ರಾಜ್ಯ ಪುನರ್ವಿಂಗಡಣೆ ವೇಳೆ ಗಡಿ ಜಿಲ್ಲೆ ಚಾಮರಾಜನಗರದ ನೆರೆಯಲ್ಲಿ ಬರುವ ತಾಳವಾಡಿ ತಮಿಳುನಾಡಿಗೆ ಸೇರಿದೆ. ಆದ್ರೆ ಅಂದಿನಿಂದಲೂ ಕೂಡ ತಾಳವಾಡಿ ಫೀರ್ಕದ 48 ಗ್ರಾಮದಲ್ಲಿ ವಾಸಿಸುವ ಜನರೆಲ್ಲ ಕನ್ನಡಿಗರು ಕರ್ನಾಟಕಕ್ಕೆ ಸೇರಿಸಿ ಅಂತಾ ಹೋರಾಟ ನಡೆದಿದೆ.
ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಅ.31): ರಾಜ್ಯೋತ್ಸವ ಬಂತಂದ್ರೆ ಸಾಕು ರಾಜ್ಯಾದ್ಯಂತ ಕನ್ನಡ ಡಿಂಡಿಮದ ಸದ್ದು ಜೋರಾಗುತ್ತೆ. ಆದ್ರೆ ನೆರೆ ರಾಜ್ಯದ ಕನ್ನಡಿಗರ ಕಥೆ ಕೇಳಿದ್ರೆ ನಿಜವಾಗ್ಲೂ ಬೇಸರವಾಗುತ್ತೆ. ಆ ಪ್ರಾಂತ್ಯ ಒಂದು ಕಾಲದಲ್ಲಿ ಕರ್ನಾಟಕದಲ್ಲಿತ್ತು. ಅಲ್ಲಿರುವ 48 ಜನಗಳ ನುಡಿಯೇ ಕನ್ನಡವಾಗಿತ್ತು. ನಂತರ ಭಾಷಾ, ರಾಜ್ಯ ವಿಂಗಡನೆ ನಂತರ ಆ ಪ್ರಾಂತ್ಯ ನೆರೆ ರಾಜ್ಯ ತಮಿಳುನಾಡಿಗೆ ಸೇರಿದೆ. ಆದ್ರೂ ಕೂಡ ಆ ಪ್ರಾಂತ್ಯದಲ್ಲಿ ಜನರ ಭಾಷೆ ಸಂಸ್ಕ್ರತಿ, ಆಚಾರ ವಿಚಾರ ಕನ್ನಡವೇ ಆಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವದಲ್ಲಿದ್ದರೂ ಕನ್ನಡಿಗರ ಕಷ್ಟ ಆಲಿಸುವ ಕೆಲಸ ಇಲ್ಲಿ ನಡೆದೆ ಇಲ್ಲ ಅಂತಾರೆ. ನಾವೂ ತಮಿಳುನಾಡಿನಲ್ಲಿದ್ರೂ ಕೂಡ ಓದಿರೋದು ಮಾತ್ರ ಕನ್ನಡ ಕಾರಣ ತಾಳವಾಡಿಯಲ್ಲಿ ತಮಿಳು ಶಾಲೆಗಳಿಗಿಂತ ಕನ್ನಡ ಶಾಲೆಗಳೆ ಹೆಚ್ಚು ಇತ್ತ ತಮಿಳುನಾಡಿನಲ್ಲೂ ಸರ್ಕಾರಿ ಕೆಲಸ ಸಿಗ್ತಿಲ್ಲ, ಇತ್ತ ಕರ್ನಾಟಕದಲ್ಲಿಯೂ ಕೆಲಸವಿಲ್ಲ ಅಂತಾ ಅಳಲು ತೋಡಿಕೊಳ್ತಿದ್ದಾರೆ. ರಾಜ್ಯ ಪುನರ್ವಿಂಗಡಣೆ ವೇಳೆ ಗಡಿ ಜಿಲ್ಲೆ ಚಾಮರಾಜನಗರದ ನೆರೆಯಲ್ಲಿ ಬರುವ ತಾಳವಾಡಿ ತಮಿಳುನಾಡಿಗೆ ಸೇರಿದೆ. ಆದ್ರೆ ಅಂದಿನಿಂದಲೂ ಕೂಡ ತಾಳವಾಡಿ ಫೀರ್ಕದ 48 ಗ್ರಾಮದಲ್ಲಿ ವಾಸಿಸುವ ಜನರೆಲ್ಲ ಕನ್ನಡಿಗರು ಕರ್ನಾಟಕಕ್ಕೆ ಸೇರಿಸಿ ಅಂತಾ ಹೋರಾಟ ನಡೆದಿದೆ. ತಮಿಳುನಾಡಿಗೆ ಸೇರಿದ್ರೂ ಕೂಡ ಇಲ್ಲಿನ ಜನರ ಭಾಷೆ ಕನ್ನಡವೇ ಆಗಿದೆ. ಈ ಭಾಗದಲ್ಲಿ ಕನ್ನಡದಲ್ಲಿ ವ್ಯಾಸಂಗ ಮಾಡಿದ ಮೂರು ಸಾವಿರಕ್ಕೂ ವಿದ್ಯಾವಂತರಿದ್ದಾರೆ. ಆದ್ರೆ ಈ ವಿದ್ಯಾವಂತರಿಗೆ ಸರ್ಕಾರಿ ಉದ್ಯೋಗ ಮಾತ್ರ ಗಗನ ಕುಸುಮವಾಗಿದೆ.
undefined
ಈ ಭಾಗದ ಜನರು ಓದಿರೋದು ಕನ್ನಡದಲ್ಲಿ ತಮಿಳುನಾಡಿನಲ್ಲಿ ಕೆಲಸ ಪಡೆಯಬೇಕಾದರೆ ಕಡ್ಡಾಯವಾಗಿ ತಮಿಳು ಪರೀಕ್ಷೆ ಪಾಸ್ ಮಾಡಬೇಕಿದೆ. ನಾವೂ ಓದಿರೋದು ಕನ್ನಡ ಮಾತ್ರ, ತಮಿಳು ಹೇಗೆ ಪಾಸ್ ಮಾಡೋದು ಇದರಿಂದ ನಮಗೆ ಕೆಲಸ ಸಿಗ್ತಿಲ್ಲ.ಇನ್ನೊಂದೆಡೆ ನಾವೂ ಕನ್ನಡದಲ್ಲಿ ಓದ್ತಿರೋದ್ರಿಂದ ಕರ್ನಾಟಕದಲ್ಲಿ ಕೆಲಸ ಪಡೆಯಬೇಕೆಂದ್ರೆ ನೀವು ತಮಿಳುನಾಡು ರಾಜ್ಯದವರು ಅಂತಾರೆ. ಇದರಿಂದ ತಮಿಳುನಾಡು, ಕರ್ನಾಟಕ ಎರಡು ಭಾಗದಲ್ಲೂ ಕೆಲಸದಿಂದ ವಂಚಿತರಾಗಿದ್ದೇವೆ. ಇನ್ನೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ಇದ್ದರೂ ಕೂಡ ನಮಗೆ ಪ್ರಯೋಜನವಿಲ್ಲ. ವಿಶ್ವದಲ್ಲಿ ಇರುವ ಕನ್ನಡಿಗರ ಹೊಣೆ ಸರ್ಕಾರದ್ದೆ ಅಲ್ಲವೇ ಅಂತಾ ಪ್ರಶ್ನೆ ಮಾಡ್ತಾರೆ.
ರಾಜ್ಯದಲ್ಲೇ ವಾಸ್ತವ್ಯ ಹೂಡಲಿರುವ Randeep Surjewala: ನಾನು ಪೂರ್ತಿ ಕನ್ನಡಿಗ ಎಂದ ಕಾಂಗ್ರೆಸ್ ಉಸ್ತುವಾರಿ
ಇನ್ನೂ ತಾಳವಾಡಿ ಕನ್ನಡಿಗರು ಕನ್ನಡದಲ್ಲಿ ವ್ಯಾಸಂಗ ಮಾಡ್ತಿದ್ದು ಉದ್ಯೋಗದಿಂದ ವಂಚಿತರಾಗ್ತಿದ್ದಾರೆ, ನಾಳೆ ನಮ್ಮ ಮಕ್ಕಳನ್ನು ಕನ್ನಡದಲ್ಲಿ ಓದಿಸಬೇಕಾ? ಅಥವಾ ತಮಿಳಿನಲ್ಲಿ ಓದಿಸಬೇಕಾ ಅನ್ನೋ ಗೊಂದಲದಲ್ಲಿದ್ದಾರೆ. ತಮಿಳಿನಲ್ಲಿ ಓದಿಸಿದ್ರೆ ಕೆಲಸ ಸೇರಿದಂತೆ ಒಂದಷ್ಟು ಸೌಲಭ್ಯ ಪಡೆಯಬಹುದೆಂಬುದು ತಮಿಳುನಾಡು ಕನ್ನಡಿಗರ ಆಸೆ. ಕರ್ನಾಟಕ ಸರ್ಕಾರ ನಮ್ಮನ್ನು ಸಂಪೂರ್ಣ ಕಡೆಗಣಿಸಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಳ್ಳುವ ಮೂಲಕ ಕನ್ನಡಿಗರಿಗೆ ನೆರವಾಗಬೇಕಿದೆ. ಕನ್ನಡ ಮಾತನಾಡುವವರ ಹಿತರಕ್ಷಣೆ ಮಾಡೋದು ಸರ್ಕಾರದ ಹೊಣೆಯಾಗಿದೆ.
ಕನ್ನಡ ಬಲ್ಲವರನ್ನೆಲ್ಲ ಕನ್ನಡಿಗ ಅಂತ ಪರಿಗಣಿಸಿ: ಕಸಾಪ
ಒಟ್ಟಾರೆ ಇಲ್ಲಿಯೂ ಸಲ್ಲದೇ ಅಲ್ಲಿಯೂ ಸಲ್ಲದೆ ಅತಂತ್ರರಾಗಿರುವ ತಾಳವಾಡಿ ಕನ್ನಡಿಗರು ತಮಿಳುನಾಡು ಸರ್ಕಾರದ ಭಾಷಾ ಅಲ್ಪಸಂಖ್ಯಾತ ದಿಂದಲೂ ವಂಚಿತರಾಗಿದ್ದಾರೆ. ಈ ಕನ್ನಡಿಗರಿಗೆ ಉನ್ನತ ಶಿಕ್ಷಣ, ಸರ್ಕಾರಿ ಉದ್ಯೋಗ ಮರೀಚಿಕೆಯಾಗಿದ್ದು, ನಮಗೂ ಮೀಸಲಾತಿ ಕೊಡಿ ಅಂತಾ ಸರ್ಕಾರದ ಬಳಿ ಅಂಗಲಾಚ್ತಿದ್ದು, ಸರ್ಕಾರ ಇವರ ಮನವಿಗೆ ಸ್ಪಂದಿಸುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.