ಅರಣ್ಯ ಸಂರಕ್ಷಣಾಧಿಕಾರಿ ಸೇರಿ ಮೂವರ ವಿರುದ್ಧ ಎಫ್‌ಐಆರ್‌ಗೆ ಆದೇಶ

By Web DeskFirst Published Jul 12, 2019, 9:18 AM IST
Highlights

ಅಕ್ರಮ ನೇಮಕಾತಿ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿ 3 ಮಂದಿ ವಿರುದ್ಧ ಎಫ್‌ಐಆರ್‌ಗೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬುಧವಾರ ಆದೇಶಿಸಿದೆ. ಅಕ್ರಮ ನೇಮಕಾತಿ ಸಂಬಂಧ ಸಾಮಾಜಿಕ ಹೋರಾಟಗಾರ ಶಿವಕುಮಾರ್‌ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿ ನ್ಯಾಯಾಲಯ ಈ ಆದೇಶ ನೀಡಿದೆ.

ಭದ್ರಾವತಿ (ಜು.12): ಅಕ್ರಮ ನೇಮಕಾತಿಗೆ ಸಂಬಂಧಿ​ಸಿದಂತೆ ಅರಣ್ಯಾ​ಧಿಕಾರಿಗಳ ವಿರುದ್ಧ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್‌ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆದಿದೆ. ದೂರಿಗೆ ಸಂಬಂಧಿ​ಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬುಧವಾರ ಆದೇಶಿಸಿದೆ.

ಶಿವಮೊಗ್ಗ ವೃತ್ತದ ಪಶ್ಚಿಮ ಘಟ್ಟಅರಣ್ಯ ಯೋಜನೆಯಡಿಯಲ್ಲಿ ಉಪ ಅರಣ್ಯ ಸಂರಕ್ಷಣಾ​ಕಾರಿಗಳ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ ತಾತ್ಕಾಲಿಕ ಹುದ್ದೆಗೆ ಆಯ್ಕೆಯಾದವರನ್ನು ಅಕ್ರಮವಾಗಿ ಕಾಯಂ ಹುದ್ದೆಗೆ ನೇಮಕಾತಿ ಮಾಡಿರುವ ವಿಚಾರಕ್ಕೆ ಸಂಬಂ​ಧಿಸಿದಂತೆ ಶಿವಕುಮಾರ್‌ ಅವರು ಇಲಾಖೆಯ ಉನ್ನತ ಅಧಿ​ಕಾರಿಗಳಿಗೆ ಸೂಕ್ತ ದಾಖಲೆಗಳ ಮೂಲಕ ಮನವಿ ಸಲ್ಲಿಸಿದ್ದರು.

ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಣ್ಯ ಪಡೆ ಮುಖ್ಯಸ್ಥರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ​ಧಿಕಾರಿ ಪುನಾಟಿ ಶ್ರೀಧರ್‌, ಶಿವಮೊಗ್ಗ ವೃತ್ತ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾ​ಧಿಕಾರಿ ಕೆ.ಎಚ್‌. ನಾಗರಾಜ್‌ ಮತ್ತು ಡಾಟಾ ಎಂಟ್ರಿ ಆಪರೇಟರ್‌ ಸಿ.ಝಡ್‌. ಹಸೀನಾ ಬಾನು ವಿರುದ್ಧ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾ​ಧೀಶರ ನ್ಯಾಯಾಲಯದಲ್ಲಿ ಮೇ 8ರಂದು ದೂರು ಸಲ್ಲಿಸಿದ್ದರು.

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕಾತಿ ವಜಾ

ದೂರಿನ ವಿಚಾರಣೆ ನಡೆಸಿರುವ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹದಳದ ಶಿವಮೊಗ್ಗ ಪೊಲೀಸ್‌ ಉಪಾಧೀಕ್ಷಕರಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅ.24ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

Close

click me!