿದರು.

ದೇವಸ್ಥಾನಕ್ಕೆ ದಲಿತರು ಪ್ರವೇಶ ಮಾಡಬಾರದು ಎಂದು ದೈವ ಹೇಳಿದರೆ, ಅಂತಹ ದೈವವನ್ನೇ ನಿರಾಕರಿಸಿ ಎಂದು ಸಾವರ್ಕರ್‌ ಹೇಳಿದ್ದರು. ವಿದೇಶಕ್ಕೆ ಅಧ್ಯಯನಕ್ಕೆಂದು ಹೋದ ಮಹಾತ್ಮ ಗಾಂಧೀಜಿ, ವೀರ ಸಾವರ್ಕರ್‌ ಮತ್ತಿತರರು ಅಲ್ಲಿಂದ ಹಿಂದಿರುಗಿ ತಾಯ್ನಾಡಿಗೆ ಬಂದ ಮೇಲೆ ಬ್ರಿಟಿಷರ ವಿರುದ್ಧವೇ ತಿರುಗಿಬಿದ್ದರು ಅಂತ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.  
 

click me!