
ಬೆಂಗಳೂರು,( ಡಿ.18): ನಮ್ಮ ಮೆಟ್ರೋ ರೈಲು (Namma Metro Train) ಸಂಚಾರ ಅವಧಿಯನ್ನು ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಆದೇಶ (BMRCL) ಹೊರಡಿಸಿದೆ.
ಡಿಸೆಂಬರ್ 20 ರಿಂದ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲು ಸಂಚಾರ ಆರಂಭ ಆಗಲಿದೆ. ಈ ಮೊದಲು ಮೆಟ್ರೋ ಸಂಚಾರ ಬೆಳಗ್ಗೆ 6 ಗಂಟೆಯಿಂದ ಪ್ರಾರಂಭವಾಗುತ್ತಿತ್ತು. ಇದೀಗ ಭಾನುವಾರ ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೆ ಎಲ್ಲಾ ದಿನಗಳಂದು ಒಂದು ಗಂಟೆ ಮುಂಚಿತವಾಗಿ ರೈಲು ಸಂಚಾರ ಆರಂಭವಾಗುತ್ತಿದೆ.
BMRCL Recruitment 2022: ನಮ್ಮ ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, ಇಂದೇ ಅರ್ಜಿ ಹಾಕಿ
ವಾರದ ದಿನಗಳಲ್ಲಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯ್ಯಪ್ಪನಹಳ್ಳಿಯಿಂದ ಮೊದಲ ಮೆಟ್ರೋ ರೈಲು ಸೇವೆಯು ಬೆಳಗ್ಗೆ 5 ಗಂಟೆಯಿಂದ ಲಭ್ಯವಿರುತ್ತದೆ. ಇದರಿಂದ ಬೆಳಗ್ಗೆ ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ.
ಭಾನುವಾರ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸಂಚಾರ ಆರಂಭ ಆಗಲಿದೆ. ವಾರದ ಎಲ್ಲಾ ದಿನಗಳಲ್ಲಿ ಉಳಿದ ನಿಲ್ದಾಣಗಳಲ್ಲಿ ಕೊನೆಯ ರೈಲು ಸಂಚಾರ ರಾತ್ರಿ 11 ಗಂಟೆಗೆ ಇರಲಿದೆ. ಮತ್ತು ಮುಖ್ಯ ನಿಲ್ದಾಣ, ನಾಡಪ್ರಭು ಕೆಂಪೇಗೌಡ ರೈಲು ನಿಲ್ದಾಣದಿಂದ ರಾತ್ರಿ 11.30ಕ್ಕೆ ಕೊನೆಯದಾಗಿ ಸಂಚಾರ ಮಾಡಲಿದೆ ಎಂದು ಬಿಎಂಆರ್‌ಸಿಎಲ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
Bengaluru| ರಾತ್ರಿ 11ರವರೆಗೆ ಮೆಟ್ರೋ ಓಡಿಸಿ, ಪ್ರಯಾಣಿಕರ ಆಗ್ರಹ
ರಾತ್ರಿ 11ರವರೆಗೆ ಮೆಟ್ರೋ ಓಡಿಸಲು ಆಗ್ರಹವಾಗಿತ್ತು
ಕೋವಿಡ್-19(Covid19) ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರು(Bengaluru) ನಗರದಲ್ಲಿ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು(Night Curfew) ಸರ್ಕಾರ ರದ್ದು ಮಾಡಿದ್ದರೂ ‘ನಮ್ಮ ಮೆಟ್ರೋ’(Namma Metro) ತನ್ನ ಸೇವೆಯ ಅವಧಿಯನ್ನು ರಾತ್ರಿ 11ರವರೆಗೆ ಇನ್ನೂ ವಿಸ್ತರಿಸದೇ ಇರುವುದಕ್ಕೆ ಮೆಟ್ರೋ ಪ್ರಯಾಣಿಕರ(Passengers) ಅಸಮಾಧಾನ ವ್ಯಕ್ತಪಡಿಸಿದ್ದರು..
ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಕೆಎಸ್‌ಆರ್‌ಟಿಸಿ(KSRTC), ರೈಲು(Train) ಸಂಚಾರ, ರಾತ್ರಿ ಪಾಳಿಯ ಕೆಲಸಗಳು ನಡೆಯುತ್ತಿವೆ. ಬೇರೆ ಬೇರೆ ಊರಿನಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಅವಧಿಯನ್ನು ರಾತ್ರಿ 11ರವರೆಗೆ ವಿಸ್ತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು..
ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ
ಬಿಎಂಆರ್‌ಸಿಎಲ್ 2019-20ರಲ್ಲಿ ಪ್ರತಿದಿನ 15 ಲಕ್ಷ ಜನರು ಸಂಚಾರ ನಡೆಸಲಿದ್ದಾರೆ ಎಂದು ಅಂದಾಜಿಸಿತ್ತು. ಆದರೆ ಗುರಿಯ ಶೇ 27ರಷ್ಟು ಜನರು ಮಾತ್ರ ಸಂಚಾರ ನಡೆಸಿದ್ದಾರೆ. ಕೋವಿಡ್ ಪರಿಸ್ಥಿತಿ ಬಳಿಕ ಮತ್ತೆ ರೈಲು ಸಂಚಾರ ಆರಂಭವಾದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ.
2019-20ರಲ್ಲಿ ಬಿಎಂಆರ್‌ಸಿಎಲ್ ಪ್ರತಿದಿನ 15 ಲಕ್ಷ ಜನರು ಪ್ರಯಾಣಿಸಲಿದ್ದಾರೆ ಎಂದು ಅಂದಾಜಿಸಿತ್ತು. ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ಸೇರಿ ನಮ್ಮ ಮೆಟ್ರೋ ರೈಲು 42 ಕಿ. ಮೀ. ಸಂಚಾರ ನಡೆಸುವಾಗ ಪ್ರತಿದಿನ ಸುಮಾರು 4 ಲಕ್ಷ ಜನರು ಸಂಚಾರ ನಡೆಸುತ್ತಿದ್ದರು. ಈಗ ಮಾರ್ಗ 56 ಕಿ. ಮೀ.ಗೆ ವಿಸ್ತರಣೆಯಾಗಿದ್ದು, ಪ್ರತಿದಿನ ಸಂಚಾರ ನಡೆಸುವ ಜನರ ಸಂಖ್ಯೆ 3 ಲಕ್ಷದ ಗಡಿ ದಾಟುತ್ತಿಲ್ಲ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಮನೆಯಿಂದಲೇ ಕೆಲಸ ಮಾಡಲು ಕಂಪನಿಗಳು ಸೂಚನೆ ನೀಡಿದವು. ಈಗ ಕೋವಿಡ್ ಪರಿಸ್ಥಿತಿ ಬಳಿಕ ವಿವಿಧ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಶಾಲಾ-ಕಾಲೇಜುಗಳು ಆರಂಭವಾಗಿವೆ. ಹಲವು ಕಚೇರಿಗಳು ಬಾಗಿಲು ತೆರೆದಿವೆ. ಆದರ ಹಲವಾರು ಕಂಪನಿಗಳು ಇನ್ನೂ ಆರಂಭವಾಗಿಲ್ಲ. ಆದ್ದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿಲ್ಲ ಎನ್ನಲಾಗಿದೆ.