ಶ್ರೀಗಳ ಮಾರ್ಗದರ್ಶನದಲ್ಲಿ ಅನೇಕ ಧಾರ್ಮಿಕ ಕೆಲಸ ಮಾಡಿರುವೆ:ಸೋಮಣ್ಣ

By Kannadaprabha News  |  First Published Dec 13, 2023, 9:30 AM IST

ನಾನು ಬೆಂಗಳೂರಿಗೆ 1969-70 ರಲ್ಲಿ ಬಂದಾಗ ನನಗೆ ಹತ್ತಾರು ವರ್ಷಗಳ ಕಾಲ ಆಶ್ರಯ ನೀಡಿದ್ದು ತಿಗಳ ಸಮುದಾಯ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.


 ತುಮಕೂರು :  ನಾನು ಬೆಂಗಳೂರಿಗೆ 1969-70 ರಲ್ಲಿ ಬಂದಾಗ ನನಗೆ ಹತ್ತಾರು ವರ್ಷಗಳ ಕಾಲ ಆಶ್ರಯ ನೀಡಿದ್ದು ತಿಗಳ ಸಮುದಾಯ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದ ಹನುಮಂತಪುರದ ಶ್ರೀಕೋಟೆ ಕಲ್ಲಾಪುರದಮ್ಮ ಸಮಿತಿ ವತಿಯಿಂದ ಕಾರ್ತಿಕ ಮಾಸದ ಕೊನೆಯ ದಿನ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Tap to resize

Latest Videos

ಇಂದಿಗೂ ನನ್ನ ಅವರ ನಡುವೆ ಒಳ್ಳೆಯ ಸಂಬಂಧವಿದೆ. ತಮಗಿರುವ ಒಂದು ಎಕರೆ, ಅರ್ಧ ಎಕರೆ ಯಲ್ಲಿಯೇ ಬೆವರು ಸುರಿಸಿ, ದುಡಿದು ಬದುಕುವ ಶ್ರಮಜೀವಿ ಸಮುದಾಯ. ಈ ದೇವಾಲಯವನ್ನು ನೋಡಿದರೆ ನನಗೆ ಆನಂದ ಆಗುತ್ತದೆ. ತುಮಕೂರಿನ ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ ರಾಜಕಾರಣಕ್ಕೆ ಬರುವ ಮುಂಚಿನಿಂದಲೂ ನನಗೆ ಪರಿಚಯ. ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ದಿಸೆಯಿಂದ ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ. ಒಳ್ಳೆಯ ಕೆಲಸಗಳಿಗೆ ಬೆನ್ನುತಟ್ಟುತಿದ್ದ ಶ್ರೀಗಳು ಮಾರ್ಗದರ್ಶನದಲ್ಲಿ ಹಲವಾರು ಧಾರ್ಮಿಕ ಕೆಲಸಗಳನ್ನು ಮಾಡಿದ್ದೇನೆ ಎಂದು ಗೌರವದಿಂದ ನುಡಿದರು.

ಕಾರ್ತಿಕ ಮಾಸ ಶ್ರೇಷ್ಠವಾದ ಮಾಸ. ಒಂದರಿಂದ ಮತ್ತೊಂದು ದೀಪ ಹತ್ತಿಸುವ ಮೂಲಕ ನಮ್ಮಲ್ಲಿರುವ ದೇಷ ಅಸೂಯೆಗಳನ್ನು ಹೋಗಲಾಡಿಸಲು ಒಳ್ಳೆಯ ಮಾರ್ಗ. ಕೋಟೆ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಲಕ್ಷ ದೀಪೋತ್ಸವದ ಜೊತೆಗೆ, ಸಹ ಪಂಕ್ತಿಭೋಜನ ಸಹ ಬಹಳ ಪ್ರಸಿದ್ಧಿ ಪಡೆದಿದೆ. ಈ ಕಾರ್ಯಕ್ರಮದಲ್ಲಿ ಹಿರಿಯರು, ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿರುವುದನ್ನು ನೋಡಿದರೆ, ನಿಮ್ಮಂದ ಕಲಿಯುವಂತಹದ್ದು ಬಹಳಷ್ಟಿದೆ ಎಂದು ವಿ.ಸೋಮಣ್ಣ ನುಡಿದರು

ರಾಜಕಾರಣ ಎಲ್ಲಿ, ಹೇಗೆ ಎಂಬುದು ತೀರ್ಮಾನವಾಗಿಲ್ಲ. 1999 ರಲ್ಲಿ ಬೆಂಗಳೂರು ನಗರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಿನ್ನಿಪೇಟೆ ಕ್ಷೇತ್ರದಲ್ಲಿ ನಿಂತಾಗ ಕೆಲವರು ನಿಲ್ಲುವುದು ಬೇಡ ಎಂದಿದ್ದರು. ಆದರೆ ಸಿದ್ದಗಂಗಾ ಶ್ರೀಗಳು ಮತ್ತು ಆದಿಚುಂಚನಗಿರಿ ಶ್ರೀಗಳು ನೀನು ಮಾಡಿರುವ ಕೆಲಸಗಳಿಗೆ ಇದೊಂದು ಪರೀಕ್ಷೆ ಸ್ಪರ್ಧೆ ಮಾಡು ಎಂದು ಅಶೀರ್ವಾದ ಮಾಡಿದ್ದರು. ಕಾಂಗ್ರೆಸ್‌ನ ಪಾಂಚಜನ್ಯ ಯಾತ್ರೆಯ ಅಲೆಯ ನಡುವೆಯೂ 36 ಸಾವಿರ ಅಂತರದಿಂದ ಗೆಲುವಾಯಿತು. ಕಾಲ ಎಲ್ಲವನ್ನು ತೀರ್ಮಾನಿಸಲಿದೆ ಎಂದರು.

ಈ ವೇಳೆ ಈ ವೇಳೆ ತಿಗಳ ಸಮುದಾಯದ ಯಜಮಾನರಾದ ಹನುಮಂತರಾಜು, ಅಗ್ನಿ ತಿಗಳ ಜನಾಂಗದ ಅಧ್ಯಕ್ಷ ಡಿ. ಕುಂಬಿನರಸಯ್ಯ, ಉಪಾಧ್ಯಕ್ಷ ಟಿ.ಎಲ್. ಕುಂಭಯ್ಯ,ಕಾರ್ಯದರ್ಶಿ ಎಸ್. ಶಿವಣ್ಣ, ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಎ.ಶ್ರೀನಿವಾಸ್,ರವೀಶ್ ಜಹಂಗೀರ್, ರಕ್ಷಿತ, ಸತ್ಯಮಂಗಲ ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.

click me!