ಶಿವಮೊಗ್ಗದಲ್ಲಿ ಗಗನಕ್ಕೇರಿದ ಭೂಮಿಯ ಬೆಲೆ: ರಿಯಲ್ ಎಸ್ಟೇಟ್ ಮಾಫಿಯಾದವರ ಹೊಡೆದಾಟ

Published : Jul 11, 2025, 07:18 PM ISTUpdated : Jul 12, 2025, 01:53 AM IST
Real Estate Fight

ಸಾರಾಂಶ

ಮಲೆನಾಡಿನ ಶಿವಮೊಗ್ಗದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು ರಿಯಲ್ ಎಸ್ಟೇಟ್ ಮಾಫಿಯಾ ಕುಳಗಳಿಗೆ ಕುತ್ತಿಗೆ ಮೇಲೆ ತಲೆ ನಿಲ್ಲುತ್ತಿಲ್ಲ. ಇದರ ಪರಿಣಾಮವೇ ಸಣ್ಣಪುಟ್ಟ ವಿಷಯಗಳಿಗೂ ಕಿರಿಕ್ ಮಾಡಿಕೊಂಡು ಬಡಿದಾಡುತ್ತಿದ್ದಾರೆ.

ಶಿವಮೊಗ್ಗ (ಜು.11): ಮಲೆನಾಡಿನ ಶಿವಮೊಗ್ಗದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು ರಿಯಲ್ ಎಸ್ಟೇಟ್ ಮಾಫಿಯಾ ಕುಳಗಳಿಗೆ ಕುತ್ತಿಗೆ ಮೇಲೆ ತಲೆ ನಿಲ್ಲುತ್ತಿಲ್ಲ. ಇದರ ಪರಿಣಾಮವೇ ಸಣ್ಣಪುಟ್ಟ ವಿಷಯಗಳಿಗೂ ಕಿರಿಕ್ ಮಾಡಿಕೊಂಡು ಬಡಿದಾಡುತ್ತಿದ್ದಾರೆ. ಮಲೆನಾಡಿನ ಶಿವಮೊಗ್ಗದಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ಕುಳಗಳ ದರ್ಪ ದೌರ್ಜನ್ಯ ಹೊಡೆದಾಟ ಬಡಿದಾಟಗಳಿಗೆ ಲೆಕ್ಕವೇ ಇಲ್ಲ. ಸಣ್ಣಪುಟ್ಟ ವ್ಯಕ್ತಿಗಳಂತೂ ಇವರ ಮುಂದೆ ಏನೇನು ಅಲ್ಲ. ಇವರಿಗೆ ಪೊಲೀಸ್ ,ಕೋರ್ಟ್ ಎಂಬುದು ಸರ್ವೇಸಾಮಾನ್ಯ. ಇಷ್ಟಕ್ಕೂ ಮಲೆನಾಡಿನ ಶಿವಮೊಗ್ಗದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ ಹಿನ್ನೆಲೆ ರಿಯಲ್ ಎಸ್ಟೇಟ್ ಮಾಫಿಯಾ ಎಲ್ಲೆಂದರಲ್ಲಿ ಲೇಔಟ್‌ಗಳನ್ನು ಮಾಡಿ ಭರ್ಜರಿ ಹಣ ಸಂಪಾದಿಸತೊಡಗಿದೆ.

ಕೋಟ್ಯಾಂತರ ರೂ ಹಣ ಕೈಗೆ ಸೇರುತ್ತಿದ್ದಂತೆ ರಿಯಲ್ ಎಸ್ಟೇಟ್ ನಡೆಸುವವರ ಹೆಗಲ ಮೇಲೆ ಕುತ್ತಿಗೆಗಳೇ ನಿಲ್ಲುತ್ತಿಲ್ಲ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಶಿವಮೊಗ್ಗದ ನವಲೆ ಬಳಿಯಲ್ಲಿ ಇರುವ ಭಾರ್ಗವಿ ಲೇಔಟ್ ನಲ್ಲಿ ಹೊಡೆದಾಟದ ಘಟನೆ ಎಂದು ನಡೆದಿದೆ. ಹೊಡೆದಾಟದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಘಟನೆಯ ನೈಜ್ಯತೆಯನ್ನು ಬಿಂಬಿಸುತ್ತಿವೆ. ಸಿಸಿ ಕ್ಯಾಮೆರಾದ ಈ ದೃಶ್ಯದಲ್ಲಿ ಕಾರೊಂದು ರಿವರ್ಸ್ ತೆಗೆದುಕೊಂಡು ಹೋಗಲು ಮುಂದಾಗುತ್ತದೆ ಇದೇ ಸಂದರ್ಭದಲ್ಲಿ ಜೀಪ್ ಒಂದು ಕಾರನ್ನು ಗುದ್ದುವಂತೆ ಸ್ಪೀಡ್ ಆಗಿ ಬಂದು ನಿಲ್ಲುತ್ತದೆ. ಜೀಪಿನಿಂದ ಕೆಳಗಿಳಿದ ಓರ್ವ ವ್ಯಕ್ತಿ ಕಾರಿನಲ್ಲಿದ್ದ ಚಾಲಕಿನ ಸ್ಥಾನದಲ್ಲಿದ್ದ ವ್ಯಕ್ತಿಯನ್ನು ಮುಷ್ಟಿ ಕಟ್ಟಿ ಹೊಡೆದು ಕೆಳಗೆ ಎಳೆಯುತ್ತಾನೆ. ಇಷ್ಟಕ್ಕೆ ಸುಮನಾಗದ ವ್ಯಕ್ತಿ ಜೀಪ್ನಿಂದ ಮನಬಂದಂತೆ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಹಲ್ಲೆ ಮಾಡುತ್ತಾನೆ.

ಈ ಹೊಡೆದಾಟದ ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ಶೆಡ್‌ನಂತಹ ರೂಮ್‌ನಲ್ಲಿ ಹೆಲ್ಮೆಟ್ ಧರಿಸಿದ ವ್ಯಕ್ತಿ ಮತ್ತೊಬ್ಬನ ಜೊತೆ ಬಂದು ಬಾಗಿಲು ತೆಗೆದು ಸಿಸಿ ಕ್ಯಾಮೆರಾಗಳ ದಿವ್ಯ ಕಿತ್ತೆಸೆದು ಹೋಗಿದ್ದಾರೆ. ಹೌದು ಸಣ್ಣ ಘಟನೆ ಎಂದರೆ ರಿವೆಂಜ್ ಪಡೆದ ರೀತಿ ಇದು. ಶಿವಮೊಗ್ಗದ ನವಲೇ ಸಮೀಪದ ಭಾರ್ಗವಿ ಲೇಔಟ್ ಮಾಲೀಕ ಅನಿಲ್ ಪಾಟೀಲ್ ಎಂಬಾತನೆ ಕಾರಿನಲ್ಲಿದ್ದ ವ್ಯಕ್ತಿ ಆತನ ಮೇಲೆ ಜಗದೀಶ್ ಎಂಬತಾ ಹಾಕಿ ಸ್ಟಿಕ್‌ನಿಂದ ಹೊಡೆದು ಹಲ್ಲೆ ಮಾಡಿದ್ದ. ಇಷ್ಟಕ್ಕೂ ಹಾಕಿ ಸ್ಟಿಕ್‌ನಿಂದ ಅನಿಲ್ ಪಾಟಿಲ್ ಒದೆ ತಿಂದಿದ್ದು ಯಾಕೆ ಎಂದರೆ ಹಿಂದಿನ ದಿನ ಇದೇ ಮನೆ ಬಾಗಿಲಲ್ಲಿ ಆಟೋ ಒಂದನ್ನು ನಿಲ್ಲಿಸಿಕೊಂಡಿದ್ದ ರಾಮಚಂದ್ರನ್ ಎಂಬ ವ್ಯಕ್ತಿ ಗಂಟೆಗಟ್ಟಲೆ ಕಾಲ ಅಲ್ಲಿಯ ಕುಳಿತು ಮಧ್ಯ ಸೇವನೆ ಮಾಡಿದ್ದ.

ಇದನ್ನು ಅನಿಲ್ ಪಾಟೀಲ್ ಪ್ರಶಸ್ತಿದರಲ್ಲದೆ ಆತ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈತಿದ್ದಂತೆ ಕೆನ್ನೆಯ ಮೇಲೊಂದು ಹೊಡೆದು ಪೊಲೀಸರಿಗೆ ಕರೆಯಬೇಕೇ ಇಲ್ಲ ಹೋಗುತ್ತೀಯ ಎಂದು ಗದರಿಸಿ ಕಳಿಸಿ ಕೊಟ್ಟಿದ್ದರು. ಇದಾದ ಬಳಿಕ ಮಾರನೇ ದಿನ ಮಧ್ಯಾಹ್ನದ ವೇಳೆ ಬಂದ ರಾಮಚಂದ್ರನ್ ಅವರ ಅಳಿಯ ಜಗದೀಶ್ ಮಾವನ ಮೇಲಿನ ಹಲ್ಲೆಗೆ ರಿವೆಂಜ್ ತೀರಿಸಿಕೊಳ್ಳಲು ಮುಂದಾಗಿದ್ದ. ಅನಿಲ್ ಪಾಟೀಲ್ ಮತ್ತು ಜಗದೀಶ್ ಇಬ್ಬರು ಕೂಡ ರಿಯಲ್ ಎಸ್ಟೇಟ್ ವ್ಯವಹಾರ ಆಗಿದ್ದು. ಹಲ್ಲೆಗೊಳಗಾದ ಅನಿಲ್ ಪಾಟೀಲ್ ಇದೀಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರು ನೀಡಿದ ದೂರಿನ ಹಿನ್ನೆಲೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿ ಜಗದೀಶ್ ಹಾಗೂ ಆತನ ಸ್ನೇಹಿತ ಮೋಹನ್ ಎಂಬುವರು ತಲೆಮರೆಸಿಕೊಂಡಿದ್ದಾರೆ. ಒಟ್ಟಿನಲ್ಲಿ ಬೀದಿಯಲ್ಲಿ ಹೋಗೋ ಮಾರಿ ಮನೆಗೆ ಕರೆದು ಕೊಂಡಂತೆ ಎಂಬಂತೆ ಈ ಘಟನೆ ನಡೆದಿದ್ದು ಹಲ್ಲೆಗೆ ಪ್ರತಿ ಹಲ್ಲೆ ಎಂಬುದು ಮತ್ತಷ್ಟು ಸೇಡು ವೈಷಮ್ಯಕ್ಕೆ ಕಾರಣವಾಗಿದೆ. ಇದೀಗ ಪೊಲೀಸರೇನೋ ಹಲ್ಲೆ ಮಾಡಿದ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಆದರೆ ರಿಯಲ್ ಎಸ್ಟೇಟ್ ಮಾಫಿಯಾ ಮೂಲಕ ಹಣ ಗಳಿಸಿರುವ ವ್ಯಕ್ತಿಗಳ ನಡುವಿನ ಗಲಾಟೆ ಎಂಬುವುದು ಮತ್ತಷ್ಟು ಸರಣಿ ಗಲಾಟೆಗಳಿಗೆ ಕಾರಣವಾಗುವುದಂತೂ ಸತ್ಯ.

PREV
Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ