Bengaluru Metro Mobile Ticket: ರಾಜ್ಯೋತ್ಸವಕ್ಕೆ ಗಿಫ್ಟ್: ನ.1ರಿಂದ ಮೊಬೈಲ್‌ನಲ್ಲೇ 'ನಮ್ಮ ಮೆಟ್ರೋ' ಟಿಕೆಟ್‌

By Manjunath Nayak  |  First Published Oct 31, 2022, 5:22 PM IST

Bengaluru Metro QR Based Tickets: ಬೆಂಗಳೂರು ಮೆಟ್ರೋವು ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ವ್ಯವಸ್ಥೆಯನ್ನು ನವೆಂಬರ್‌ 1 ರಿಂದ ಜಾರಿಗೆ ತರಲಿದೆ 


ಬೆಂಗಳೂರು (ಅ. 31): ಕನ್ನಡ ರಾಜ್ಯೋತ್ಸವದಂದು (Kannada Rajyotsava) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ನೀಡಲಿದೆ. ಬೆಂಗಳೂರು ಮೆಟ್ರೋವು ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ (QR Code Ticket) ವ್ಯವಸ್ಥೆಯನ್ನು ನವೆಂಬರ್‌ 1 ರಿಂದ ಜಾರಿಗೆ ತರಲಿದೆ. ಈಗಾಗಲೇ ಸ್ಮಾರ್ಟ್ ಕಾರ್ಡ್, ಟೋಕನ್‌ ಮತ್ತು ಪಾಸ್‌ ಹಾಗೆಯೇ ವಿಶೇಷ ಸಂದರ್ಭದಲ್ಲಿ ಪೇಪರ್‌ ಟಿಕೆಟ್‌ ಬಳಸಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವ ನಮ್ಮ ಮೆಟ್ರೋ ಇನ್ನೊಂದು ಹೊಸ ಮಾದರಿಯ ಟಿಕೆಟ್‌ ವ್ಯವಸ್ಥೆ ಕಲ್ಪಿಸಲಿದೆ. ಟೋಕನ್ ದರಕ್ಕಿಂತ 5ರೂ ಕಡಿಮೆ ದರದಲ್ಲಿ ಕ್ಯೂಆರ್‌ ಕೋಡ್‌ ಟಿಕೆಟ್ ಲಭ್ಯವಿರಲಿದೆ.

ದೆಹಲಿ ಮೆಟ್ರೋ ಮಾದರಿಯಲ್ಲೇ ನಮ್ಮ ಮೆಟ್ರೋದಲ್ಲೂ ಮೊಬೈಲ್ ಟಿಕೆಟ್ ಜಾರಿಯಾಗಲಿದೆ. ಈ ಮೂಲಕ ಬೆಂಗಳೂರು ಮೆಟ್ರೋ ನಾಳೆಯಿಂದ ಮತ್ತಷ್ಟು ಹೈಟೆಕ್ ಆಗಲಿದೆ.  ನಮ್ಮ ಮೆಟ್ರೋ ಟಿಕೆಟ್ ನವೆಂಬರ್ 1 ರಿಂದ ಮೊಬೈಲ್ ಪೋನಿನಲ್ಲಿ ಸಿಗಲಿದೆ. ಹೀಗಾಗಿ ಟೋಕನ್‌ ಪಡೆಯಲು ಉದ್ದನೆಯ ಸಾಲಲ್ಲಿ ನಿಲ್ಲುವುದು ತಪ್ಪಲಿದೆ.  

Tap to resize

Latest Videos

ಕೆಲ ನಿಲ್ದಾಣಗಳಲ್ಲಿ  ಜನದಟ್ಟಣೆಯ ಅವಧಿಯಲ್ಲಿ ಮೆಟ್ರೋ ಟೋಕನ್‌ಗಾಗಿ ಉದ್ದನೆಯ ಸಾಲು ಸೃಷ್ಟಿಯಾಗುತ್ತಿದೆ.  ಹೀಗಾಗಿ ಜನದಟ್ಟಣೆ ಕಡಿಮೆ ಮಾಡಲು ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಚಿಲ್ಲರೆ ಕೊಡುವ ಸಮಸ್ಯೆಯೂ ಪರಿಹಾರವಾಗಲಿದೆ.  

ಮೆಟ್ರೋದ ‘ಮಿಯಾವಾಕಿ ಅರಣ್ಯ’ ಕನಸು ಭಗ್ನಗೊಳಿಸಿದ ಮಳೆರಾಯ..!

ಬಳಸುವುದು ಹೇಗೆ?: ಪೇಟಿಎಂ, ಯಾತ್ರಾ ಅಪ್ಲಿಕೇಷನ್‌ ಅಥವಾ ನಮ್ಮ ಮೆಟ್ರೋ ಅಪ್ಲಿಕೇಷನ್‌ನಲ್ಲಿ ಮಾರ್ಗ ನಮೂದಿಸಿ, ಹಣ ಪಾವತಿಸಿ, ಕ್ಯೂಆರ್‌ ಕೋಡ್‌ ಡೌನ್‌ಲೋಡ್‌ ಮಾಡಬೇಕು. ಮೆಟ್ರೋ ಗೇಟ್‌ನಲ್ಲಿರುವ ಕ್ಯೂಆರ್‌ ಸ್ಕ್ಯಾನರ್‌ಗೆ ಡೌನ್‌ಲೋಡ್‌ ಮಾಡಿರುವ ಕ್ಯೂಆರ್‌ ಕೋಡ್‌ ತೋರಿಸಿ ಸರಾಗವಾಗಿ ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಬಹುದು.  ಮೆಟ್ರೋ ಪ್ರಯಾಣಿಕರಲ್ಲಿ ದಿನನಿತ್ಯ ಶೇ.40ರಷ್ಟುಮಂದಿ ಟೋಕನ್‌ ಬಳಕೆದಾರರಿದ್ದಾರೆ. ಕ್ಯೂಆರ್‌ ಕೋಡ್‌ ಆಧಾರಿತ ವ್ಯವಸ್ಥೆಯು ಟೋಕನ್‌ ಬಳಕೆದಾರರಿಗೆ ಉಪಯುಕ್ತವಾಗಲಿದೆ.  

click me!