ಧಾರವಾಡದಲ್ಲಿ ಮಳೆಗೆ ಮನೆಗೋಡೆ ಕುಸಿತ: ಗಾಯಾಳುಗಳನ್ನ ವಿಚಾರಿಸಿದ ತಹಶೀಲ್ದಾರ್

By Govindaraj SFirst Published Sep 14, 2022, 1:04 PM IST
Highlights

ಕಳೆದ 10 ದಿನಗಳಿಂದ ಸುರಿಯುತ್ತಿರುವ ಭಾರಿ‌ ಮಳೆಗೆ‌ ಧಾರವಾಡ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಹೌದು! ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಎರಡು ಮನೆಗಳು ಕುಸಿದ ಪರಿಣಾಮ ಒಂದೇ ಕುಟುಂಬದ ಐವರು ಗಾಯಗೊಂಡಿದ್ದಾರೆ. 

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಸೆ.14): ಕಳೆದ 10 ದಿನಗಳಿಂದ ಸುರಿಯುತ್ತಿರುವ ಭಾರಿ‌ ಮಳೆಗೆ‌ ಧಾರವಾಡ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಹೌದು! ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಎರಡು ಮನೆಗಳು ಕುಸಿದ ಪರಿಣಾಮ ಒಂದೇ ಕುಟುಂಬದ ಐವರು ಗಾಯಗೊಂಡಿದ್ದಾರೆ. ಇನ್ನು ಈ ಗಾಯಾಳುಗಳನ್ನ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಏನಿದು ಘಟನೆ: ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಿನ್ನೆ (ಮಂಗಳವಾರ) ರಾತ್ರಿ ರುದ್ರಪ್ಪ ಮೇಲಿನಮನಿ ಎಂಬುವವರ ಮನೆ ಅತಿಯಾಸ ಮಳೆಯಿಂದಾಗಿ ಕುಸಿದು ಬಿದ್ದು, ತಾಯಿ ಹಾಗೂ ನಾಲ್ಕು ಜನ ಹೆಣ್ಣು ಮಕ್ಕಳು ಗಾಯಗೊಂಡಿದ್ದು, ಅಕ್ಕ ಪಕ್ಕದ ಮನೆಯವರ ನೆರವಿನಿಂದ ನಾಲ್ಕು ಜೀವಗಳು ಬದುಕುಳಿದಿವೆ. ತಡಕೋಡ ಗ್ರಾಮದ ಗಾಯಾಳುಗಳಾದ ಲಕ್ಷ್ಮಿ ರುದ್ರಪ್ಪ ಮೇಲಿನಮನಿ, ದೀಪಾ ಮೇಲಿನಮನಿ (15), ನಂದಾ ಮೇಲಿನಮನಿ (13), ಸಂಗೀತಾ ಮೇಲಿನಮನಿ (11), ಶ್ರಾವಣಿ ಮೇಲಿನಮನಿ (9) ಒಟ್ಟು ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಹುಬ್ಬಳ್ಳಿ-ಧಾರವಾಡ: ನಿರಂತರ ಮಳೆಗೆ ಮತ್ತೆ ಪ್ರವಾಹದ ಭೀತಿ..!

ಅಕ್ಕ ಪಕ್ಕದ ಜನರೆಲ್ಲರೂ ಸೇರಿ ಕುಟುಂಬಸ್ಥರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ .ಇನ್ನು ಸ್ಥಳಕ್ಕೆ ಧಾರವಾಡ ತಹಶೀಲ್ದಾರ್ ಸಂತೋಷ್ ಹಿರೇಮಠ ಭೇಟಿ ನೀಡಿ ಪರಿಶಿಲನೆ ನಡೆಸಿ ಗಾಯಗೊಂಡವರ ಆರೋಗ್ಯವನ್ನ ವಿಚಾರಿಸಿದ್ದಾರೆ. ಜೊತೆಗೆ ಅವರ ಮನೆಯ ಹಾನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮುತವರ್ಜಿ ವಹಿಸಿ ಎಲ್ಲೆಲ್ಲಿ ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮನೆಗಳು ಹಾನಿಯಾಗಿದೆ. ಅವುಗಳ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನೇರವಾಗಿ ತಹಶೀಲ್ದಾರ್ ಜೊತೆ ಸಂಪರ್ಕದಲ್ಲಿದ್ದು, ಆಯಾ ತಾಲೂಕಿನ ಬಗ್ಗೆ  ಮಾಹಿತಿಯನ್ನ ಪಡೆದುಕೊಂಡು ಖಡಕ್ ಆಗಿ ಸೂಚನೆಯನ್ನ ಕೊಟ್ಟಿದ್ದಾರೆ. 

Karnataka Rains: ಮಳೆ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗದ ಭೀತಿ..!

ಅಲ್ಲದೇ ಆಯಾ ಗ್ರಾಮಗಳಲ್ಲಿ ಪಿಡಿಓಗಳು, ಮತ್ತು ಗ್ರಾಮ ಲೆಕ್ಕಾಧಿಕಾರಿಗಳು, ರೆವಿನ್ಯೂ ಇನ್ಸ್‌ಪೆಕ್ಟರ್ ಅಧಿಕಾರಿಗಳು, ಇಂಜಿನಿಯರ್‌ಗಳು ಸೇರಿಕೊಂಡು ಮನೆಗಳ ಹಾನಿಯ ಬಗ್ಗೆ ಮಾಹಿತಿಯನ್ನ ಸಂಗ್ರಹ ಮಾಡಿಕೊಳ್ಳಬೇಕು. ಜೊತೆಗೆ ಅರ್ಹ ಫಲಾನುಭವಿಗಳಿಗೆ ಮನೆಗಳನ್ನ ಕೊಡುವಲ್ಲಿ ಹಿರಿಯ ಅಧಿಕಾರಿಗಳು ಮಾರ್ಗದರ್ಶನ ಮಾಡುತ್ತಾರೆ. ಅದರಂತೆ ಎಬಿಸಿ ಕ್ಯಾಟಗರಿಯಲ್ಲಿ ಮನೆಗಳನ್ನ ಹಾಕಿ ಆದಷ್ಟು ಬೇಗ ಅರ್ಹ ಫಲಾನುಭವಿಗಳಿಗೆ ಮನೆಗಳನ್ನ ನೀಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹಗಲಿರುಳು ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ತಹಶೀಲ್ದಾರ್ ಸಂತೋಷ್ ಪಾಟೀಲ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ‌ ಗಾಯಾಳುಗಳನ್ನ ವಿಚಾರಿಸಿ ಸೂಕ್ತ ಚಿಕಿತ್ಸೆಯನ್ನ ಕೊಡಿಸುತ್ತಿದ್ದಾರೆ. 

click me!