ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಟಿಕೆಟ್ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ ಎಂದು ನಿರ್ಲಕ್ಷ್ಯ ತಾಳುವಂತಿಲ್ಲ. ಯಾಕೆಂದರೆ, ಯಾವುದೇ ಸಂದರ್ಭದಲ್ಲಿ ಖಾಸಗಿ ಬಸ್‌ಗಳಲ್ಲಿ ಟಿಕೆಟ್ ಪರಿಶೀಲನೆಗೆ ಚೆಕ್ಕಿಂಗ್‌ಗಳು ಬರಲಿದ್ದಾರೆ. ಅಷ್ಟೇ ಅಲ್ಲ ಬಸ್ ನಿರ್ವಾಹಕರನ್ನೂ ಟಿಕೆಟ್ ನೀಡಿಕೆ ಬಗ್ಗೆ ಪ್ರಶ್ನಿಸಲಿದ್ದಾರೆ.
ಮಂಗಳೂರು(ನ.29): ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಟಿಕೆಟ್ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ ಎಂದು ನಿರ್ಲಕ್ಷ್ಯ ತಾಳುವಂತಿಲ್ಲ. ಯಾಕೆಂದರೆ, ಯಾವುದೇ ಸಂದರ್ಭದಲ್ಲಿ ಖಾಸಗಿ ಬಸ್‌ಗಳಲ್ಲಿ ಟಿಕೆಟ್ ಪರಿಶೀಲನೆಗೆ ಚೆಕ್ಕಿಂಗ್‌ಗಳು ಬರಲಿದ್ದಾರೆ. ಅಷ್ಟೇ ಅಲ್ಲ ಬಸ್ ನಿರ್ವಾಹಕರನ್ನೂ ಟಿಕೆಟ್ ನೀಡಿಕೆ ಬಗ್ಗೆ ಪ್ರಶ್ನಿಸಲಿದ್ದಾರೆ.
ಕೆಎಸ್‌ಆರ್‌ಟಿಸಿ ಮಾದರಿಯಲ್ಲಿ ಖಾಸಗಿ ಬಸ್‌ಗಳಲ್ಲೂ ಈಗ ಚೆಕಿಂಗ್(ತಪಾಸಣೆ) ಕಾರ್ಯ ಆರಂಭಗೊಂಡಿದೆ. ಕಳೆದ ಫೆಬ್ರವರಿಯಲ್ಲೇ ಈ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು. ಈಗ ಎರಡು ತಿಂಗಳಿಂದ ಇದನ್ನು ಪ್ರಯೋಗಿಕವಾಗಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ.
undefined
ದಿಢೀರ್ ತಪಾಸಣೆ:
ಖಾಸಗಿ ಬಸ್‌ಗಳಲ್ಲಿ ಚೆಕಿಂಗ್ ವ್ಯವಸ್ಥೆಯನ್ನು ಪ್ರಸಕ್ತ 130 ರೂಟ್‌ಗಳ ಪೈಕಿ ಐದು ರೂಟ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಮುಂದೆ ಹಂತ ಹಂತವಾಗಿ ಎಲ್ಲ ರೂಟ್‌ಗಳಲ್ಲೂ ಈ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.
ಸ್ಟೇಟ್‌ಬ್ಯಾಂಕ್‌ನಿಂದ ಕೊಣಾಜೆ, ತಲಪಾಡಿ, ಉಳ್ಳಾಲ, ಅಡ್ಯಾರ್, ಮಂಗಳಾದೇವಿ ಮಾರ್ಗಗಳಲ್ಲಿ ಸಂಚರಿಸುವ ಸುಮಾರು 80 ಟ್ರಿಪ್‌ಗಳಲ್ಲಿ ಚೆಕಿಂಗ್ ನಡೆಯುತ್ತಿದೆ. ಬೆಳಗ್ಗೆ 6ರಿಂದ ರಾತ್ರಿ 11 ಗಂಟೆವರೆಗೂ ತಪಾಸಣೆ ಕಾರ್ಯ ನಡೆಸುತ್ತಾರೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಹಾಗೂ 2 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಎರಡು ಹಂತಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಮಂಗಳೂರು: ಕಟೀಲು ಮೇಳ ಸಂಚಾಲಕರಿಗೆ ಡಿಸಿ ಪತ್ರ.
ಖಾಸಗಿ ಬಸ್‌ಗಳ ಸುಗಮ ಸಂಚಾರಕ್ಕೆ ಹಾಗೂ ಸಮಯ ಪಾಲನೆಗೆ ಚಲೋ ಆ್ಯಪ್ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಚಲೋ ಸಂಸ್ಥೆಯ ಜೊತೆಗೆ ಖಾಸಗಿ ಬಸ್ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದ ಪ್ರಕಾರ ಚಲೋ ಸಂಸ್ಥೆಯ ಸುಮಾರು 50ಕ್ಕೂ ಅಧಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಅವರೇ ಚೆಕಿಂಗ್ ಕಾರ್ಯ ನಡೆಸುತ್ತಿದ್ದಾರೆ. ಇವರಲ್ಲಿ ಮಹಿಳಾ ಚೆಕಿಂಗ್ ಕೂಡ ಸೇರಿದ್ದಾರೆ. ಈ ರೀತಿ ಚೆಕಿಂಗ್ ನಡೆಸುವ ತಂಡದಲ್ಲಿ ಹೊರ ಜಿಲ್ಲೆಯವರೂ ಇದ್ದಾರೆ. ಈ ಚೆಕಿಂಗ್‌ಗಳಿಗೆ ಬಸ್ ಮಾಲೀಕರೇ ಸಂಬಳ ನೀಡುತ್ತಾರೆ. ಈ ಚೆಕಿಂಗ್‌ಗಳಿಗೆ ಯಾರ ಮುಲಾಜಿಗೂ ಒಳಗಾಗದೆ ಕಾರ್ಯನಿರ್ವಹಿಸಬೇಕು ಎನ್ನುವ ತಾಕೀತು ಮಾಡಲಾಗಿದೆ.
ಸೈನೈಡ್ ಮೋಹನ್‌ಗೆ 18ನೇ ಕೊಲೆ ಪ್ರಕರಣದಲ್ಲಿ ಮರಣ ದಂಡನೆ ತೀರ್ಪು..!
ಈ ಚೆಕಿಂಗ್‌ಗಳು ನಿರ್ದಿಷ್ಟಬಸ್ ಸ್ಟಾಪ್‌ಗಳಲ್ಲಿ ಬಸ್ ಏರುತ್ತಾರೆ. ಇವರು ಕಪ್ಪು ಬಣ್ಣದ ಪ್ಯಾಂಟ್ ಹಾಗೂ ನೀಲಿ ಶರ್ಟ್ ಸಮವಸ್ತ್ರ ಧಾರಿಗಳಾಗಿ ಬ್ಯಾಡ್ಜ್‌ನ್ನು ಧರಿಸಿರುತ್ತಾರೆ. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಟಿಕೆಟ್ ತಪಾಸಣೆ ನಡೆಸುತ್ತಾರೆ. ಆದರೆ ಸದ್ಯ ಪ್ರಯಾಣಿಕರಿಗೆ ಯಾವುದೇ ದಂಡ ವಿಧಿಸುವುದಿಲ್ಲ. ಟಿಕೆಟ್ ನೀಡಿದ ಬಗ್ಗೆ ನಿರ್ವಾಹಕರ ಟಿಕೆಟ್ ಮಿಷಿನ್‌ನಲ್ಲಿ ಪರಿಶೀಲನೆ ನಡೆಸುತ್ತಾರೆ. ಇದಕ್ಕಾಗಿ ಇವರಿಗೆ ನಿರ್ವಾಹಕನ ಟಿಕೆಟ್ ಮಿಷಿನ್‌ನ ಪಿನ್ ನಂಬರು ನೀಡಲಾಗಿದೆ. ಈ ಪಿನ್ ನಂಬರು ಬಳಸಿ ಅದುವರೆಗೆ ನೀಡಿದ ಟಿಕೆಟ್‌ಗಳ ಪ್ರಿಂಟ್ ತೆಗೆದು ತಾಳೆ ನೋಡುತ್ತಾರೆ. ಬಳಿಕ ಈ ಶೀಟ್‌ನ್ನು ಬಸ್ ಮಾಲೀಕರಿಗೆ ಹಸ್ತಾಂತರಿಸುತ್ತಾರೆ. ಇದೇ ವೇಳೆ ಚಾಲಕನ ನಡವಳಿಕೆ ಅಥವಾ ಪ್ರಯಾಣಿಕರಿಂದ ದೂರು ಬಂದರೆ, ಅದನ್ನು ಕೂಡ ಬಸ್ ಮಾಲೀಕರಿಗೆ ವರದಿ ಮಾಡುತ್ತಾರೆ.
ತಾಯಿ ಓದಲು ಹೇಳಿದ್ದಕ್ಕೆ 4ನೇ ತರಗತಿ ಬಾಲಕಿ ಆತ್ಮಹತ್ಯೆ
ನಿರ್ವಾಹಕರ ವಿರುದ್ಧ ಪದೇ ಪದೇ ದೂರು ಬಂದರೆ ಚೆಕಿಂಗ್ ವರದಿಯನ್ನು ಆಧರಿಸಿ ಬಸ್ ಮಾಲೀಕರಿಗೆ ಕ್ರಮ ಕೈಗೊಳ್ಳಲು ಸುಲಭವಾಗಿದೆ. ಅಲ್ಲದೆ ಪ್ರಯಾಣಿಕರು ಕೂಡ ಟಿಕೆಟ್ ತಪಾಸಣೆ ಮಾಡುತ್ತಾರೆ ಎಂಬ ಕಾರಣಕ್ಕೆ ಟಿಕೆಟ್ ಕೇಳಿ ಪಡೆಯುವ ಮನೋಭಾವ ಬೆಳೆಸುವಂತಾಗಿದೆ. ಇದರಿಂದಾಗಿ ಬಸ್ ಮಾಲೀಕರ ಆದಾಯವೂ ಜಾಸ್ತಿಯಾಗಲು ಕಾರಣವಾಗಿದೆ ಎನ್ನುತ್ತಾರೆ ಬಸ್ ಮಾಲೀಕರು.
ಖಾಸಗಿಯಲ್ಲೂ ದಂಡ ಹಾಕಬಹುದು
ಟಿಕೆಟ್ ರಹಿತ ಪ್ರಯಾಣಕ್ಕೆ ಪ್ರಯಾಣಿಕರಿಗೆ 500 ರು. ವರೆಗೆ ದಂಡ ಎಂದು ಸರ್ಕಾರಿ ಬಸ್‌ನಲ್ಲಿ ಎಚ್ಚರಿಕೆ ಫಲಕ ಓದಿರುತ್ತೇವೆ. ಆದರೆ ಇದು ಕೇವಲ ಸರ್ಕಾರಿ ಬಸ್‌ಗಳಿಗೆ ಮಾತ್ರವಲ್ಲ, ಖಾಸಗಿ ಬಸ್ ಪ್ರಯಾಣಕ್ಕೂ ಅನ್ವಯವಾಗುತ್ತದೆ ಎನ್ನುತ್ತಾರೆ ಬಸ್ ಮಾಲೀಕರು. ಮೋಟಾರು ವಾಹನ ಕಾಯ್ದೆಯಲ್ಲಿ ಎಲ್ಲಿಯೂ ಸರ್ಕಾರಿ ಬಸ್‌ಗೆ ಮಾತ್ರ ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ವಿಧಿಸುವುದು ಎಂದು ಹೇಳಿಲ್ಲ. ಮೋಟಾರು ವಾಹನ ಕಾಯ್ದೆ ಪ್ರಕಾರ ಅದು ಖಾಸಗಿ ಬಸ್‌ಗಳಿಗೂ ಅನ್ವಯವಾಗುತ್ತದೆ. ಪ್ರಸಕ್ತ ಟಿಕೆಟ್ ತಪಾಸಣೆ ನಡೆಸುವಾಗ ಟಿಕೆಟ್ ರಹಿತ ಪ್ರಯಾಣಿಕರಿದ್ದರೆ, ಅವರಿಗೆ ಸಾಕಷ್ಟುತಿಳಿವಳಿಕೆ ನೀಡುತ್ತೇವೆ. ಸದ್ಯ ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ವಿಧಿಸಲು ಮುಂದಾಗಿಲ್ಲ ಎನ್ನುತ್ತಾರೆ ಬಸ್ ಮಾಲೀಕರು.
ಮಂಗಳೂರು: ಈರುಳ್ಳಿ ರೇಟ್ ಕೇಳಿ ಮಸಾಲೆ ಅರೆಯಿರಿ!
ಖಾಸಗಿ ಬಸ್‌ಗಳಲ್ಲಿ ಚೆಕಿಂಗ್ ವ್ಯವಸ್ಥೆಯನ್ನು ಈಗ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದು ಯಶಸ್ವಿ ಕೂಡ ಆಗುತ್ತಿದೆ. ಇದರಿಂದ ಬಸ್ ಮಾಲೀಕರ ಆದಾಯದಲ್ಲಿ ಹೆಚ್ಚಳವಾಗಿದೆ. ಇದನ್ನು ಎಲ್ಲ ಖಾಸಗಿ ಬಸ್‌ಗಳಿಗೆ ವಿಸ್ತರಿಸುವ ಗುರಿ ಇದೆ ಎಂದು ದ.ಕ. ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳಿದ್ದಾರೆ.
-ಆತ್ಮಭೂಷಣ್