ಮಂಡ್ಯ: ಮನೆ ತೆರವು ಕಾರ್ಯಾಚರಣೆ ವೇಳೆ ಹೈ ಡ್ರಾಮ, ಕಲ್ಲಲ್ಲಿ ಹೊಡೆಯುವುದಾಗಿ ಎಚ್ಚರಿಕೆ

By Suvarna NewsFirst Published Oct 31, 2022, 4:39 PM IST
Highlights

ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅಂತಿಮ ಹಂತ ತಲುಪಿದೆ. ರಸ್ತೆ ಅಗಲೀಕರಣಕ್ಕಾಗಿ ಈಗಾಗಲೇ ಹಲವು ಮನೆ, ಜಮೀನುಗಳನ್ನ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ

ಬೆಂಗಳೂರು (ಅ.31): ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅಂತಿಮ ಹಂತ ತಲುಪಿದೆ. ರಸ್ತೆ ಅಗಲೀಕರಣಕ್ಕಾಗಿ ಈಗಾಗಲೇ ಹಲವು ಮನೆ, ಜಮೀನುಗಳನ್ನ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಹೆದ್ದಾರಿ ಪ್ರಾಧಿಕಾರ ನೀಡಿರುವ ಪರಿಹಾರ ಹಣದಲ್ಲಿ ತಾರತಮ್ಯ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇಂದು ಮಂಡ್ಯದ ಇಂಡುವಾಳು ಗ್ರಾಮದಲ್ಲಿ ಮನೆ ತೆರವಿಗೆ ಬಂದಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು. ಇಂದು ಮಂಡ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಜೆಸಿಬಿ ಘರ್ಜನೆ ಶುರುವಾಗಿತ್ತು. ದಶಪಥ ರಸ್ತೆ ನಿರ್ಮಾಣಕ್ಕೆ ಇಂಡುವಾಳು ಗ್ರಾಮದಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಮನೆಗಳನ್ನು ತೆರವು ಮಾಡಲು ಬಂದಿದ್ದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದರು. ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜನರ ಆಕ್ರೋಶದ ನಡುವೆಯೂ ನಿಗದಿ ಕಟ್ಟಡಗಳನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ರು. ಈ ವೇಳೆ ಕೈಯಲ್ಲಿ ಕಲ್ಲು ಹಿಡಿದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಮನೆ ಮಾಲೀಕ ರಾಜೇಗೌಡ ನಿಗದಿತ ಕಟ್ಟಡವಷ್ಟೇ ಕೆಡವಿ, ಒಂದಿಂಚೂ ಹೆಚ್ಚಿಗೆ ಕೆಡವಿದ್ರು ಕಲ್ಲಲ್ಲಿ ಹೊಡೀತಿನಿ ಎಂದು ಅವಾಜ್ ಹಾಕಿದ ಘಟನೆ ನಡೆಯಿತು. ಬೆಲೆ ಬಾಳುವ ಜಾಗಕ್ಕೆ ಕಡಿಮೆ ಪರಿಹಾರ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದ ಮನೆ ಮಾಲೀಕರು ಇಂದು ತೆರವು ಕಾರ್ಯಾಚರಣೆಗೆ ಅಡ್ಡಿ ಮಾಡಿದ್ರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದ ಗ್ರಾಮಸ್ಥರನ್ನ ಬಂಧಿಸಿ ಕರೆದೊಯ್ಯುತ್ತಿದ್ದಂತೆ ಜೆಸಿಬಿ ಘರ್ಜನೆ ಶುರುವಾಗಿತ್ತು. ಇಂಡುವಾಳು ಗ್ರಾಮದ ನಿಗಧಿತ ಮೂರು ಮನೆಗಳನ್ನು ನೆಲಸಮ ಮಾಡಲಾಯ್ತು.

ಯಕ್ಷಗಾನ ಕಲೆಗೆ ಮೋಹಿತರಾಗಿ ವೇಷ ಧರಿಸಿದ ಆರೋಗ್ಯ ಸಚಿವ ಸುಧಾಕರ್

ದಲ್ಲಾಳಿಗಳ ಮೂಲಕ ಪರಿಹಾರ ಅಕ್ರಮ ಶಾಸಕ ರವೀಂದ್ರ ಆರೋಪ
ಕಳೆದ 15 ದಿನಗಳ ಹಿಂದೆಯೂ ಜೆಸಿಬಿಗಳನ್ನು ತಂದು ಮನೆ ಕೆಡವಲು ಮುಂದಾಗಿದ್ದ ಅಧಿಕಾರಿಗಳಿಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಕ್ಲಾಸ್ ತೆಗೆದುಕೊಂಡಿದ್ರು. ಈ ವೇಳೆ ಪರಿಹಾರ ತಾರತಮ್ಯ ಬಗ್ಗೆ ಆರೋಪ ಮಾಡಿದ್ದ ರವೀಂದ್ರ ಹೆದ್ದಾರಿ ಪ್ರಾಧಿಕಾರ ದಲ್ಲಾಳಿಗಳ ಜೊತೆ ಶಾಮೀಲಾಗಿ ಪರಿಹಾರ ಅಕ್ರಮ ನಡೆಸಿದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಫಲಾನುಭವಿಗಳಲ್ಲದವರಿಗೂ ಕೋಟ್ಯಾಂತರ ರೂಪಾಯಿ ಪರಿಹಾರ ನೀಡಲಾಗಿದೆ ಎಂದಿದ್ದರು.

ಯಕ್ಷಗಾನಕ್ಕೆ ಕಾಲಮಿತಿ, ಕಟೀಲು ದೇವಿಯ ಮೊರೆ ಹೋಗಲು ನಿರ್ಧಾರ, ರಾತ್ರಿ ಪ್ರದರ್ಶನಕ್ಕೆ ಆಗ್ರಹ!

ಈ ವೇಳೆ ಮನೆ ತೆರವು ಕಾರ್ಯಾಚರಣೆ ಕೈಬಿಟ್ಟಿದ್ದ ಅಧಿಕಾರಿಗಳ ಶಾಸಕರ ಮಾತಿನಂತೆ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ರು. ಆದರೆ ಸೋಮವಾರ ಏಕಾಏಕಿ ತೆರವು ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿ ನಿಗಧಿತ ಕಟ್ಟಡಗಳನ್ನು ಕೆಡವಿದ್ದಾರೆ.

click me!