ಆರೋಗ್ಯ ತುಮಕೂರು ಅಭಿಯಾನದ ಸದುಪಯೋಗ ಪಡೆದುಕೊಳ್ಳಿ: ಡಾ. ಸಿದ್ದೇಶ್ವರ್

By Kannadaprabha News  |  First Published Dec 13, 2023, 9:41 AM IST

ಜನಸಾಮಾನ್ಯರಿಗೆ ಆರೋಗ್ಯ ಸೇವೆ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರವು ಪ್ರತಿ ಮನೆಗೆ ಆರೋಗ್ಯ ಸಿಬ್ಬಂದಿಯನ್ನು ಕಳುಹಿಸಿ ಆರೋಗ್ಯ ಪರೀಕ್ಷೆ ಮಾಡಲಾಗುವುದು. ಜನತೆ ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಿದ್ದೇಶ್ವರ್ ಹೇಳಿದರು.


  ಶಿರಾ :  ಜನಸಾಮಾನ್ಯರಿಗೆ ಆರೋಗ್ಯ ಸೇವೆ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರವು ಪ್ರತಿ ಮನೆಗೆ ಆರೋಗ್ಯ ಸಿಬ್ಬಂದಿಯನ್ನು ಕಳುಹಿಸಿ ಆರೋಗ್ಯ ಪರೀಕ್ಷೆ ಮಾಡಲಾಗುವುದು. ಜನತೆ ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಿದ್ದೇಶ್ವರ್ ಹೇಳಿದರು.

ತಾಲೂಕು ತೊಗರುಗುಂಟೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತುಮಕೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ಮನೆಯ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೆ 12 ವಿವಿಧ ಆರೋಗ್ಯ ತಪಾಸಣೆ ಮಾಡುವರು. ಆರೋಗ್ಯ ಸಮಸ್ಯೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗೆ ನಿರ್ದೇಶನ ಮಾಡುತ್ತಾರೆ. ಪ್ರತಿ ದಿನ ಒಂದು ತಂಡವು 25 ಮನೆಗಳಲ್ಲಿ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಸಾರ್ವಜನಿಕರು ಆರೋಗ್ಯ ಸಿಬ್ಬಂದಿಗೆ ಸಹಕರಿಸಿ ಅನುಕೂಲ ಪಡೆಯಿರಿ ಎಂದರು.

Tap to resize

Latest Videos

undefined

ಈ ಸಂದರ್ಭದಲ್ಲಿ ಪಿಡಿಒ ಗಂಗೂಬಾಯಿ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ್, ಸದಸ್ಯ ನರಸಿಂಹಮೂರ್ತಿ, ಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಾಜಿಯಾ ಅರ್ಮಿನ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎನ್. ರಮೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮೇಶ್, ಮುದ್ದರಾಜಮ್ಮ, ನಿಜಾಮುದ್ದೀನ್, ಬಾಲಾಜಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. 

ಆಹಾರದಲ್ಲಿದೆ ಆರೋಗ್ಯ

ಶರೀರವನ್ನು ಆರೋಗ್ಯವಂತವಾಗಿಡುವಲ್ಲಿ ಆಹಾರದ ಪಾತ್ರ ಬಹಳ ಮುಖ್ಯ. ಪೌಷ್ಟಿಕ ಆಹಾರ ಸೇವನೆಯಿಂದೇ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ನಮ್ಮ ಆಹಾರಕ್ರಮದಲ್ಲಿ ಕೊಂಚ ವ್ಯತ್ಯಾಸವಾದರೂ ಸಾಕು ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಇತ್ತೀಚೆಗೆ ಬಹುತೇಕ ಮಂದಿ ತಮ್ಮ ಆಹಾರಗಳ ಕುರಿತು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಕೊರೊನಾ ನಂತ್ರ ಆಹಾರದ ಬಗ್ಗೆ ಜನರು ವಹಿಸುತ್ತಿರುವ ಕಾಳಜಿ ಎರಡು ಪಟ್ಟು ಹೆಚ್ಚಾಗಿದೆ. 

ಇನ್ನೇನು 2023 ಕಳೆದು 2024ನೇ ವರ್ಷಕ್ಕೆ ನಾವು ಕಾಲಿಡಲಿದ್ದೇವೆ. 2023 ನೇ ವರ್ಷದಲ್ಲಿ ಜನರು ಯಾವೆಲ್ಲ ಆಹಾರ (Food) ವನ್ನು ಹುಡುಕಿದ್ದಾರೆ ಎಂದು ಗೂಗಲ್ (Google) ಹೇಳಿದೆ. ಗೂಗಲ್ ಸರ್ಚ್ ಪ್ರಕಾರ, ಜನರು ರುಚಿಕರವಾದ ಆಹಾರದ ಜೊತೆಗೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ಹುಡುಕಿದ್ದಾರೆ. ಇದರ ಜೊತೆಗೆ ಗೂಗಲ್, 2023ರಲ್ಲಿ ಅತಿ ಹೆಚ್ಚು ಹುಡುಕಾಟ ಮಾಡಿದ ಆಹಾರಗಳ ಪಟ್ಟಿಯನ್ನು ಕೂಡ ತಯಾರಿಸಿದೆ. ಈ ಪಟ್ಟಿಯಲ್ಲಿ ಮಿಲೆಟ್ಸ್, ಅವಕಾಡೋ, ಮಟನ್ ರೊಗನ್ ಜೋಶ್, ಕಾಟಿ ರೋಲ್ಸ್ ಮುಂತಾದವುಗಳಿವೆ. ಗೂಗಲ್ ನಲ್ಲಿ ಜನರು ಸರ್ಚ್ ಮಾಡಿದ ರೀತಿಯಿಂದ ಈಗ ಜನರು ರುಚಿಕರವಾದ ಆಹಾರದ ಜೊತೆಗೆ ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರವನ್ನೂ ಇಷ್ಟಪಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಚಿಕನ್ ತೊಳೆದು ಬಳಸಬೇಕಾ? ಬೇಡ್ವೋ? ಗೊಂದಲಕ್ಕೆ ಹಾಕಿ ಬ್ರೇಕ್!

ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಏನೇನಿವೆ ಗೊತ್ತಾ? : ರಾಗಿ ಆರೋಗ್ಯಕರ ಆಹಾರ ಧಾನ್ಯಗಳಲ್ಲಿ ಒಂದಾಗಿದೆ. ರಾಗಿಯಲ್ಲಿ ಬಾಜ್ರಾ, ಕೋದ್ರಾ, ಕುಟ್ಕಿ ಮುಂತಾದ ಬಗೆಯ ರಾಗಿಗಳಿರುತ್ತವೆ. ಇವೆಲ್ಲವೂ ಆರೋಗ್ಯಕ್ಕೆ ಉತ್ತಮವಾಗಿವೆ ಮತ್ತು ಪೌಷ್ಟಿಕವೂ ಆಗಿದೆ. ಇದರಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್, ಮಿನರಲ್, ಫೈಬರ್ ಮುಂತಾದ ಪೋಷಕ ತತ್ವಗಳಿವೆ. ಈ ಎಲ್ಲ ಗುಣಗಳನ್ನು ಹೊಂದಿರುವ ರಾಗಿ ನಮ್ಮ ಶರೀರವನ್ನು ಸ್ವಸ್ಥವಾಗಿಡಲು ಸಹಕಾರಿಯಾಗಿದೆ. ರಾಗಿಯನ್ನು ನಮ್ಮ ನಿತ್ಯದ ಜೀವನದ ಆಹಾರದಲ್ಲಿ ಅಳವಡಿಸಿಕೊಂಡರೆ ಇದು ನಮ್ಮನ್ನು ಶಕ್ತಿಯುತವಾಗಿ, ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸುತ್ತದೆ. ಗೂಗಲ್ ಬಿಡಿಗಡೆಮಾಡಿರುವ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ರಾಗಿ ಅಗ್ರಸ್ಥಾನದಲ್ಲಿದೆ.

ಮಲಗೋ ಭಂಗಿಯಲ್ಲೇ ಇದೆ ಆರೋಗ್ಯ, ನಿಮ್ಮ ಮಲಗೋ ಭಂಗಿ ಸರಿಯಾಯೋ, ತಪ್ಪಾ ಚೆಕ್ ಮಾಡ್ಕೊಳ್ಳಿ!

ಈ ಹಣ್ಣುಗಳನ್ನು ಹೆಚ್ಚು ಹುಡುಕಲಾಗಿದೆ : ಅವಾಕಾಡೋ ಹಣ್ಣಿನಲ್ಲಿ ಹೆಚ್ಚು ಪೌಷ್ಟಿಕಾಂಶಗಳಿವೆ, ಆದ್ದರಿಂದ ಇದು ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಈ ಹಣ್ಣಿನಲ್ಲಿ ಆರೋಗ್ಯಕರ ಫ್ಯಾಟ್, ವಿಟಮಿನ್, ಮಿನರಲ್ಸ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿವೆ. ಇದರಲ್ಲಿರುವ ಒಮೆಗಾ3 ಫ್ಯಾಟಿ ಎಸಿಡ್ ಹೃದಯದ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಅವಾಕಾಡೋ ಸೇವನೆಯಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ ಮತ್ತು ಇದು ಮೂಳೆ ಹಾಗೂ ಕಣ್ಣುಗಳಿಗೆ ಒಳ್ಳೆಯದಾಗಿದೆ. ಅವಾಕಾಡೋವನ್ನು ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಜನರು ಕೂಡ ಗೂಗಲ್ ನಲ್ಲಿ ಇದನ್ನು ಹೆಚ್ಚು ಸರ್ಚ್ ಮಾಡಿದ್ದಾರೆ. ಗೂಗಲ್ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಅವಾಕಾಡೋ ಎರಡನೇ ಸ್ಥಾನದಲ್ಲಿದೆ.

ಮಟನ್ ರೋಗನ್ ಜೋಶ್ ಮತ್ತು ಕಾಥಿ ರೋಲ್ ಎರಡೂ ಹೆಚ್ಚು ರುಚಿಕರ ಮತ್ತು ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಮಟನ್ ರೋಗನ್ ನಲ್ಲಿ ಮಟನ್ ಪ್ರೊಟೀನ್ ಮತ್ತು ಅವಶ್ಯಕ ಪೋಷಕಾಂಶ ಇದೆ. ಕಾಥಿ ರೋಲ್ ನಲ್ಲಿ ಪನೀರ್, ಚಿಕನ್ ಮತ್ತು ಇನ್ನಿತರ ಕೆಲವು ತರಕಾರಿಗಳಿರುತ್ತವೆ. ಇವು ಪ್ರೋಟೀನ್ ಗಳಿಂದ ಕೂಡಿರುತ್ತವೆ. ಇವು ಕೂಡ ಗೂಗಲ್ ಹೆಲ್ದಿ ಫುಡ್ ಪಟ್ಟಿಯಲ್ಲಿ ಸೇರಿಕೊಂಡಿವೆ.

click me!