ಉಗ್ರರನ್ನು ಕಾಂಗ್ರೆಸ್ ಸರ್ಕಾರ ಪೋಷಿಸುತ್ತಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೆಟ್ಟಹುಳುಗಳು ಹೊರ ಬರುತ್ತಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆರೋಪಿಸಿದ್ದಾರೆ.
ಧಾರವಾಡ (ಜು.20) : ಉಗ್ರರನ್ನು ಕಾಂಗ್ರೆಸ್ ಸರ್ಕಾರ ಪೋಷಿಸುತ್ತಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೆಟ್ಟಹುಳುಗಳು ಹೊರ ಬರುತ್ತಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಸಿಬಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದು ಶ್ಲಾಘನೀಯ. ಅವರ ಬಳಿ ಜೀವಂತ ಬಾಂಬ್ ಸೇರಿ ಅನೇಕ ವಸ್ತುಗಳು ಸಿಕ್ಕಿವೆ. ಸುಲ್ತಾನಪಾಳ್ಯದಲ್ಲಿ ಇವರು ವಾಸವಾಗಿದ್ದು, ಕಾಂಗ್ರೆಸ್ ಸರ್ಕಾರ ಬಂದ ನಂತರ ಹಾವು, ಚೇಳುಗಳು ಇನ್ನೂ ಹೊರಗೆ ಬರುತ್ತವೆ ಎಂದ ಅವರು, ಎಲ್‌ಇಟಿ ಸಂಘಟನೆ ಮಾತ್ರವಲ್ಲ ಎಲ್ಲ ಸಂಘಟನೆ ಸಕ್ರಿಯ ಆಗುತ್ತವೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಹರ್ಷ ಕೊಲೆ ಆಯಿತು. ಕೊಲೆ ಆರೋಪಿಗಳು ಜೈಲಿನಲ್ಲಿ ಫೋನ್ ನಲ್ಲಿ ಮಾತನಾಡುತ್ತ ಆನಂದವಾಗಿದ್ದರು. ಇದೀಗ ಸಿಕ್ಕ ಶಂಕಿತರು ಅವರೊಂದಿಗೆ ಸಂಪರ್ಕದಲ್ಲಿದ್ದರೆಂಬ ಮಾಹಿತಿ ಬರುತ್ತಿದೆ. ಜೈಲಿನಲ್ಲಿ ಉಗ್ರರು, ಪಾಕಿಸ್ತಾನಿಗಳು, ಕೊಲೆಗಡುಕರು ಇದ್ದಾರೆ. ಮುಸ್ಲಿಂ ಭೂಗತ ವ್ಯಕ್ತಿಗಳಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಈ ಎಲ್ಲ ಕೃತ್ಯಗಳಾಗುತ್ತಿವೆ. ಇದಕ್ಕೆ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ಸಹ ಕಾರಣ ಎಂದು ಮುತಾಲಿಕ ಹೇಳಿದರು.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಿಂದಿನ ದಾಖಲೆ ಹೊರತೆಗೆಯಲಿ. ಮಲೆನಾಡಿನಲ್ಲಿ ವ್ಯವಸ್ಥಿತವಾಗಿ ಯೋಜನೆಗಳು ನಡೆಯುತ್ತಿವೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಉಗ್ರವಾದಿಗಳಿದ್ದಾರೆ. ಬಾಂಗ್ಲಾ, ಅಪಘಾನಿಸ್ತಾನಿಗಳಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ, ಹಳೆ ಹುಬ್ಬಳ್ಳಿ, ಮೈಸೂರ ಘಟನೆಗಳೆಲ್ಲ ಉಗ್ರ ಕೃತ್ಯಗಳೇ ಹೊರತು ಮತ್ತೇನು. ರಾಜಕಾರಣಿಗಳು ಕೇವಲ ಅಧಿಕಾರ ದಾಹದಲ್ಲಿದ್ದಾರೆ. ಆ ಮೂಲಕ ಜನರ ಬಲಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆಜೆಸ್ಟಿಕ್‌ನ ಬಸ್, ರೈಲ್ವೆ ನಿಲ್ದಾಣ ಜನಸಂದಣಿ ಹೆಚ್ಚಿರುವ ಕಡೆ ಸ್ಫೋಟಕ್ಕೆ ಉಗ್ರರು ಸಂಚು?