ಮಕ್ಕಳನ್ನ ಕಿಡ್ಯಾಪ್ ಮಾಡಿ ಹತ್ಯೆ ಮಾಡುವ ಗುಂಪೊಂದು ಬಂದಿದೆ. ವಿದೇಶದಿಂದ ಬಂದಿರುವ ಈ ಗುಂಪು ಮಕ್ಕಳನ್ನ ಟಾರ್ಗೆಟ್ ಮಾಡಿ ಆಪರೇಟ್ ಮಾಡ್ತಿದೆ ಅನ್ನೋ ರೀತಿಯಲ್ಲಿ ವೀಡಿಯೋಗಳು ಹರಿದಾಡ್ತಿದ್ದು, ಇಂತಹ ಯಾವುದೇ ವೀಡಿಯೋಗಳನ್ನ ಸರ್ಕ್ಯುಲೆಟ್ ಮಾಡಬಾರದು ಎಂದು ಗದಗ ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಗದಗ (ಸೆ.14): ಮಕ್ಕಳನ್ನ ಕಿಡ್ಯಾಪ್ ಮಾಡಿ ಹತ್ಯೆ ಮಾಡುವ ಗುಂಪೊಂದು ಬಂದಿದೆ. ವಿದೇಶದಿಂದ ಬಂದಿರುವ ಈ ಗುಂಪು ಮಕ್ಕಳನ್ನ ಟಾರ್ಗೆಟ್ ಮಾಡಿ ಆಪರೇಟ್ ಮಾಡ್ತಿದೆ ಅನ್ನೋ ರೀತಿಯಲ್ಲಿ ವೀಡಿಯೋಗಳು ಹರಿದಾಡ್ತಿದ್ದು, ಇಂತಹ ಯಾವುದೇ ವೀಡಿಯೋಗಳನ್ನ ಸರ್ಕ್ಯುಲೆಟ್ ಮಾಡಬಾರದು ಎಂದು ಗದಗ ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಈ ಬಗ್ಗೆ ವೀಡಿಯೋ ಮಾಹಿತಿ ನೀಡಿದ ಅವರು, ಇತ್ತೀಚೆಗೆ ಮಕ್ಕಳ ಕಳ್ಳರ ವೀಡಿಯೋ ಎಂದು ಬಿಂಬಿಸುವ ವೀಡಿಯೋಗಳನ್ನ ಹರಿಬಿಡಲಾಗ್ತಿದೆ. ಇದರಿಂದಾಗಿ ಸಂದೇಹದ ಹಿನ್ನೆಲೆಯಲ್ಲಿ ಜನರನ್ನ ಹಡಿದು ಥಳಿಸುವ ಪ್ರಕರಣ ಬೆಳಕಿಗೆ ಬಂದಿವೆ. ಆದರೆ ಗದಗ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಪ್ರಕರಣಗಳು ದಾಖಲಾಗಿಲ್ಲ. ಸಂದೇಹ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಯಾರೇ ಆದರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.
undefined
ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸಿ: ಹೊರಟ್ಟಿ
ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಆತಂಕ ಇಲ್ಲ: ಗದಗ ತಾಲೂಕಿನ ಲಕ್ಕುಂಡಿಯಲ್ಲಿ ನಿನ್ನೆ (ಮಂಗಳವಾರ) ಮಕ್ಕಳ ಕಳ್ಳ ಅಂತ ಓರ್ವ ವ್ಯಕ್ತಿಯನ್ನ ಸ್ಥಳೀಯರು ಹಿಡಿದಿದ್ದರು. ಆದರೆ ಕೊಲ್ಕತ್ತಾ ಮೂಲದ ವ್ಯಕ್ತಿ ಸಿಕ್ಕಿದ್ದ. ಆತ ಮಕ್ಕಳಿಗೆ ಚಾಕೊಲೇಟೆ ಕೊಡಿಸಿದ್ದ ಎಂಬ ಕಾರಣಕ್ಕೆ ಸ್ಥಳೀಯರು ಆತನನ್ನ ಹಿಡಿದು ಥಳಿಸಿದ್ದರು. ವಿಚಾರಣೆ ನಡೆಸಿದಾಗ ಆತ ಮಕ್ಕಳ ಕಳ್ಳ ಅಲ್ಲ ಅನ್ನೋದು ಗೊತ್ತಾಗಿದೆ. ಪಿಕ್ ಪ್ಯಾಕೆಟ್ ಕಳ್ಳತನ ಮಾಡುವವನ ಮೇಲೆ ಅನುಮಾನ ಇದೆ. ಹೀಗಾಗಿ ಆತನನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಅನುಮಾನ ಮೂಡಿಸುವ ವ್ಯಕ್ತಿಗಳು ಕಂಡುಬಂದ್ರೆ 11ಗೆ ಕರೆ ಮಾಡಿ: ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಹಲ್ಲೆ ಮಾಡುವ ಅಥವಾ ಥಳಿಸುವುದರ ಬದಲು ಪೊಲೀಸರಿಗೆ ಮಾಹಿತಿ ನೀಡಿ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಲಿದ್ದಾರೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಮಕ್ಕಳ ಕಳ್ಳರೆಂದು ತಪ್ಪು ತಿಳಿದು 4 ಸಾಧುಗಳನ್ನು ಬರ್ಬರವಾಗಿ ಥಳಿಸಿದ ಗ್ರಾಮಸ್ಥರು: ನಾಲ್ವರು ಸಾಧುಗಳನ್ನು ಗ್ರಾಮಸ್ಥರು ಅಮಾನುಷವಾಗಿ ಥಳಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವಾಂಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನಗಳಿಗೆ ಭೇಟಿ ನೀಡಲು ಉತ್ತರ ಪ್ರದೇಶದಿಂದ ಬಂದ ನಾಲ್ವರು ಸಾಧುಗಳನ್ನು ಅಲ್ಲಿನ ಗ್ರಾಮಸ್ಥರು ಥಳಿಸಿದ್ದಾರೆ. ಮಕ್ಕಳನ್ನು ಅಪಹರಿಸಲು ಬಂದಿರುವ ಕಳ್ಳರು ಎಂದು ಗ್ರಾಮಸ್ಥರು ಭಾವಿಸಿದ್ದಾರೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಸನ್ಯಾಸಿಗಳು ಮಥುರಾದಿಂದ ಬಂದಿದ್ದರು ಮತ್ತು ಪಂಢರಪುರದ ದೇವಸ್ಥಾನ ಸೇರಿ ಸಾಂಗ್ಲಿ ಜಿಲ್ಲೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಬೇಕಿತ್ತು. ಈ ಹಿನ್ನೆಲೆ ಸನ್ಯಾಸಿಗಳು ರಾತ್ರಿ ಆ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದರು. ಮರುದಿನ ಬೆಳಗ್ಗೆ, ಸನ್ಯಾಸಿಗಳು ಗ್ರಾಮದಿಂದ ಹೊರಡುವಾಗ, ಅವರು ಸಹಾಯಕ್ಕಾಗಿ ಒಬ್ಬ ಹುಡುಗನನ್ನು ಕೇಳಿದರು ಎಂದು ಹೇಳಲಾಗಿದೆ.
ರೋಣ ಕೆರೆ ಭರ್ತಿ: ಯಾವುದೇ ಸಂದರ್ಭದಲ್ಲೂ ಕೆರೆ ಕೋಡಿ ಹರಿಯುವ ಸಾಧ್ಯತೆ
ಮೂಲಗಳ ಪ್ರಕಾರ, ಸಾಧುಗಳು ಹುಡುಗನಿಂದ ಮಾರ್ಗದ ದಿಕ್ಕಿನ ಬಗ್ಗೆ ಕೇಳುತ್ತಿದ್ದರು. ಈ ಮಧ್ಯೆ, ಅವರ ಗುರುತನ್ನು ತಪ್ಪಾಗಿ ಅರ್ಥೈಸಿಕೊಂಡ ಗ್ರಾಮಸ್ಥರು ವಾಗ್ವಾದವನ್ನು ಪ್ರಾರಂಭಿಸಿದರು ಮತ್ತು ನಂತರ ಅವರನ್ನು ದೊಣ್ಣೆಗಳಿಂದ ಥಳಿಸಿದ್ದಾರೆ. ಗಲಾಟೆಯ ನಂತರ ಅವರ ಗುರುತು ಪತ್ತೆಯಾಯಿತು ಮತ್ತು ಸತ್ಯ ಬಹಿರಂಗವಾಯಿತು ಎಂದೂ ತಿಳಿದುಬಂದಿದೆ. ಸನ್ಯಾಸಿಗಳು ಗ್ರಾಮಕ್ಕೆ ಭೇಟಿ ನೀಡುವ ತಮ್ಮ ಪ್ರಮುಖ ಉದ್ದೇಶದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು ಮತ್ತು ಇದನ್ನು ಸಾಬೀತು ಮಾಡಲು ತಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸಿದರು. ನಂತರ ಸಂಪೂರ್ಣ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ಅಹಿತಕರ ಘಟನೆಯನ್ನು ತಡೆದಿದ್ದಾರೆ. ಸಾಧುಗಳು ನಿಜವಾಗಿಯೂ ಉತ್ತರ ಪ್ರದೇಶದ `ಅಖಾಡಾ' ಸದಸ್ಯರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.