ಸನಾತನ ಸಂಸ್ಕೃತಿಯು ನೂರಾರು ವರ್ಷಗಳಿಂದ ದೇಶದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಹಿಂದೂ ಧರ್ಮದ ಅವನತಿಗೆ ನಮ್ಮ ನಡುವಿನ ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿದ್ದು ಜಾತಿ ಜಾತಿಗಳ ಮಧ್ಯ ವಿಷ ಬೀಜ ಬಿತ್ತಿ ಒಡೆದಾಳುವ ಹುನ್ನಾರ ನಡೆಯುತ್ತಿದೆ. ಇದಕ್ಕೆಲ್ಲ ಒಂದೇ ಉತ್ತರ ಸಂಘಟನೆ, ಸಂಘಟನಾತ್ಮಕವಾಗಿ ಹೋರಾಡಿದರೆ ಮಾತ್ರ ಎಲ್ಲ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದ ವಿಶ್ವ ಹಿಂದು ಪರಿಷತ್ ಬಜರಂಗದಳ ಕ್ಷೇತ್ರಿಯ ಧರ್ಮ ಪ್ರಸಾರ ಪ್ರಮುಖ ಸೂರ್ಯ ನಾರಾಯಣ್ ಜೀ
ರಟ್ಟೀಹಳ್ಳಿ(ಆ.29): ಪ್ರಸ್ತುತ ದಿನಗಳಲ್ಲಿ ಹಿಂದು ಸಮಾಜ ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹಿಂದೂಗಳು ಹಿಂದುಗಳಾಗಿಯೇ ಉಳಿಯಬೇಕಾದರೆ ಸಂಘಟನೆಯೊಂದೇ ಉತ್ತರ ಎಂದು ವಿಶ್ವ ಹಿಂದು ಪರಿಷತ್ ಬಜರಂಗದಳ ಕ್ಷೇತ್ರಿಯ ಧರ್ಮ ಪ್ರಸಾರ ಪ್ರಮುಖ ಸೂರ್ಯ ನಾರಾಯಣ್ ಜೀ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿಂದು ಪರಿಷತ್ ಬಜರಂಗದಳಕ್ಕೆ 60 ವರ್ಷ ಪೂರೈಸಿದ ಹಿನ್ನೆಲೆ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದರು.
undefined
ಗೃಹ ಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅತ್ತೆ!
ಸನಾತನ ಸಂಸ್ಕೃತಿಯು ನೂರಾರು ವರ್ಷಗಳಿಂದ ದೇಶದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಹಿಂದೂ ಧರ್ಮದ ಅವನತಿಗೆ ನಮ್ಮ ನಡುವಿನ ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿದ್ದು ಜಾತಿ ಜಾತಿಗಳ ಮಧ್ಯ ವಿಷ ಬೀಜ ಬಿತ್ತಿ ಒಡೆದಾಳುವ ಹುನ್ನಾರ ನಡೆಯುತ್ತಿದೆ. ಇದಕ್ಕೆಲ್ಲ ಒಂದೇ ಉತ್ತರ ಸಂಘಟನೆ, ಸಂಘಟನಾತ್ಮಕವಾಗಿ ಹೋರಾಡಿದರೆ ಮಾತ್ರ ಎಲ್ಲ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದರು.
ಕಳೆದ 60 ವರ್ಷಗಳಿಂದ ಲಕ್ಷಾಂತರ ಕುಟುಂಬಗಳು ಮತಾಂತರವಾದವರನ್ನು ಮರಳಿ ಮಾತೃಧರ್ಮಕ್ಕೆ ಕರೆ ತಂದ ಕೀರ್ತಿ ವಿಶ್ವ ಹಿಂದೂ ಪರಿಷತ್ ಬಜರಂಗದಳಕ್ಕೆ ಸಲ್ಲುತ್ತದೆ. ಲವ್ ಜಿಹಾದ, ಗೋ ಹತ್ಯ ತಡೆಯಲು ನಿರಂತರ ಹೋರಾಟ ಮಾಡಿ ಯುವಕರಲ್ಲಿ ದೇಶ ಭಕ್ತಿ ಧರ್ಮ ಕಾರ್ಯಗಳ ಬಗ್ಗೆ ಅರಿವು ಮೂಡಿಸಿ ಸೇವಾ, ಸುರಕ್ಷಾ, ಸಂಸ್ಕಾರ ನೀಡಿ ಅವರಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ದೇಶದ ಒಳಗೂ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯ ಚಟುವಟಿಕೆ ವಿಸ್ತರಿಸಿ ಧರ್ಮ ಜಾಗೃತಿ ಮೂಡಿಸುತ್ತಿದೆ. ಆದ್ದರಿಂದ ಯುವಕರು ಹಿಂದು ಸಂಘಟನೆಗಳ ಹೋರಾಟಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ ಕಬ್ಬಿಣಕಂತಿ ಮಠದ ಪೀಠಾಧಿಪತಿ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವವಚನ ನೀಡಿ ಪಾಲಕರು ತಮ್ಮ ಮಕ್ಕಳನ್ನು ರಾಧೆ ಕೃಷ್ಣರ ವೇಷ ಭೂಷಣ ಧರಿಸಿದರೆ ಸಾಲದು. ಕೃಷ್ಣನ ಬದುಕಿನ ಮೌಲ್ಯಗಳನ್ನು ಮಕ್ಕಳಲ್ಲಿ ಅಳವಡಿಸಿಕೊಳ್ಳುವಂತೆ ಕಾರ್ಯೋನ್ಮುಖವಾಗಿದ್ದೆ ಆದಲ್ಲಿ ಕಾರ್ಯಕ್ರಮದ ಸಾರ್ಥಕತೆಯಾಗುತ್ತದೆ ಎಂದರು.
ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ, ನೇಪಾಳ, ಭೂತಾನ ಸೇರಿದಂತೆ ಅನೇಕ ದೇಶಗಳಲ್ಲಿ ಅರಾಜಕತೆ ಸೃಷ್ಟಿಯಾಗಿ ಅವರ ಜೀವನವೇ ದುಸ್ತರವಾಗಿದೆ. ಆದರೆ ಭಾರತದಲ್ಲಿ 145 ಕೋಟಿ ಜನಸಂಖ್ಯೆ ಹೊಂದಿ ಅನೇಕ ಧರ್ಮದ ಜನರು ಸುಖ ಶಾಂತಿ ನೆಮ್ಮದಿಯಿಂದ ವಾಸಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಧರ್ಮ, ದೇಶ, ಸನಾತನ ಸಂಸ್ಕೃತಿಯ ಬಗ್ಗೆ ಆಲಸ್ಯ ಉಂಟಾಗಿದೆ. ಇಂತ ಬೆಳವಣಿಗೆ ಮುಂದಿನ ದಿನಗಳಲ್ಲಿ ನಮಗೆ ಮಾರಕ. ಕಾರಣ ಯುವಕರು ಧರ್ಮ ಜಾಗೃತಿ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಭಾರತದಲ್ಲಿರುವ ಮುಸ್ಲಿಂರೂ ಹಿಂದೂಗಳೇ: ವಚನಾನಂದ ಶ್ರೀ
ಇದೇ ಸಂದರ್ಭದಲ್ಲಿ ನೂರಾರು ಮಕ್ಕಳು ರಾಧೆ ಕೃಷ್ಣರ ವೇಷ ಭೂಷಣ ತೊಟ್ಟು ಗಮನ ಸೆಳೆದರು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರಿಯದರ್ಶಿನಿ ಪದವಿ ಕಾಲೇಜ್ ಪ್ರಾಚಾರ್ಯ ಎ.ಜಿ. ರಾಘವೇಂದ್ರ, ಉತ್ತರ ಪ್ರಾಂತ ಧರ್ಮ ಪ್ರಸಾರ ಪ್ರಮುಖ ಮಲ್ಲಿಕಾರ್ಜುನ ಸತ್ತಿಗೇರಿ, ಜಿಲ್ಲಾ ಉಪಾಧ್ಯಕ್ಷ ನಾಗರಾಜ ನರಸಾಪುರ, ಕಾರ್ಯದರ್ಶಿ ಅನಿಲ ಹಲವಾಗಲ, ಜಿಲ್ಲಾ ಸಂಯೋಜಕ ಕಿಟ್ಟಿ ಪಾಟೀಲ್, ರವಿ ಮುದ್ದಣ್ಣನವರ, ರುದ್ರೇಶ ಪ್ರಸಾಧಿಮಠ, ವಿನಾಯಕ ಕರ್ನೂಲ, ಮುತ್ತು ಬೆಣ್ಣಿ, ಆಕಾಶ ಪಾಟೀಲ, ನವೀನ ಮಾದರ, ಆಕಾಶ ಹುಲ್ಲತ್ತಿ, ಮಾತೃ ಶಕ್ತಿ ಪ್ರಮುಖ ಸುರಭಿ ನಾಡಿಗೇರ, ಸಂಜನಾ ರಟ್ಟೀಹಳ್ಳಿ, ದರ್ಶನ ಗಬ್ಬೂರ, ಪ್ರಶಾಂತ ಹಿತ್ತಲಮನಿ, ಬೀರೇಶ ಹೊಳಜೋಗಿ ಮುಂತಾದವರು ಇದ್ದರು.