ಹುಲಿ, ಕೋತಿ ಬಳಿಕ ಚಾಮರಾಜನಗರದಲ್ಲಿ ಚಿರತೆ ಸಾವು: ವಿಷಪ್ರಾಶನ ಶಂಕೆ!

Published : Jul 11, 2025, 07:35 PM IST
Chamarajanagar Leopard found dead

ಸಾರಾಂಶ

ಚಾಮರಾಜನಗರ ಜಿಲ್ಲೆಯಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಕರು ಮತ್ತು ನಾಯಿ ಮೃತದೇಹಗಳು ಸಹ ಪತ್ತೆಯಾಗಿದ್ದು, ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಹುಲಿ ಮತ್ತು ಕೋತಿಗಳ ಹತ್ಯೆಯೂ ನಡೆದಿತ್ತು.

ವರದಿ : ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ: ಜಿಲ್ಲೆಯಲ್ಲಿ ವನ್ಯಪ್ರಾಣಿಗಳಿಗಿಲ್ವಾ ರಕ್ಷಣೆ ಎಂಬ ಪ್ರಶ್ನೆ ಉದ್ಭವವಾಗಿದೆ. ಕಾರಣ 5 ಹುಲಿಗಳಿಗೆ ವಿಷಪ್ರಾಶಾನ ಮಾಡಿ ಹತ್ಯೆ ಮಾಡಿದ್ದಾಯ್ತು. 20 ಕ್ಕು ಹೆಚ್ಚು ಕೋತಿಗಳಿಗೆ ವಿಷವಿಕ್ಕಿ ಕೊಂದಿದ್ದಾಯ್ತು.ಇದೀಗ ಚಿರತೆಯೊಂದು ಅನುಮಾನಸ್ಪದವಾಗಿ ಮೃತಪಟ್ಟಿದ್ದು ಇದಕ್ಕೂ ಸಹ ವಿಷ ಹಾಕಿ ಕೊಲ್ಲಲಾಗಿದೆ ಎಂಬ ಶಂಕೆ ವ್ಯಕ್ಯವಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತ ಪ್ರದೇಶ, ಎರಡು ವನ್ಯಧಾಮಗಳಿವೆ. ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಆನೆ ಚಿರತೆಗಳಿರುವ ಜಿಲ್ಲೆ ಅಂದ್ರೆ ಅದು ಚಾಮರಾಜನಗರ. ಅರಣ್ಯದಂಚಿನಲ್ಲಿ ಸಮರ್ಪಕ ಆನೆಕಂದಕ, ಸೋಲಾರ್ ಬೇಲಿ, ರೈಲ್ವೇ ತಡೆಗೋಡೆ ಇಲ್ಲದೆ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ ಕೆಲ ದಿನಗಳ ಹಿಂದೆ ಮಲೆಮಹದೇಶ್ವರ ವನ್ಯಧಾಮದ ಮೀಣ್ಯಂ ಅರಣ್ಯದಲ್ಲಿ ಹಸು ಬೇಟೆಯಾಡಿದ ಕಾರಣಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು 5 ಹುಲಿಗಳಿಗೆ ವಿಷಪ್ರಾಶಾನ ಮಾಡಿ ಹತ್ಯೆ ಮಾಡಲಾಗಿತ್ತು.

ಇನ್ನು ಬಂಡೀಪುರ ವ್ಯಾಪ್ತಿಯ ಪಾರ್ವತಿ ಬೆಟ್ಟದ ಬಳಿ 20 ಕ್ಕು ಹೆಚ್ಚು ಕೋತಿಗಳಿಗೆ ವಿಷ ಉಣಿಸಿ ಕೊಲ್ಲಲಾಗಿತ್ತು ಇದೀಗ ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದ ಪ್ರಾದೇಶಿಕ ವಲಯದ ಕೊತ್ತಲವಾಡಿ ಬಳಿ ಚಿರತೆಯ ಕಳೇಬರ ಪತ್ತೆಯಾಗಿದೆ. ಕರಿಕಲ್ಲು ಕ್ವಾರಿಯಲ್ಲಿ ಸುಮಾರು 5 ರಿಂದ ಆರು ವರ್ಷದ ಗಂಡು ಚಿರತೆಯ ಶವ ಕಂಡುಬಂದಿದೆ. ಚಿರತೆ ಕಳೇಬರದ ಪಕ್ಕದಲ್ಲೇ ಒಂದು ಕರು ಹಾಗು ಒಂದು ನಾಯಿಯ ಮೃತದೇಹಗಳು ಕಂಡು ಬಂದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಕರುವನ್ನು ಚಿರತೆ ಬೇಟೆಯಾಡಿದ್ದು ಕರುವಿನ ಮೃತದೇಹಕ್ಕೆ ವಿಷಹಾಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನು ತಿಂದ ಚಿರತೆ ಹಾಗು ನಾಯಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಚಿರತೆ ಅನುಮಾನಸ್ಪದವಾಗಿ ಮೃತಪಟ್ಟಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ

ಕೊತ್ತಲವಾಡಿ ಬಳಿ ಗೋಮಾಳಗಳಿವೆ. ಕರಿಕಲ್ಲು ಗಣಿಗಳು ಹೆಚ್ಚಾಗಿವೆ. ಗಣಿತ್ಯಾಜ್ಯದ ಕಲ್ಲುಗಳನ್ನು ಸುರಿಯುವ ಪ್ರದೇಶಗಳು ನಿರ್ಜನವಾಗಿದ್ದು ಹುಲಿ ಚಿರತೆಯಂತಹ ಕಾಡುಪ್ರಾಣಿಗಳು ವಾಸಕ್ಕೆ ಯೋಗ್ಯವಾಗಿದೆ. ಹಾಗಾಗಿಯೇ ಈ ಭಾಗದಲ್ಲಿ ಚಿರತೆಗಳ ಓಡಾಟ ತುಸು ಹೆಚ್ಚಾಗಿಯೇ ಇದೆ ಎನ್ನುತ್ತಾರೆ ಸ್ಥಳೀಯರ. 

ಮೃತ ಚಿರತೆ, ಕರು ಹಾಗು ನಾಯಿಯ ಅಂಗಾಂಶಗಳ ಮಾದರಿ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.ಪ್ರಯೋಗಾಲ ಹಾಗೂ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಚಿರತೆಯ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಇದೇನೆ ಇರಲಿ ವಿಶಪ್ರಾಶನದಿಂದ ವನ್ಯಪ್ರಾಣಿಗಳ ಹತ್ಯೆ ಪ್ರಕರಣಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್