'ಸಲಾಂ ಬಾಬಣ್ಣ': ಮಂಗಳೂರಿನ ಸೌಹಾರ್ದತೆಯ ಸ್ಟೋರಿ ವೈರಲ್‌

By Kannadaprabha News  |  First Published Sep 26, 2019, 10:25 AM IST

ಮಂಗಳೂರಿನ ಕೋಮು ಸೌಹಾರ್ದದ ಸ್ಟೋರಿಯೊಂದು ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಇತ್ತೀಚೆಗೆ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟವಿಟ್ಲದ ಶಾಮಿಯಾನ ಅಂಗಡಿ ಕೆಲಸದ ಯುವಕ ಹಾಗೂ ಅಂಗಡಿ ಮಾಲಕನ ಆತ್ಮೀಯತೆ, ಸೌಹಾರ್ದ ಸಂಬಂಧದ ಬಗ್ಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.


ಮಂಗಳೂರು(ಸೆ.26): ಇತ್ತೀಚೆಗೆ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟವಿಟ್ಲದ ಶಾಮಿಯಾನ ಅಂಗಡಿ ಕೆಲಸದ ಯುವಕ ಹಾಗೂ ಅಂಗಡಿ ಮಾಲಕನ ಆತ್ಮೀಯತೆ, ಸೌಹಾರ್ದ ಸಂಬಂಧದ ಬಗ್ಗೆ ಮೆಚ್ಚುಗೆಯ ಮಾತುಗಳ ಬರಹ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಬಂಟ್ವಾಳದ  ವಿಟ್ಲ ಸಮೀಪದ ಪ್ರಿಯಾ ಶಾಮಿಯಾನದ ಮಾಲೀಕ ಹಾಗೂ ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ.(ಬಾಬಣ್ಣ) ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೊಡಂಗಾಯಿ ನಿವಾಸಿ ಎಂ.ಕೆ.ಉಮರ್‌ ಫಾರೂಕ್‌ ಎಂಬವರು ಇತ್ತೀಚೆಗೆ ಅಡ್ಯನಡ್ಕ ಸಮೀಪದಲ್ಲಿ ಮನೆಯ ಮಹಡಿಯಿಂದ ಆಕಸ್ಮಿಕವಾಗಿ ಕೆಳಗಡೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಬಾಬಣ್ಣ ಅವರು ಫಾರೂಕ್‌ ಅವರ ಕೊನೆಯುಸಿರವರೆಗೂ ಅವರ ಜತೆಯಲ್ಲಿ ಆಸ್ಪತ್ರೆಯಲ್ಲಿದ್ದರು.

Tap to resize

Latest Videos

ಗಣೇಶ-ಮೊಹರಂ ಒಂದೇ ರಸ್ತೆಯಲ್ಲಿ: ಸೌಹಾರ್ದತೆ ಬೆರೆತಿದೆ ಭಾರತೀಯನ ರಕ್ತದಲ್ಲಿ!

ಆಸ್ಪತ್ರೆಯ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು. ಅದಲ್ಲದೆ, ಬಾಬಣ್ಣ ಅವರು ಫಾರೂಕ್‌ ಅವರ ಜೀವ ಉಳಿಸಲು ಕೊನೆಯವರೆಗೂ ನಡೆಸಿರುವ ಪ್ರಯತ್ನ ಹಾಗೂ ಕಣ್ಣೀರು ಹಾಕಿದ ಸನ್ನಿವೇಶಗಳ ಬರಹವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಮಾನವೀಯ ಸಂಬಂಧ, ಸೌಹಾರ್ದದ ಸಂದೇಶವಾಗಿ ಹರಿದಾಡುತ್ತಿದೆ.

ಬಿಲ್‌ ಪಾವತಿಸಲು ಬಿಡಲಿಲ್ಲ:

ಫಾರೂಕ್‌ ಮೂರು ದಿನಗಳ ಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭ ಜೊತೆಗಿದ್ದ ನಾವು ಕೆಲಕಾಲ ಅಲ್ಲಿಂದ ತೆರಳಿದ್ದರೂ ಬಾಬಣ್ಣ ಮಾತ್ರ ಅಲ್ಲಿಯೇ ತಂಗಿದ್ದರು. ಫಾರೂಕ್‌ ಅವರನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಅವರು ಮಾಡಿದ್ದರು. ಚಿಕಿತ್ಸೆ ಫಲಿಸದೆ ಫಾರೂಕ್‌ ಕೊನೆಯುಸಿರೆಳೆದ ಸಂದರ್ಭ ಚಿಕಿತ್ಸಾ ವೆಚ್ಚ ಒಟ್ಟು 2.80 ಲಕ್ಷ ರು.ನ್ನು ಬಾಬಣ್ಣ ಅವರೇ ಪಾವತಿಸಿದ್ದರು. ಅಲ್ಲದೆ ಸುಮಾರು 25 ಸಾವಿರ ರೂ. ಇತರ ಖರ್ಚು ಕೂಡಾ ಮಾಡಿದ್ದಾರೆ.

ಸಂಬಳ ಸಹಿತ ರಜೆ:

ಬಾಬಣ್ಣ ಅವರ ಬಳಿ ನಾಲ್ಕೈದು ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಇಬ್ಬರು ಮುಸ್ಲಿಮ್‌ ಯುವಕರು. ಶಾಮಿಯಾನದ ಕೆಲಸ ಇಲ್ಲದ ಬಿಡುವು ಸಂದರ್ಭದಲ್ಲಿ ಬಾಬಣ್ಣ ಅವರ ತೋಟದಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ರಮಝಾನ್‌ ತಿಂಗಳಲ್ಲಿ ಇವರಿಗೆ ಸಂಬಳ ಸಹಿತ ರಜೆ ನೀಡುತ್ತಿದ್ದರು. ಅದಲ್ಲದೆ, ಫಾರೂಕ್‌ ಅವರ ವಿವಾಹ ಸಂದರ್ಭ ಬಾಬಣ್ಣ ಆರ್ಥಿಕವಾಗಿ ತುಂಬಾ ಸಹಾಯ ಮಾಡಿದ್ದಾರೆ.

ಮಂಗಳೂರಿನಲ್ಲಿ ಮಳೆ ನಿರೀಕ್ಷೆ, ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

ಧರ್ಮಾಂಧತೆಯ ಅಮಲಿನಲ್ಲಿ ದ್ವೇಷ ಬಿತ್ತುವವರಿಗೆ, ಜಾತಿ ಧರ್ಮದ ಹೆಸರಿನಲ್ಲಿ ಶತ್ರುಗಳಾದ ಎಲ್ಲರಿಗೂ ಫಾರೂಕ್‌ ಮತ್ತು ಬಾಬಣ್ಣರ ಸ್ನೇಹ ಮಾದರಿಯಾಗಲಿ. ನಿಮ್ಮ ಮಾದರಿ ಮಾನವೀಯಯ ಸಂಬಂಧಕ್ಕೆ ಲಾಕೋ ಸಲಾಂ ಬಾಬಣ್ಣ’ ಎನ್ನುವ ಬರಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!

click me!