ಶಾಲೆ ಮಕ್ಕಳಿಂದ 10 ಸಾವಿರ ಬೀಜದುಂಡೆ ತಯಾರಿ

By Web Desk  |  First Published Jul 12, 2019, 9:51 AM IST

ಶ್ರೀ ಸಾಯಿ ಏಂಜಲ್ಸ್‌ ಶಾಲೆ ವಿದ್ಯಾರ್ಥಿಗಳು ಪ್ರಥಮ ಬಾರಿಗೆ 10 ಸಾವಿರ ಬೀಜದುಂಡೆಗಳನ್ನು ತಯಾರಿಸಿ, ಗಿಡಮರಗಳ ಬೆಳೆಸುವ ನಿಟ್ಟಿನಲ್ಲಿ ಅಳಿಲು ಸೇವೆಗೆ ಮುಂದಾಗಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿರುವ ಸೇವೆ ಎಂದು ಸಂಸ್ಥೆ ಮುಖ್ಯ ಪ್ರಾಚಾರ್ಯೆ ವಿಜಯಾ ನಾಗೇಶ್‌ ತಿಳಿಸಿದ್ದಾರೆ.


ಚಿಕ್ಕಮಗಳೂರು(ಜು.12): ಶ್ರೀ ಸಾಯಿ ಏಂಜಲ್ಸ್‌ ಶಾಲೆ ವಿದ್ಯಾರ್ಥಿಗಳು ಪ್ರಥಮ ಬಾರಿಗೆ 10 ಸಾವಿರ ಬೀಜದುಂಡೆಗಳನ್ನು ತಯಾರಿಸಿ, ಗಿಡಮರಗಳ ಬೆಳೆಸುವ ನಿಟ್ಟಿನಲ್ಲಿ ಅಳಿಲು ಸೇವೆಗೆ ಮುಂದಾಗಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿರುವ ಸೇವೆ ಎಂದು ಸಂಸ್ಥೆ ಮುಖ್ಯ ಪ್ರಾಚಾರ್ಯೆ ವಿಜಯಾ ನಾಗೇಶ್‌ ತಿಳಿಸಿದ್ದಾರೆ.

ಸಿರಿಗಾಪುರ ಶ್ರೀ ಸಾಯಿ ಏಂಜಲ್ಸ್‌ ಶಾಲಾ ಆವರಣದಲ್ಲಿ ಸ್ವಚ್ಚಾ ಟ್ರಸ್ಟ್‌ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಳೆದ 4 ದಿನಗಳಿಂದ 10 ಸಾವಿರ ಬೀಜದುಂಡೆ ತಯಾರಿಸುವ ಕಾರ್ಯದಲ್ಲಿ ತೊಡಗಿ, ಅನಂತರ ಅವರು ಮಾತನಾಡಿದರು.

Latest Videos

ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಸರಕ್ಕೆ ಪೂರಕವಾದ ಬೀಜದುಂಡೆ ತಯಾರಿಯಲ್ಲಿ ತೊಡಗಿದ್ದು, ನಿತ್ಯ 1 ಗಂಟೆಗಳ ಕಾಲ ಬಿದಿರು, ನೇರಳೆ ಹಾಗೂ ಶ್ರೀಗಂಧದ ಬೀಜಗಳನ್ನು ಹಾಕಿ ಮಣ್ಣಿನ ಉಂಡೆ ಕಟ್ಟಿದ್ದಾರೆ. ಆ ಮೂಲಕ ಪ್ರತಿಯೊಂದು ವಿದ್ಯಾರ್ಥಿಗಳು ತಮ್ಮ 10 ನಿಮಿಷದ ಸಮಯವನ್ನು ಈ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ ಎಂದರು.

ಬಂಡೀಪುರದಲ್ಲಿ ಸಸಿ ನೆಡಲು ಮುಂದಾದ ಸಂಯುಕ್ತಾ ಹೊರನಾಡು

undefined

ನಮ್ಮ ಶಾಲೆಯಲ್ಲೆ 25 ಹಸುಗಳನ್ನು ಸಾಕಿ ಪೋಷಿಸುತ್ತಿರುವುದರಿಂದ ಗೊಬ್ಬರಕ್ಕೆ ಹೆಚ್ಚು ಸಹಕಾರಿಯಾಗಿದೆ. ಇದರೊಂದಿಗೆ ಬೇವಿನಹಿಂಡಿ ಮತ್ತು ಕೆಮ್ಮಣ್ಣು ಮಿಶ್ರಮಾಡಿ ಸಾವಯವ ಬೀಜದುಂಡೆ ಮಾಡಲಾಗಿದೆ ಎಂದು ತಿಳಿಸಿದರು.

ವಲಯಾರಣ್ಯಾಧಿಕಾರಿ ಎಸ್‌.ಎಲ್‌. ಶಿಲ್ಪಾ, ಪ್ರಾಚಾರ್ಯೆ ಯಾಮಿನಿ ಸವೂರ್‌, ಸಂಸ್ಥೆ ಜಂಟಿ ಕಾರ್ಯದರ್ಶಿ ಎಂ.ಜೆ. ಕಾರ್ತಿಕ್‌, ರವಿ ನಾಯಕ್‌ ಹಾಗೂ ಶಿಕ್ಷಕರು ಹಾಜರಿದ್ದರು.

click me!