* ಸೋಂಕಿತರ ಸಂಖ್ಯೆ 12,59,963ಕ್ಕೆ ಏರಿಕೆ
* 42 ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ
* ಮೈಕ್ರೋ ಕಂಟೈನ್ಮೆಂಟ್ 101ಕ್ಕೆ ಏರಿಕೆ
ಬೆಂಗಳೂರು(ಡಿ.19): ನಗರದಲ್ಲಿ ಕೋವಿಡ್(Covid19) ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಶನಿವಾರ 225 ಜನರಲ್ಲಿ ಸೋಂಕು ದೃಢಪಟ್ಟಿದೆ. ಓರ್ವ ಸೋಂಕಿನಿಂದ ಮೃತಪಟ್ಟಿದ್ದಾರೆ(Death). ಹೊಸ ಪ್ರಕರಣಗಳ ಪತ್ತೆಯಿಂದ ಸೋಂಕಿತರ ಸಂಖ್ಯೆ 12,59,963ಕ್ಕೆ ಏರಿಕೆಯಾಗಿದೆ. 180 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಬಿಡುಗಡೆಯಾದವರ ಸಂಖ್ಯೆ 12,37,945ಕ್ಕೆ ಏರಿಕೆಯಾಗಿದೆ. ಓರ್ವನ ಸಾವಿನೊಂದಿಗೆ ಮೃತರಾದವರ ಸಂಖ್ಯೆ 16,378ಕ್ಕೆ ಮುಟ್ಟಿದೆ. ನಗರದಲ್ಲಿ ಸದ್ಯ 5640 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.
ಕಳೆದ ಹತ್ತು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 3ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್‌ನಲ್ಲಿ 8, ದೊಡ್ಡನೆಕ್ಕುಂದಿ 6, ಹಗದೂರು, ಬೇಗೂರು ವಾರ್ಡ್‌ನಲ್ಲಿ ತಲಾ 5, ಎಚ್‌ಎಸ್‌ಆರ್ ಲೇಔಟ್, ಸಿಂಗಸಂದ್ರ ವಾರ್ಡ್‌ನಲ್ಲಿ ತಲಾ 4, ರಾಜರಾಜೇಶ್ವರಿನಗರ, ಹೆಮ್ಮಿಗೇಪುರ, ಬ್ಯಾಟರಾಯನಪುರ, ಹೊರಮಾವು ವಾರ್ಡ್‌ಗಳಲ್ಲಿ ತಲಾ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
Omicron Threat: ಮುಳುವಾಯ್ತಾ ಸಾಂಸ್ಥಿಕ ಕ್ವಾರಂಟೈನ್ ವಿನಾಯ್ತಿ?: ಮತ್ತೆ ಕೊರೋನಾ ಸ್ಫೋಟ ಸಾಧ್ಯತೆ
ಮೈಕ್ರೋ ಕಂಟೈನ್ಮೆಂಟ್ 101ಕ್ಕೆ ಏರಿಕೆ:
ಪಾಲಿಕೆ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ(Micro Containment) ಸಂಖ್ಯೆ 101 ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 36, ಮಹದೇವಪುರ 12, ದಕ್ಷಿಣ 24, ಪೂರ್ವ 10, ಪಶ್ಚಿಮ 8, ಯಲಹಂಕ 7, ಆರ್‌ಆರ್ ನಗರ 3 ಮತ್ತು ದಾಸರಹಳ್ಳಿ 1 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ.
42 ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ
ವಾರಾಂತ್ಯದ ಹಿನ್ನೆಲೆಯಲ್ಲಿ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಶನಿವಾರ 42,644 ಮಂದಿ ಲಸಿಕೆ(Vaccine) ಪಡೆದುಕೊಂಡಿದ್ದಾರೆ. 362 ಸರ್ಕಾರಿ ಮತ್ತು 199 ಖಾಸಗಿ ಸೇರಿದಂತೆ 561 ಲಸಿಕಾ ಕೇಂದ್ರದಲ್ಲಿ ಲಸಿಕಾಕರಣ ನಡೆದಿತ್ತು. ಇದುವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,50,31,954 ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ ಮೊದಲ ಡೋಸ್ ಲಸಿಕೆಯನ್ನು 83,37,391 ಮಂದಿ ಮತ್ತು ಎರಡನೇ ಡೋಸ್ ಲಸಿಕೆಯನ್ನು 66,94,563 ಜನರು ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಕೊಂಚ ಏರಿಕೆ: 335 ಮಂದಿಗೆ ಸೋಂಕು 5 ಸಾವು
ರಾಜ್ಯದಲ್ಲಿ(Karnataka) ಕೋವಿಡ್-19 ದೈನಂದಿನ ಪ್ರಕರಣ ಶನಿವಾರ 335ಕ್ಕೆ ಏರಿಕೆ ಕಂಡಿದೆ. ಐದು ಮಂದಿ ಮರಣವನ್ನಪ್ಪಿದ್ದಾರೆ. 286 ಮಂದಿ ಗುಣ ಹೊಂದಿದ್ದಾರೆ. ಶುಕ್ರವಾರ 238 ಪ್ರಕರಣ ವರದಿಯಾಗಿತ್ತು. ಶನಿವಾರ 1.18 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು, ಶೇ.0.28 ಪಾಸಿಟಿವಿಟಿ ದರ ದಾಖಲಾಗಿದೆ.
Omicron Variant: ಸೋಂಕಿತರಿಗೆ ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್ ಚಿಕಿತ್ಸೆ
ಬೆಂಗಳೂರು(Bengaluru) ನಗರದಲ್ಲಿ 225, ಕೊಡಗು 25, ದಕ್ಷಿಣ ಕನ್ನಡ 19 ಮತ್ತು ಮೈಸೂರು ಜಿಲ್ಲೆಯಲ್ಲಿ 14 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿಯಲ್ಲಿ ಸೋಂಕಿನ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಹೊಸ ಪ್ರಕರಣ ವರದಿಯಾಗಿದೆ. ಬೆಂಗಳೂರು ನಗರ, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತರಾಗಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 38,287 ಮಂದಿ ಕೋವಿಡ್‌ನಿಂದ ಮರಣವನ್ನಪ್ಪಿದ್ದಾರೆ. ಈವರೆಗೆ ಒಟ್ಟು 30 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 29.56 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 7,120 ಸಕ್ರಿಯ ಪ್ರಕರಣಗಳಿವೆ.
ಲಸಿಕೆ ಅಭಿಯಾನ:
2.38 ಲಕ್ಷ ಡೋಸ್ ಲಸಿಕೆಯನ್ನು ಶನಿವಾರ ನೀಡಲಾಗಿದೆ. 1.91 ಲಕ್ಷ ಎರಡನೇ ಮತ್ತು 46,590 ಮೊದಲ ಡೋಸ್ ಲಸಿಕೆ ಪ್ರದಾನ ಮಾಡಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 8.25 ಕೋಟಿ ಡೋಸ್ ಲಸಿಕೆ ಪ್ರದಾನ ಮಾಡಲಾಗಿದೆ. 4.70 ಕೋಟಿ ಮೊದಲ ಮತ್ತು 3.55 ಕೋಟಿ ಎರಡನೇ ಡೋಸ್ ಪ್ರದಾನ ಮಾಡಲಾಗಿದೆ.